Advertisement
ಇಲ್ಲಿನ ನಿಲ್ದಾಣದಲ್ಲಿ ಹೆದ್ದಾರಿ ಬದಿ ಸಂಪೂರ್ಣ ಇಳಿಜಾರಿನಿಂದ ಕೂಡಿದ್ದು, ಬಸ್‌ನಿಂದ ಇಳಿಯುವ ಮೊದಲು ಅವರು ತಿಳಿದಿರುವುದಿಲ್ಲ. ಕಾಲು ಕೆಳಗೆ ಇಟ್ಟ ಬಳಿಕವೇ ಅದು ಅನುಭವಕ್ಕೆ ಬರುವುದರಿಂದ ಇಲ್ಲಿ ನಿತ್ಯವೂ ಬೀಳುವವರ ಸಂಖ್ಯೆಯೇ ಹೆಚ್ಚು. ಆದರೆ ನಿತ್ಯ ಪ್ರಯಾಣಿಸುವವರು ಮಾತ್ರ ಎಚ್ಚರಿಕೆಯಿಂದ ಇಳಿಯುವ ಕಾರಣದಿಂದ ಅವರು ಬೀಳುವುದರಿಂದ ಬಚಾವಾಗುತ್ತಾರೆ.
Related Articles
ಈ ಸಮಸ್ಯೆಯನ್ನು ಯಾರ ಬಳಿಯೂ ಹೇಳುವಂತಿಲ್ಲ. ಹೇಳುವುದಾದರೆ ಬಸ್ಸಿನ ನಿರ್ವಾಹಕರ ಬಳಿ ಹೇಳುಬೇಕಷ್ಟೇ. ಪಾಪ ಅವರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ.? ಉಳಿದಂತೆ ಸಂಬಂಧಪಟ್ಟ ಸ್ಥಳೀಯಾಡಳಿತ, ಜನ ಪ್ರತಿನಿಧಿಗಳು, ಅಧಿಕಾರಿ ವರ್ಗ ಈ ಕುರಿತು ಗಮನ ಹರಿಸುವುದೇ ಇಲ್ಲ.
Advertisement
ಅಂದರೆ ಅವರು ನಿಲ್ದಾಣಕ್ಕೆ ಬರುವುದೇ ಇಲ್ಲವಾದ್ದರಿಂದ ಜನರ ಸಮಸ್ಯೆ ಅರ್ಥವಾಗುವುದು ಕಷ್ಟ ಸಾಧ್ಯ.ಹೀಗಾಗಿ ಇನ್ನಾದರೂ ಈ ಗಂಭೀರ ಸಮಸ್ಯೆಯನ್ನು ಸಂಬಂಧಪಟ್ಟವರು ಅರಿತುಕೊಂಡು ಪ್ರಯಾಣಿಕರ ತೊಂದರೆಗೆ ಮುಕ್ತಿ ನೀಡುವ ಕಾರ್ಯವನ್ನು ಮಾಡಬೇಕು. ಈ ಭಾಗದಲ್ಲಿ ಹೆದ್ದಾರಿ ಇಳಿಜಾರನ್ನು ಸರಿಪಡಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ತಾಲೂಕು ಕೇಂದ್ರದ ಪ್ರಮುಖ ಬಸ್ ನಿಲ್ದಾಣ ಇದಾಗಿರುವುದರಿಂದ ಹೆಚ್ಚಿನ ಮುತುವರ್ಜಿ ಅಗತ್ಯವಾಗಿದೆ.
ಬಸ್ಸನ್ನೇರುವುದಕ್ಕೂ ತೊಂದರೆ ಇಲ್ಲಿ ಬಸ್‌ನಿಂದ ಇಳಿಯುವ ಪ್ರಯಾಣಿಕರಿಗೆ ಮಾತ್ರ ತೊಂದರೆಯಾಗುತ್ತಿಲ್ಲ. ಬದಲಾಗಿ ಬಿ.ಸಿ.ರೋಡ್‌ನಿಂದ ಪುತ್ತೂರು, ಉಪ್ಪಿನಂಗಡಿ, ಧರ್ಮಸ್ಥಳ, ವಿಟ್ಲ, ಸುಬ್ರಹ್ಮಣ್ಯ ಮೊದಲಾದೆಡೆಗೆ ತೆರಳುವುದಕ್ಕೆ ಬಸ್ಸನ್ನೇರುವ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಅಂದರೆ ಪ್ರಯಾಣಿಕರು ನಿಂತಿರುವ ಭಾಗ ಇಳಿಜಾರಿನಿಂದ ಕೂಡಿರುವುದರಿಂದ ಬಸ್ಸಿನ ಮೆಟ್ಟಿಲುಗಳು ಬಹಳಷ್ಟು ಎತ್ತರದಲ್ಲಿರುವ ಕಾರಣ ತೊಂದರೆಯಾಗುತ್ತಿದೆ.