Advertisement

ಬಿ.ಸಿ.ರೋಡ್‌ ನಗರ ಕೇಂದ್ರ ಸರ್ವಿಸ್‌ ರಸ್ತೆ  ದುರವಸ್ಥೆ

04:05 PM Apr 26, 2017 | |

ಬಂಟ್ವಾಳ: ಬಿ.ಸಿ.ರೋಡ್‌ ನಗರ ಕೇಂದ್ರದ ಸರ್ವಿಸ್‌ ರಸ್ತೆಯ ದುರವಸ್ಥೆಗೆ ಸುಮಾರು ಎರಡು ದಶಕಗಳ ಇತಿಹಾಸ ಇದೆ.  ಬಿ.ಸಿ.ರೋಡ್‌ ಸಂಚಾರ ಅಡಚಣೆ ಮತ್ತು ಟ್ರಾಫಿಕ್‌ ಜಾಮ್‌ಗಾಗಿ ನಿರಂತರ ಸುದ್ದಿಯಲ್ಲಿತ್ತು. ಪ್ರಸ್ತುತ ಸರ್ವಿಸ್‌ ರಸ್ತೆ ಅಧಃಪತನ ವಿಚಾರವಾಗಿ ಸದ್ದಿನಲ್ಲಿದೆ.

Advertisement

ಸರ್ವಿಸ್‌ ರಸ್ತೆಯನ್ನು ಅಗೆದು ಹಾಕಿ ಕೆಲವು ವರ್ಷಗಳು ಕಳೆದಿವೆ. ಕಳೆದ ಮಳೆಗಾಲದಲ್ಲಿ ರಸ್ತೆಯಲ್ಲಿ ಹೊಂಡ ನಿರ್ಮಾಣ ಆಗಿತ್ತು. ಕಲ್ಲು ತಂದು ಹಾಕಿದ ಸಾರ್ವಜನಿಕರು ಮಳೆಗಾಲದಲ್ಲಿ ಹೇಗೋ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.ಈ ಮಳೆಗಾಲದಲ್ಲಿ ಸರ್ವಿಸ್‌ ರಸ್ತೆಯಲ್ಲಿ  ಕೆರೆ ನಿರ್ಮಾಣ ಆದೀತು ಎಂಬ ಭಯ ಸ್ಥಳೀಯ ಅಂಗಡಿ ಮುಂಗಟ್ಟಿನ ಜನರಲ್ಲಿದೆ. ಕಾಯಕಲ್ಪ ಆಗದೇ ಹೋದರೆ ಬಿ.ಸಿ.ರೋಡ್‌ನ‌ಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಮತ್ತೆ ಉಲ್ಬಣಿಸಬಹುದು.

ನಿರಂತರ ಅಡಚಣೆ
ರಾಷ್ಟೀಯ ಹೆದ್ದಾರಿ ಅಗಲ ಕಿರಿದಾಗಿದ್ದ ಕಾರಣಕ್ಕೆ ಬಿ.ಸಿ. ರೋಡ್‌   ನಿರಂತರ ಅಡಚಣೆ ಎದುರಿಸುತ್ತಿತ್ತು. ಅನಂತರ ಫ್ಲೆ$çಓವರ್‌ ನಿರ್ಮಾಣವಾಯಿತು. ಸಮಸ್ಯೆ ನಿವಾರಣೆ ಆಯಿತು ಎಂದಾಗ ಇಲ್ಲಿನ ರೈಲ್ವೆ ಮೇಲ್ಸೇತುವೆ  ವಾಹನ ಸಂಚಾರ ಅಡಚಣೆ ಉಂಟಾಗಿ ನಿರಂತರ ಎರಡು ವರ್ಷಗಳ ಸತಾಯಿಸುವಿಕೆಯ ಬಳಿಕ ಸೇತುವೆ ನಿರ್ಮಾಣವಾಯಿತು.

ಇನ್ನು ಬಿ.ಸಿ. ರೋಡ್‌ ಸಂಚಾರ ಅಡಚಣೆ ಮುಕ್ತ ವಾಯಿತು ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಇಲ್ಲಿನ ಫ್ಲೆ$çಒವರ್‌ ತಳದಲ್ಲಿ ಇದ್ದಂತಹ ಸರ್ವಿಸ್‌ ರಸ್ತೆಗಳಿಗೆ ಸಮರ್ಪಕ ಕಾಯಕಲ್ಪ ಆಗದೆ ಬಿ.ಸಿ.ರೋಡ್‌ ಹೆದ್ದಾರಿಯ ಸಮಸ್ಯೆ  ಬಿಗಡಾಯಿಸಿದೆ.

