Advertisement
ಕಳೆದ ಸುಮಾರು ಆರೇಳು ವರ್ಷಗಳ ಹಿಂದೆ ಬಂಟ್ವಾಳದ ಹಳೆಯ ತಾ| ಕಚೇರಿ ಯನ್ನು ಕೆಡವಿ ತಾಲೂಕು ಆಡಳಿತ ಸೌಧ(ಮಿನಿ ವಿಧಾನಸೌಧ) ನಿರ್ಮಿಸಲಾಗಿದ್ದು, ಈ ಸಂದರ್ಭದಲ್ಲಿ ತಾಲೂಕು ಕಚೇರಿಯ ಕಾರ್ಯಾಚರಣೆಗೆ ಕಂದಾಯ ಇಲಾಖೆಗೆ ಸೇರಿದ ಪಕ್ಕದ ನಿವೇಶನದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಲಾಗಿತ್ತು. ಬಳಿಕ ತಾಲೂಕು ಕಚೇರಿ ಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ಶೆಡ್‌ಗೆ ಬಾಗಿಲು ಹಾಕಲಾಗಿದೆ.
Related Articles
Advertisement
ಕಂದಾಯ ಇಲಾಖೆಯ ಈ ಪ್ರದೇಶ ವನ್ನು ಸುಮ್ಮನೇ ಪಾಳು ಬಿಡುವುದಕ್ಕಿಂತ ಶೆಡ್ ತೆರವು ಮಾಡಿ ಸಂಪೂರ್ಣ ಶುಚಿಗೊಳಿಸಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಬಹುದು. ಆ ಪ್ರದೇಶವನ್ನೂ ಆಡಳಿತ ಸೌಧದ ಆವರಣಕ್ಕೆ ಸೇರಿಸಿ ಕಚೇರಿ ಕೆಲಸಕ್ಕೆ ಆಗಮಿಸುವ ಮಂದಿಯ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬಹುದು.
ಇಲ್ಲದೇ ಇದ್ದರೆ ಅದಕ್ಕೆ ಪ್ರತ್ಯೇಕ ಆವರಣ ಗೋಡೆ ನಿರ್ಮಿಸಿ ಬಿ.ಸಿ.ರೋಡ್ ಗೆ ಬರುವ ಮಂದಿಗೆ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬಹುದು. ಮುಂದೆ ಅಗತ್ಯ ಬಿದ್ದಾಗ ಕಂದಾಯ ಇಲಾಖೆಯ ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಈ ರೀತಿ ಮಾಡಿದಾಗ ಬಿ.ಸಿ.ರೋಡ್‌ನ ಪಾರ್ಕಿಂಗ್ ಒತ್ತಡ ಕಡಿಮೆಯಾಗುವ ಜತೆಗೆ ನಗರ ಸೌಂದರ್ಯಕ್ಕೂ ಹೊಸರೂಪ ಬರಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಡಿಸಿ ಪರಿಶೀಲನೆ
ಕೆಲವು ತಿಂಗಳ ಹಿಂದೆ ದ.ಕ.ಡಿಸಿ ತಾ| ಕಚೇರಿಗೆ ಅಹವಾಲು ಸ್ವೀಕಾರಕ್ಕೆ ಬಂದ ಸಂದರ್ಭದಲ್ಲಿ ಈ ಕುರಿತು ಅವರ ಬಳಿ ಪ್ರಸ್ತಾವಿಸಲಾಗಿದ್ದು, ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಯಾವ ರೀತಿ ಮಾಡಬಹುದು ಎಂಬುದನ್ನು ಚರ್ಚಿಸಿ ನಿರ್ಧರಿಸುವುದಾಗಿ ತಿಳಿಸಿದ್ದರು. ಕೆಲವು ದಿನಗಳ ಹಿಂದೆ 2ನೇ ಬಾರಿ ಜಿಲ್ಲಾಧಿಕಾರಿಗಳು ಅಹವಾಲು ಸ್ವೀಕಾರಕ್ಕೆ ಬಂದಾಗ ಮತ್ತೆ ಅದೇ ವಿಚಾರವನ್ನು ಗಮನಕ್ಕೆ ತರಲಾಗಿದ್ದು, ಕ್ರಮದ ಭರವಸೆಯನ್ನೂ ನೀಡಿದ್ದಾರೆ. ಆದರೆ ಈ ವರೆಗೆ ಪ್ರಗತಿಯಾಗಿಲ್ಲ.