Advertisement

ಬಿ.ಸಿ. ರೋಡ್‌: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

02:55 PM Mar 17, 2017 | Team Udayavani |

ಬಂಟ್ವಾಳ : ಗ್ಯಾಸ್‌, ದವಸಧಾನ್ಯಗಳ ಬೆಲೆ  ದಿನದಿಂದ ದಿನಕ್ಕೆ ಏರುತ್ತಿದ್ದು ಜನಸಾಮಾನ್ಯರ ಬದುಕು ಕಷ್ಟವಾಗುತ್ತಿದೆ. ಕೇಂದ್ರ ಸರಕಾರ ಜನವಿರೋಧಿ ನೀàತಿಯಿಂದ ಸಂಕಷ್ಟ ಎದುರಿಸುವಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷ ಕೋಡಿಜಾಲ್‌ ಇಬ್ರಾಹಿಂ ಹೇಳಿದರು.

Advertisement

ಅವರು ಮಾ. 16ರಂದು ಬಿ.ಸಿ.ರೋಡ್‌ನ‌ಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್‌ ಕಾಂಗ್ರೆಸ್‌ ನೇತೃತ್ವದಲ್ಲಿ ನಡೆದ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.ಮೋದಿ ಉತ್ತರಪ್ರದೇಶದಲ್ಲಿ  ಜನಪ್ರಿಯತೆಯ ಅಲೆಯಿಂದ ಬಿಜೆಪಿ ಗೆದ್ದಿರುವುದಲ್ಲ.  ಈ ಹಿಂದೆ ಆಡಳಿತ ನಡೆಸಿದ್ದ ಪಕ್ಷದ ವಿರೋಧಿ ಅಲೆಯಿಂದ ಗೆದ್ದಿದ್ದಾರೆ. ಅಲ್ಪಸಂಖ್ಯಾಕರ ವೋಟು ವಿಭಜನೆ ಆಗಿದ್ದು ಬಿಜೆಪಿ ಗೆಲುವಿಗೆ ಪೂರಕವಾಯಿತು ಎಂದರು.

ಪಂಜಾಬ್‌ನಲ್ಲಿ ಕಾಂಗ್ರೆಸ್‌ ಬಹುಮತದಿಂದ ಗೆದ್ದು ಗೋವಾ ಮತ್ತು ಮಣಿಪುರದಲ್ಲಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್‌ ಮೂಡಿಬಂದಿದ್ದರೂ ಅಲ್ಲಿ ಆಪರೇಷನ್‌ ಕಮಲದ ಮೂಲಕ ಸರಕಾರವನ್ನು ಹೈಜಾಕ್‌ ಮಾಡಿರುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದರು.

ಪಾಣೆಮಂಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ಟಾಸ್‌ ಅಲಿ ಮಾತನಾಡಿ  ಈ ದೇಶದಲ್ಲಿ ಎಲ್ಲ  ಧರ್ಮಿಯರು ಒಗ್ಗಟ್ಟಿನಿಂದ ಇದ್ದಾಗ ಸೌಹಾರ್ದತೆ ಉಂಟಾಗಿ ಕಾಂಗ್ರೆಸ್‌ ಬಲವರ್ಧನೆ ಆಗಿದೆ. ಕಾಂಗ್ರೆಸ್‌ ಮುಕ್ತ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮುಂದೆಯೂ  ಇಂತಹ ಪ್ರತಿಭಟನೆಯನ್ನು ಬೂತ್‌ ಮತ್ತು ವಲಯ ಮಟ್ಟದಲ್ಲಿ ಸಂಘಟಿಸಲಾಗುವುದು. ಉತ್ತಮ ಬಜೆಟ್‌ ನೀಡಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಅಭಿನಂದಿಸಿದರು.

ಎತ್ತಿನ ಹೊಳೆ ಯೋಜನೆಗೆ ಪರ್ಯಾಯವಾಗಿ ಪಶ್ಚಿಮವಾಹಿನಿ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯ ಮಂತ್ರಿಗಳ ಜತೆ ಸಮಾಲೋಚಿಸಿದ್ದರಿಂದ  ಅದರ ಕ್ರಿಯಾ ಯೋಜನೆಗಾಗಿ ನೂರು ಕೋಟಿ ರೂ. ತೆಗೆದಿರಿಸಿದೆ ಎಂದರು.