600 ಮೀಟರ್‌ವರೆಗೆ  ಸಮಸ್ಯೆ
ಬಿ.ಸಿ.ರೋಡ್‌ ಸರ್ವಿಸ್‌ ರಸ್ತೆ ಸುಮಾರು 600 ಮೀಟರ್‌ ತನಕ ಡಾಮರು ಇಲ್ಲದೆ, ವಿವಿಧ ಕಾರಣಕ್ಕೆ ಅಗೆತಕ್ಕೆ ಒಳಗಾಗಿ ಸಂಚಾರ ಆಡಚಣೆ ಎದುರಿಸುತ್ತಿದೆ. ಈ ರಸ್ತೆಯಲ್ಲಿ 400 ಮೀಟರ್‌ಗಳ ಕಿರು ಚರಂಡಿ ನಿರ್ಮಾಣ ಕೆಲಸ ಕೆಲವು ದಿನಗಳಿಂದ ಅಗೆತ, ಕಾಂಕ್ರಿಟ್‌ ಹಾಕುವ ಕೆಲಸ ನಡೆಯುತ್ತಿದೆ. ನಿಜವಾಗಿ ಇಂತಹ ಸಾವಿರಾರು ಚರಂಡಿಗಳನ್ನು ಖಾಸಗಿ ವ್ಯವಸ್ಥೆ ಗರಿಷ್ಠ  ಎಂದರೆ ಎರಡು ದಿನಗಳಲ್ಲಿ ಮಾಡಿ ಮುಗಿಸಬಹುದು. ಫ್ಲೆ$çಒವರ್‌ ನಿರ್ಮಾಣವಾಗಿ ಐದು ವರ್ಷಗಳು ಸಂದವು. ಇದರ ತಳದಲ್ಲಿ ಚರಂಡಿ ನಿರ್ಮಾಣಕ್ಕೆ ಇನ್ನೆಷ್ಟು ವರ್ಷ ಬೇಕು ಎಂಬುದನ್ನು  ಹೇಳಲು ಸಾಧ್ಯವಿಲ್ಲ.
ಈ  ಹಿಂದೆ  ಇಲ್ಲಿ ನಿರ್ಮಿಸಿದ್ದ ಸಾರ್ವಜನಿಕ ಫ‌ುಟ್‌ಪಾತ್‌ ಇದೀಗ ಚರಂಡಿಯಾಗಿ ನಿರ್ಮಾಣವಾಗುತ್ತಿದೆ. ಇದು ಕಾಂಕ್ರಿಟೀಕೃತ ಚರಂಡಿಯಾಗಿದ್ದು ಇದನ್ನು ಸಮರ್ಪಕವಾಗಿ ಮಾಡುವುದಾದರೆ ಒಂದು ವಾರದಲ್ಲಿ ನಾಲ್ಕು ಜನರು ಮುಗಿಸಿಕೊಡುತ್ತಿದ್ದರು. ಆದರೆ  ಇಲ್ಲಿ ತಿಂಗಳು ಕಳೆದರೂ ಮುಗಿಯುವ ಲಕ್ಷಣವೂ ಕಾಣುತ್ತಿಲ್ಲ ಎಂದು ಜನರು ಆಡಿಕೊಳುRತ್ತಿದ್ದಾರೆ.

Advertisement

ಹೊಣೆ ಯಾರದ್ದು ?
ಸಮಸ್ಯೆಯ ಕುರಿತು ಪುರಸಭೆಯವರಲ್ಲಿ  ಕೇಳಿದರೆ ಅದು ಹೆದ್ದಾರಿ ಇಲಾಖೆಯ ಕೆಲಸ ಎನ್ನುತ್ತಾರೆ. ಹೆದ್ದಾರಿ ಅಧಿಕಾರಿಗಳಿಗೆ ಕೇಳಿದರೆ ಅದು ಪ್ರಾಧಿಕಾರದ ಕೆಲಸ, ಪ್ರಾಧಿಕಾರದ ಅಧಿಕಾರಿಗಳಿಗೆ ಕೇಳಿದರೆ ನಮ್ಮ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಅವರನ್ನು  ಕೇಳಿ  ಎಂದು ಸಬೂಬು ಹೇಳುತ್ತಾರೆ. ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಿಗೆ ಕನ್ನಡ ಬರುವುದಿಲ್ಲ. ಹಿಂದಿಯಲ್ಲಿ ಮಾತನಾಡುವ ಅವರು ಇಲ್ಲಿನ ಜನಸಾಮಾನ್ಯರ ಜತೆ ಬೆರೆಯುವುದಿಲ್ಲ,  ಸಮಸ್ಯೆ ಕೇಳುವುದಿಲ್ಲ . ಯಾವತ್ತಾದರೂ ಹಣ ಬಂದಾಗ ಇಂತಹ ಸಮಸ್ಯೆಗಳೆಲ್ಲಾ ಮುಗಿಯುತ್ತವೆ. ಅದುವರೆಗೆ ನೀವು ಎಡೆjಸ್ಟ್‌ ಮಾಡಿ ಎನ್ನುವ ಸಲಹೆ ಸಂದೇಶ ನೀಡುತ್ತಾರೆ !

– ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next