Advertisement
ಬೆಂಗಳೂರು-ಮಂಗಳೂರಿಗೆ ನೇರ ಸಂಪರ್ಕ ಕಲ್ಪಿಸುವ ಈ ರಾ.ಹೆ.ಯಲ್ಲಿ ಅಡ್ಡಹೊಳೆಯಿಂದ ಬಿ.ಸಿ.ರೋಡ್ವರೆಗಿನದ್ವಿಪಥ ರಸ್ತೆಯನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಮೇಲ್ದªರ್ಜೆಗೇರಿಸಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಅದರಂತೆ ಈ ಹೆದ್ದಾರಿಯನ್ನು ವಿಸ್ತರಿಸುವ ಕಾಮಗಾರಿಗೆ ಚಾಲನೆ ದೊರೆತಿದ್ದು, ಮುಂದಿನ ಎರಡೂವರೆ ವರ್ಷದೊಳಗೆ ಕಾಮಗಾರಿ ಪೂರ್ಣವಾಗಬೇಕಿದೆ. ಸದ್ಯ ಗುಂಡ್ಯದಿಂದಉಪ್ಪಿನಂಗಡಿವರೆಗೆ ರಸ್ತೆಗೆ ಹೊಂದಿಕೊಂಡಿ ರುವ ಮರಗಳ ತೆರವು, ವಿದ್ಯುತ್ ಕಂಬಗಳು, ನೀರು ಹಾಗೂ ಇತರ ಕೊಳವೆ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ ನಡೆಯುತ್ತಿದೆ. ಕೆಲವೇ ದಿನದಲ್ಲಿ ರಸ್ತೆ ಅಗಲೀಕರಣಕ್ಕೆ ಪೂರಕವಾಗಿ ಸಣ್ಣ-ಪುಟ್ಟ ಮೋರಿ ಕಾಮಗಾರಿ ಆರಂಭವಾಗಲಿದೆ. ಆ ವೇಳೆಗೆ ಮಳೆಗಾಲ ಪ್ರಾರಂಭಗೊಂಡರೆ ಕಾಮಗಾರಿಯನ್ನು ಅನಂತರ ನಡೆಸಲು ತೀರ್ಮಾನಿಸಲಾಗಿದೆ.
Related Articles
ಕಾಂಕ್ರೀಟ್ ರಸ್ತೆ ಹಾದುಹೋಗುವ ಕಡೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಆಲೂರು ತಾಲೂಕಿನ 5 ಗ್ರಾಮಗಳು, ಸಕಲೇಶಪುರ ತಾಲೂಕಿನ 12 ಗ್ರಾಮಗಳು, ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿ, ಶಿರಿವಾಗಿಲು, ನೂಜಿಬಾಳ್ತಿಲ, ನೆಲ್ಯಾಡಿ, ಕೊನಾಲು, ಗೋಳಿತಟ್ಟು, ಬಜತ್ತೂರು, ಉಪ್ಪಿನಂಗಡಿ, ನೆಕ್ಕಿಲಾಡಿ, ಬೆಳ್ತಂಗಡಿ ತಾಲೂಕಿನ ರೇಖ್ಯಾ, ಬಂಟ್ವಾಳ ತಾಲೂಕಿನ ಬಿಳಿಯೂರು, ಪೆರ್ನೆ, ಕೆದಿಲಾ, ಮಾಣಿ, ಬಾಳ್ತಿಲ,ಗೋಳ್ತಮಜಲು, ಕಸಬಾ ಪಾಣೆಮಂಗ ಳೂರು, ನರಿಕೊಂಬು, ಬಿ.ಮೂಡ ಗ್ರಾಮ ದಲ್ಲಿ ನೂತನ ಚತುಷ್ಪಥ ರಸ್ತೆ ಸಾಗಿ ಬರಲಿದೆ.
Advertisement
10,197 ಮರಗಳಿಗೆ ಬೀಳಲಿದೆ ಕೊಡಲಿಯೇಟು..!ಅಡ್ಡಹೊಳೆ-ಬಿ.ಸಿ.ರೋಡ್ ಚತುಷ್ಪಥ ಹೆದ್ದಾರಿ ನಿರ್ಮಾಣದ ಹಿನ್ನೆಲೆಯಲ್ಲಿ ಒಟ್ಟು 10,197 ಮರಗಳಿಗೆ ಕೊಡಲಿಯೇಟು ಬೀಳಲಿದ್ದು, ಬಹುತೇಕ ಮರಗಳನ್ನು ಈಗಾಗಲೇ ಕಡಿದು ನೆಲಕ್ಕುರುಳಿಸಲಾಗಿದೆ. ಅರಣ್ಯ ಇಲಾಖೆ ಇಷ್ಟೂ ಮರಗಳ ಲೆಕ್ಕ ಮಾಡಿಕೊಟ್ಟಿದ್ದು, ಮರಗಳ ತೆರವು ನಡೆಯುತ್ತಿದೆ. ಇದರಂತೆ ಮೀಸಲು ಅರಣ್ಯದಲ್ಲಿ 6494 ಹಾಗೂ ಸರಕಾರಿ ಭೂಮಿಯಲ್ಲಿದ್ದ 3702 ಮರಗಳನ್ನು ತೆರವು ಮಾಡಲಾಗುತ್ತದೆ. ತೆರವು ಮಾಡಿದ ಮರಗಳಿಗೆ ದುಪ್ಪಟ್ಟು ಹಣವನ್ನು ಅರಣ್ಯ ಇಲಾಖೆಗೆ ಪಾವತಿ ಮಾಡಲಾಗುತ್ತದೆ. ಆ ಹಣದ ಮೂಲಕ ಅದೇ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಉಪ್ಪಿನಂಗಡಿ-
ಕಲ್ಲಡ್ಕ ಫ್ಲೈಓವರ್
ಚತುಷ್ಪಥ ಆಗುವ ಸಂದರ್ಭದಲ್ಲಿ ಉಪ್ಪಿನಂಗಡಿ ಹಾಗೂ ಕಲ್ಲಡ್ಕದಲ್ಲಿ ಫ್ಲೈಓವರ್‌ನಿರ್ಮಾಣವಾಗಲಿದೆ. ಧರ್ಮಸ್ಥಳ ಕ್ರಾಸ್
ರಸ್ತೆ (ಪೆರಿಯಶಾಂತಿ) ಹಾಗೂ ಮಾಣಿಯಲ್ಲಿ ಅಂಡರ್‌ಪಾಸ್ ನಿರ್ಮಾಣವಾಗಲಿದೆ. ಈ ಮಧ್ಯೆ ನೇತ್ರಾವತಿಗೆ ಬಿ.ಸಿ.
ರೋಡ್‌ನಲ್ಲಿರುವ ಈಗಿನ ಹೊಸ ಸೇತುವೆಯ ಸಮೀಪದಲ್ಲಿ ಇನ್ನೊಂದು ಹೊಸ ಸೇತುವೆ ನಿರ್ಮಾಣವಾಗ ಬೇಕಿದೆ. ಹಾಗೂ
ಕುಮಾರಧಾರಾ ನದಿಗೆ ಉಪ್ಪಿನಂಗಡಿಯಲ್ಲಿಯೂ ಹೊಸ ಸೇತುವೆ ನಿರ್ಮಾಣವಾಗಬೇಕಿದೆ. ಜತೆಗೆ 14 ಕಿರು ಸೇತುವೆಗಳು ಈ ವ್ಯಾಪ್ತಿಯಲ್ಲಿ ಬರಲಿವೆ. ತ್ವರಿತ ಕಾಮಗಾರಿಗೆ ಸೂಚನೆ
ಕೇಂದ್ರದ ಬಹುಕನಸಿನ ಹಾಸನ- ಬಿ.ಸಿ.ರೋಡ್ ರಸ್ತೆ ಕಾಂಕ್ರೀಟ್ ರೂಪದಲ್ಲಿ ಚತುಷ್ಪಥಗೊಳ್ಳಲಿದೆ. ಈಗಾಗಲೇ ಕಾಮ
ಗಾರಿಗೆ ಚಾಲನೆ ದೊರಕಿದ್ದು, ಅಧಿಕೃತ ಕಾಂಕ್ರೀಟ್ ಕಾಮಗಾರಿಗಳು ಕೆಲವೇ ದಿನದಲ್ಲಿ ಆರಂಭವಾಗಲಿದ್ದು, ತ್ವರಿತ ರೀತಿಯಲ್ಲಿ ನಡೆಸಲು ಸೂಚಿಸಲಾಗಿದೆ. ಈ ಮೂಲಕ ಈಗ ಇರುವ ದ್ವಿಪಥ ರಸ್ತೆ ಚತುಷ್ಪಥ ಕಾಂಕ್ರೀಟ್ ರಸ್ತೆಯಾಗಿ ರೂಪುಗೊಳ್ಳಲಿದೆ.
– ನಳಿನ್ ಕುಮಾರ್ ಕಟೀಲು, ಸಂಸದರು ದ.ಕ. – ದಿನೇಶ್ ಇರಾ