Advertisement

ಜಿಲ್ಲಾ ಪಂಚಾಯತ್‌ ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ಮಾತನಾಡಿ ಕೇಂದ್ರದಲ್ಲಿ ಮನ್‌ಮೋಹನ್‌ ಸಿಂಗ್‌ ಯುಪಿಎ ಸರಕಾರ ಇದ್ದಾಗ ಸರಕಾರದ ಬೆಲೆ ಏರಿಕೆ ವಿರುದ್ಧ ನಿರಂತರ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರು, ಕಾರ್ಯಕರ್ತರು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಜಿ.ಪಂ.ಸದಸ್ಯ ಎಂ. ಎಸ್‌. ಮಹಮ್ಮದ್‌,  ಮಮತಾ ಡಿ.ಎಸ್‌. ಗಟ್ಟಿ, ಮಂಜುಳಾ  ಮಾವೆ, ಎಪಿಎಂಸಿ ಅಧ್ಯಕ್ಷ ಕೆ. ಪದ್ಮನಾಭ ರೈ, ಪದ್ಮನಾಭ ನರಿಂಗಾನ,  ಉಮಾನಾಥ ಶೆಟ್ಟಿ, ಜಗದೀಶ ಕೊçಲ,  ಮಾಧವ ಮಾವೆ ಮಾತನಾಡಿದರು. ಜಿ.ಪಂ. ಸದಸ್ಯ ಬಿ ಪದ್ಮಶೇಖರ ಜೈನ್‌,  ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್‌, ಬುಡಾ ಮಾಜಿ ಅಧ್ಯಕ್ಷ ಪಿಯೂಸ್‌ ಎಲ್‌. ರೋಡ್ರಿಗಸ್‌, ಪುರಸಭೆ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್‌ ನಂದರಬೆಟ್ಟು, ಮಲ್ಲಿಕಾ ಪಕ್ಕಳ, ಜಯಂತಿ ಅನಂತಾಡಿ, ಎಂ. ಪರಮೇಶ್ವರ, ಲುಕಾ¾ನ್‌,  ಜನಾರ್ದನ ಚಂಡ್ತಿಮಾರ್‌, ಪ್ರಶಾಂತ್‌ ಕುಲಾಲ್‌, ರಾಜಶೇಖರ ನಾಯಕ್‌, ಪಿ. ಜಿನರಾಜ ಆರಿಗ, ಚಂದ್ರಶೇಖರ ಪೂಜಾರಿ ಬಾಳ್ತಿಲ, ಧನಲಕ್ಷಿ$¾ ಸಿ. ಬಂಗೇರ, ಉಸ್ಮಾನ್‌ ಕರೋಪಾಡಿ, ಮಂಜುಳಾ ಕುಶಲ ಪೆರಾಜೆ,ಗಾಯತ್ರಿ ರವಿಂದ್ರ ಸಪಲ್ಯ, ಕುಮಾರ್‌ ಭಟ್‌,  ನಸೀಮ, ಶೋಭಾ ರೈ, ಶಿವಪ್ರಸಾದ್‌ ಕನಪಾಡಿ, ಮಧುಸೂದನ ಶೆಣೈ , ರಾಜು ಕೋಟ್ಯಾನ್‌,ಅಲ್ಬರ್ಟ್‌ ಮಿನೇಜಸ್‌, ಐಡಾ ಸುರೇಶ್‌, ರಿಯಾಜ್‌ ಬಂಟ್ವಾಳ, ಪದ್ಮರಾಜ ಬಲ್ಲಾಳ್‌, ದಿವಾಕರ ಪಂಬದಬೆಟ್ಟು,  ಈಶ್ವರ ಪೂಜಾರಿ ಹಿರ್ತಡ್ಕ, ಮಲ್ಲಿಕಾ ಶೆಟ್ಟಿ, ಪ್ರಭಾಕರ ಪ್ರಭು, ಪದ್ಮಾವತಿ, ಮಂಜುಳಾ ಸದಾನಂದ, ಪುರಸಭೆಯ ಕಾಂಗ್ರೆಸ್‌ ಜನ ಪ್ರತಿನಿಧಿಗಳು, ತಾ.ಪಂ. ಜನ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಮಹೇಶ್‌ ನಾಯಕ್‌ ಸ್ವಾಗತಿಸಿ, ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next