Advertisement
ಅ. 22ರಂದು ಬಿ.ಸಿ.ರೋಡ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲೇ ಬಸ್‌ಗಳ ಓಡಾಟಕ್ಕೆ ಚಾಲನೆ ದೊರೆತಿದೆ. ಆರಂಭಿಕ ಹಂತದಲ್ಲಿ ಒಟ್ಟು ಐದು ಸರಕಾರಿ ಬಸ್‌ಗಳು ಓಡಾಟ ಆರಂಭಿಸಿದ್ದು, ಎರಡೂ ಭಾಗಗಳಿಂದಲೂ ಒಟ್ಟು 12 ಟ್ರಿಪ್‌ಗ್ಳಿರುತ್ತವೆ. ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಬಿ.ಸಿ.ರೋಡ್ ಡಿಪೋಗೆ ಸೇರಿರುವ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ.
ಗೊಂಡಿರುವುದು ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಬಹುತೇಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕೊಣಾಜೆ, ದೇರಳಕಟ್ಟೆ ಪ್ರದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೂ ಉಪಯೋಗವಾಗಲಿದೆ. ಕಾಸರಗೋಡಿನಿಂದ ದೇರಳಕಟ್ಟೆ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಿಗೆ ಆಗಮಿಸುವವರಿಗೂ ಈ ಬಸ್ ಓಡಾಟ ಅನುಕೂಲ ಕಲ್ಪಿಸಲಿದೆ. ವಾರದ ಹಿಂದೆಯೇ ಸಿದ್ಧ
ನೂತನವಾಗಿ ಆರಂಭಗೊಂಡ ಅಂತಾರಾಜ್ಯ ಸಂಚಾರದ ಈ ಬಸ್‌ಗಳಿಗೆ ಕೇರಳ ತಿರುವನಂತಪುರದಿಂದ ಪರವಾನಿಗೆ ಲಭ್ಯವಾಗಿದೆ. ಒಂದು ವಾರದ ಹಿಂದೆಯೇ ಬಸ್‌ಗಳು ಸಿದ್ಧಗೊಂಡಿದ್ದರೂ ಅ. 22ರಂದು ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಉದ್ಘಾಟನೆ ಸಮಾರಂಭದಲ್ಲೇ ಚಾಲನೆ ನೀಡಬೇಕು ಎಂಬ ಕಾರಣಕ್ಕೆ ಅದೇ ದಿನ ಓಡಾಟ ಆರಂಭಿಸಲಾಗಿದೆ. ಈ ರಸ್ತೆಯಲ್ಲಿ ಬಸ್ ಓಡಾಟ ಆರಂಭಗೊಂಡಿದೆ ಎಂದು ಜನರಿಗೆ ಮಾಹಿತಿ ಸಿಗಬೇಕು ಎಂಬ ಕಾರಣಕ್ಕೆ ಬಿ.ಸಿ.ರೋಡ್-ಕಾಸರಗೋಡು ಸ್ಟಿಕ್ಕರ್ ಅಳವಡಿಸಿದ ಬಸ್‌ಗಳನ್ನು ಕೆಲವು ದಿನಗಳ ಹಿಂದೆಯೇ ಬಿ.ಸಿ.ರೋಡು -ಮಂಗಳೂರು ಮಧ್ಯೆ ಓಡಿಸಲಾಗಿದೆ. ಬಿ.ಸಿ.ರೋಡ್-ಕಾಸರಗೋಡು ಮಧ್ಯೆ ಆರಂಭಗೊಳ್ಳಲಿರುವ ಬಸ್ಸಿಗೆ ತಡೆಯಾಜ್ಞೆ ಬಂದಿದೆ ಎಂಬ ಸುಳ್ಳು ಸುದ್ದಿಯನ್ನೂ ಹಬ್ಬಿಸುವ ಪ್ರಯತ್ನವನ್ನೂ ಕೆಲವರು ಮಾಡಿದ್ದಾರೆ ಎಂದು ಬಿ.ಸಿ.ರೋಡ್ ಡಿಪೋ ಮ್ಯಾನೇಜರ್ “ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
ಅಂತಾರಾಜ್ಯ ಸಂಪರ್ಕಿಸುವ ಹಾಗೂ ಬಹುತೇಕ ಭಾಗದ ಪ್ರಯಾಣಿಕರಿಗೆ ನೆರವಾಗುವ ಬಿ.ಸಿ. ರೋಡ್-ಕಾಸರಗೋಡು ನಡುವೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪ್ರಾರಂಭಿಸುವಂತೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದಿತ್ತು. ಆದರೆ ಇಷ್ಟೊಂದು ಜನಪ್ರಿಯ ಮಾರ್ಗದಲ್ಲಿ ಸಾರಿಗೆ ನಿಗಮ ಸದ್ದಿಲ್ಲದೆ ಸರಕಾರಿ ಪ್ರಾರಂಭಿಸಿರುವುದು ಆಚ್ಚರಿ ಮೂಡಿಸಿದೆ. ಏಕೆಂದರೆ ಈ ಮಾರ್ಗದಲ್ಲಿ ಈಗ ಬಸ್ ಓಡಾಟ ಆರಂಭಿಸಿರುವ ವಿಚಾರ ಇನ್ನು ಕೂಡ ಪ್ರಯಾಣಿಕರ ಗಮನಕ್ಕೆ ಬಂದಿಲ್ಲ. ಸಂಬಂಧ ಪಟ್ಟ ಡಿಪೋದವರು ಕೂಡ ಇಲ್ಲಿವರೆಗೆ ಹೊಸ ಬಸ್ ಸೇವೆ ಬಗ್ಗೆ ಪ್ರಯಾಣಿಕರಿಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಆದರೆ ಈ ರೀತಿ ಯಾವುದೇ ಮಾರ್ಗದಲ್ಲಿ ಹೊಸ ಬಸ್ ಸಂಚಾರ ಪ್ರಾರಂಭಿಸ ಬೇಕಾದರೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡ ಬೇಕಾಗಿರುವುದು ಅತ್ಯಗತ್ಯ.
Advertisement
ಪ್ರಯಾಣಿಕರಿಗೆ ಯಾವುದೇ ಸುಳಿವು ನೀಡದೆ, ರವಿವಾರದಿಂದ ಹೊಸ ಬಸ್‌ಗಳು ಇಲ್ಲಿ ಓಡಾಟ ನಡೆಸಿರುವ ಬಗ್ಗೆ ಪ್ರಯಾಣಿಕರು ತಗಾದೆ ತೆಗೆದಿದ್ದಾರೆ. ಜನರಿಗೆ ಮಾಹಿತಿ ಒದಗಿಸದೆ ಹೊಸ ರೂಟ್ ಬಸ್‌ಗಳ ಓಡಾಟ ನಡೆಸಿದರೆ ಪ್ರಯಾಣಿಕರಿಗೆ ಯಾವುದೇ ಲಾಭವಾಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರವಿವಾರದಿಂದ ಆರಂಭವಾದ ಹೊಸ ಬಸ್‌ಗಳನ್ನು ನೋಡಿದ ಕೆಲವು ಪ್ರಯಾಣಿಕರು, ಇದು ಯಾವ ಬಸ್? ಎಲ್ಲಿಗೆ ಹೋಗುವುದು? ಯಾವಾಗದಿಂದ ಆರಂಭ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನೂತನ ರೂಟ್‌ನ ಬಸ್ ಬಗ್ಗೆ ಪ್ರಯಾಣಿಕರಿಗೆ ಸಮರ್ಪಕ ಮಾಹಿತಿ ದೊರೆಯದಿದ್ದರೆ ಆ ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಎದುರಾಗಿ, ಹೊಸ ರೂಟ್‌ನಿಂದ ನಷ್ಟ ಎಂದು ಸಬೂಬು ನೀಡಿ ಸಂಚಾರ ಸ್ಥಗಿತಗೊಳಿಸಿದ ಕೆಲವು ಉದಾಹರಣೆಗಳು ಇರುವುದರಿಂದ, ಬಿ.ಸಿ.ರೋಡ್-ಕಾಸರಗೋಡು ಹೊಸ ಬಸ್‌ಗಳು ಕೂಡ ಇಂತಹುದೇ ಅಪವಾದ ಎದುರಿಸಬೇಕಾದೀತೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಬೆಳಗ್ಗೆ 7ರಿಂದ ರಾತ್ರಿ 8ರ ವರೆಗೆ
ಬಿ.ಸಿ.ರೋಡು ಹಾಗೂ ಕಾಸರಗೋಡಿನಿಂದ ಬಸ್‌ಗಳ ಓಡಾಟ ಬೆಳಗ್ಗೆ 7ಕ್ಕೆ ಆರಂಭಗೊಂಡರೆ ರಾತ್ರಿ 8ರ ವರೆಗೆ ಬಸ್‌ಗಳ ಸೇವೆ ಲಭ್ಯವಾಗಲಿದೆ. ಬಿ.ಸಿ.ರೋಡಿನಿಂದ ಬೆಳಗ್ಗೆ 7, 8, 9, 10, 11, ಮಧ್ಯಾಹ್ನ 1, 2, 3, ಸಂಜೆ 4, 6, ರಾತ್ರಿ 7, 8 ಗಂಟೆಗೆ ಹೊರಟರೆ, ಕಾಸರಗೋಡಿನಿಂದ ಬೆಳಗ್ಗೆ 7, 8, 10, 11, ಮಧ್ಯಾಹ್ನ 12, 1, 2, ಸಂಜೆ 4, 5, 6, ರಾತ್ರಿ 7 ಹಾಗೂ 8 ಗಂಟೆಗೆ ಹೊರಡಲಿವೆ. 2 ಗಂಟೆ 10 ನಿಮಿಷದ ಪ್ರಯಾಣ ಅವಧಿಯನ್ನು ನಿಗದಿ ಪಡಿಸಲಾಗಿದ್ದು, 64 ರೂ. ಪ್ರಯಾಣ ದರ ಇರುತ್ತದೆ. ಇದು ಶಟ್ಲ ಬಸ್ ಆಗಿದ್ದು, ಸಾಮಾನ್ಯವಾಗಿ ಎಲ್ಲ ತಂಗುದಾಣಗಳಲ್ಲೂ ನಿಲ್ಲಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 5 ಬಸ್‌ಗಳ ಓಡಾಟ
ಪ್ರಸ್ತುತ 5 ಬಸ್‌ಗಳು ಈ ರಸ್ತೆಯಲ್ಲಿ ಓಡಲಿದ್ದು, ಎರಡೂ ಕಡೆಗಳಿಂದಲೂ 12 ಟ್ರಿಪ್ ಇರುತ್ತದೆ. ಒಂದು ವಾರದ ಹಿಂದೆ ಬಸ್‌ಗಳು ಸಿದ್ಧವಾಗಿದ್ದರೂ ಅ. 22ರಿಂದ ಸಂಚಾರ ಆರಂಭಗೊಂಡಿದೆ. ಹೊಸ ಬಸ್‌ಗಳ ಓಡಾಟಕ್ಕೆ ಪ್ರಯಾಣಿಕರಿಂದ ಉತ್ತಮ ಬೆಂಬಲ ಲಭ್ಯವಾಗುವ ನಿರೀಕ್ಷೆ ಇದೆ.
ಪಿ. ಇಸ್ಮಾಯಿಲ್, ಡಿಪೋ ಮ್ಯಾನೇಜರ್, ಕೆಎಸ್‌ಆರ್‌ಟಿಸಿ, ಬಿ.ಸಿ.ರೋಡ್ ಕಿರಣ್ ಸರಪಾಡಿ ಬಿ.ಸಿ.ರೋಡ್-ಕಾಸರಗೋಡು ನಡುವೆ ಓಡಾಟ ಆರಂಭಿಸಿರುವ ಕೆಎಸ್‌ಆರ್‌ಟಿಸಿಯ ಹೊಸ ಬಸ್.