Advertisement
ಬಿ.ಸಿ.ರೋಡ್- ಪುಂಜಾಲಕಟ್ಟೆ ಮಧ್ಯೆ 19.85 ಕಿ.ಮೀ.ಉದ್ದದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು 2018ರಲ್ಲಿ ಪ್ರಾರಂಭಗೊಂಡಿದ್ದು, ಅದರಲ್ಲಿ ಜಕ್ರಿಬೆಟ್ಟುವರೆಗೆ 3.85 ಕಿ.ಮೀ. ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಮಂಜೂ ರಾಗಿತ್ತು. ಪ್ರಸ್ತುತ ಹೆದ್ದಾ ರಿಯ ಎಲ್ಲ ಹಂತದ ಕಾಮಗಾರಿ ಪೂರ್ಣ ಗೊಂಡು ಗಾಣದಪಡು³ ಬಳಿ ಕಾಂಕ್ರೀಟ್ ರಸ್ತೆ, ಚರಂಡಿಯ ಮಧ್ಯ ಭಾಗಕ್ಕೆ ಇಂಟರ್‌ಲಾಕ್ ಅಳವಡಿಕೆ ಆರಂಭ ಗೊಂಡಿದೆ.
Related Articles
Advertisement
ಉಳಿದಂತೆ ಬಂಟ್ವಾಳ ಬೈಪಾಸ್ ಭಾಗ ದಲ್ಲಿ ಸುಮಾರು ಒಂದು ತಿಂಗಳ ಹಿಂದೆ ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ಡಿವೈಡರ್ ನಿರ್ಮಾಣ ಬಾಕಿ ಇದೆ. ಬಿ.ಸಿ.ರೋಡ್‌ನಿಂದ ಬೈಪಾಸ್‌ವರೆಗೆ ಡಿವೈಡರ್ ಮಧ್ಯೆ ತಡೆಬೇಲಿಯ ಅಳ ವಡಿಕೆ ಪೂರ್ಣಗೊಂಡಿದೆ. ಹೊಸ ದಾಗಿ ಕಾಂಕ್ರೀಟ್ ಹಾಕಿರುವ ಹಾಗೂ ಇನ್ನು ಹಾಕಲು ಬಾಕಿ ಇರುವ ಪ್ರದೇಶ ದಲ್ಲಿ ಚರಂಡಿ ಕಾಮಗಾರಿ ನಡೆಯ ಬೇಕಿದೆ. ಭಂಡಾರಿಬೆಟ್ಟು ಬಳಿ ನೆರೆ ವಿಮೋಚನ ರಸ್ತೆಯನ್ನು ಹೆದ್ದಾರಿಗೆ ಸಂಪರ್ಕಿಸುವ ಕಾಮಗಾರಿ ಆರಂಭಗೊಳ್ಳಬೇಕಿದೆ. ಗಾಣದಪಡು³ ಬಳಿ ಕಾಂಕ್ರೀಟ್ ಹೆದ್ದಾರಿಯ ಪ್ರಾರಂಭದಲ್ಲಿ ಬಾಕಿ ಇರುವ ಕಾಮಗಾರಿ ಆರಂಭಗೊಂಡಿದೆ. ಅದರ ಮುಂದಿನ ಕಾಮಗಾರಿಯನ್ನು ರಾ.ಹೆ. ಪ್ರಾಧಿಕಾರ ನಿರ್ವಹಿಸಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿದೆ.