Advertisement

ಪ.ಪೂ. ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ: ಶಿಕ್ಷಣ ಸಚಿವರ ಜತೆಗೆ “ಕುಪ್ಮಾ’ಸಭೆ

01:32 AM Feb 11, 2023 | Team Udayavani |

ಮಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಮಾಡಬೇಕಾದ ಕೆಲವು ಬದಲಾವಣೆಗಳ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ರಾಜ್ಯ ಖಾಸಗಿ ಅನುದಾನ ರಹಿತ ಪ.ಪೂ. ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮಾ)ದ ಪದಾಧಿಕಾರಿಗಳ ಜತೆಗೆ ಬೆಂಗಳೂರಿನಲ್ಲಿ ಶುಕ್ರವಾರ ಮಹತ್ವದ ಚರ್ಚೆ ನಡೆಸಿದರು.

Advertisement

ಕುಪಾ¾ ಅಧ್ಯಕ್ಷ ಡಾ| ಮೋಹನ್‌ ಆಳ್ವ, ಕಾರ್ಯದರ್ಶಿ ಪ್ರೊ| ನರೇಂದ್ರ ಎಲ್‌.ನಾಯಕ್‌, ಉಪಾಧ್ಯಕ್ಷರಾದ ಡಾ| ಸುಧಾಕರ ಶೆಟ್ಟಿ, ಯುವರಾಜ್‌ ಜೈನ್‌, ಕಾರ್ಯಕಾರಿಣಿ ಸದಸ್ಯರಾದ ಸುಬ್ರಹ್ಮಣ್ಯ ನಟೋಜ, ಕೋಶಾಧಿಕಾರಿ ರಮೇಶ ಕೆ. ಉಪಸ್ಥಿತರಿದ್ದರು.

ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಾಲೇಜುಗಳ ಕಟ್ಟಡಗಳಿಗೆ (ಹಳೆಯ) ಸರಕಾರವು ಅಸಾಧ್ಯ ಷರತ್ತು ವಿಧಿಸಬಾರದು. ಆದರೆ ಹೊಸದಾಗಿ ನಿರ್ಮಿಸುವ ಕಟ್ಟಡಗಳಿಗೆ ಸರಕಾರವು ನಿಯಮಗಳನ್ನು ವಿಧಿಸಬಹುದು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಅಥವಾ ಉಪನಿರ್ದೇಶಕರು ಈ ಕುರಿತಂತೆ ಸಲಹೆ ನೀಡಬಹುದು. ಪ.ಪೂ. ಶಿಕ್ಷಣ ಇಲಾಖೆಯು “ಕ್ಯಾಲೆಂಡರ್‌ ಆಫ್‌ ಈವೆಂಟ್ಸ್‌’ ಸಾಕಷ್ಟು ಮುಂಚಿತವಾಗಿ ತಯಾರಿಸಬೇಕು. ಅದನ್ನು ಅಂತಿಮಗೊಳಿಸುವ ಮೊದಲು “ಕುಪಾ¾’ದೊಂದಿಗೆ ಚರ್ಚಿಸಬೇಕು ಎಂದು ಮನವಿ ಸಲ್ಲಿಸಲಾಯಿತು.

ಪರೀಕ್ಷಾ ವೇಳಾಪಟ್ಟಿಯನ್ನು ತಯಾರಿಸುವಾಗ “ಕುಪ್ಮಾ’ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡರೆ ಉತ್ತಮ. ಕೆಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವಾಗ ಶಿಕ್ಷಕರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಬೇಕು.

Advertisement

ಈಗಾಗಲೇ ಕಾಲೇಜಿನಲ್ಲಿರುವ ಹಳೆಯ ