Advertisement
ವಿಕಾಸ ಸೌಧದಲ್ಲಿಂದು ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ಅನುಕೂಲವಾಗುವಂತೆ ತಾಂತ್ರಿಕತೆಗಳನ್ನು ಅಭಿವೃದ್ಧಿಸುವ ಕುರಿತು ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಉನ್ನತಾಧಿಕಾರದ ಸಮಿತಿ ಸಭೆ ನಡೆಯಿತು.
Related Articles
Advertisement
ಎಲ್ಲಾ ವಿಶ್ವವಿದ್ಯಾಲಯಗಳು ಬೇರೆ ಬೇರೆ ಎನ್ನುವ ಭಾವನೆ ತೊರೆದು ಎಲ್ಲರ ಉದ್ದೇಶ ರೈತರ ಏಳಿಗೆ ಎಂದಾಗಬೇಕು. ಕೃಷಿ ವಿಶ್ವವಿದ್ಯಾಲಯಗಳು ಕಾಲಕ್ಕೆ ತಕ್ಕಂತೆ ರೈತರ ಅಭಿರುಚಿಗೆ ತಕ್ಕಂತೆ ಹೊಸ ತಳಿಗಳನ್ನು ಕಂಡುಹಿಡಿದು ಅದರ ಮಾಹಿತಿ ಪ್ರತಿ ಗ್ರಾಮಪಂಚಾಯಿತಿ ಮಟ್ಟಕ್ಕೂ ತಲುಪುವಂತಾಗಬೇಕು. ವಿಶ್ವವಿದ್ಯಾಲಯಗಳ ಅಧಿಕಾರಿಗಳು ಜೊತೆ ಪ್ರಗತಿಪರ ರೈತರನ್ನು ಕರೆದುಕೊಂಡು ರೈತರ ಹೊಲಗಳಿಗೆ ಹೋಗಿ ರೈತರಿಗೆ ಪ್ರೇರಣೆ ಮಾಡುವ ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ : ಹುಕ್ಕೇರಿ : ನಿವೃತ್ತ ಪಿಎಸ್‌ಐ ಪತ್ನಿಯ ಬರ್ಬರ ಹತ್ಯೆ ; ಚಿನ್ನಾಭರಣ ದೋಚಿ ಪರಾರಿ
ಇದೇ ವೇಳೆ ರಾಜ್ಯದ ರೈತ ಸಂಪರ್ಕ ಕೇಂದ್ರಗಳಿಗೆ ಯಾವ್ಯಾವ ವಿಶ್ವವಿದ್ಯಾಗಳ ವಿಜ್ಞಾನಿಗಳು ಅಧಿಕಾರಿಗಳು ಎಷ್ಟು ಬಾರಿ ಭೇಟಿ ನೀಡಿದ್ದಾರೆ. ರೈತರ ಅಭಿಪ್ರಾಯವೇನು? ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಕೃಷಿ ಆಯುಕ್ತರು ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ವಿಶ್ವವಿದ್ಯಾಲಯಗಳಿಗೆ ಕೇಂದ್ರದಿಂದ ಬಂದಿರುವ ಅನುದಾನಗಲೆಷ್ಟು? ಅದರ ಸದ್ಬಳಕೆಯಾಗಿದೆಯೇ? ವಿಶ್ವವಿದ್ಯಾಲಯಗಳ ಪ್ರಗತಿಯ ವಿವರ ಪಡೆದು ವರದಿ ನೀಡುವಂತೆ ಸೂಚಿಸಿದರು.
ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ ಮಾತನಾಡಿ, ಡ್ರೋನ್ ಬಳಕೆ ತಂತ್ರಜ್ಞಾನ ಬಳಕೆಯ ವರದಿ ನೀಡುವಂತೆ ಕೃಷಿ ವಿಶ್ವವಿದ್ಯಾಲಯಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಿದರು ಹಾಗೂ ಜುಲೈ ತಿಂಗಳ ಮೊದಲ ವಾರದಲ್ಲಿ ಸೆಕೆಂಡರಿ ಕೃಷಿ ಅಗ್ರಿಕಲ್ಚರ್ ಕುರಿತು ಕಾರ್ಯಾಗಾರ ಮಾಡುವ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಕೃಷಿ ಆಯುಕ್ತ ಶರತ್ ಪಿ. ಕೃಷಿ ಇಲಾಖೆ ನಿರ್ದೇಶಕಿ ನಂದಿನಿ ಕುಮಾರಿ ಅಪರ ಕೃಷಿ ನಿರ್ದೇಶಕ ವೆಂಕಟರಮಣ ರೆಡ್ಡಿ ಸೇರಿದಂತೆ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.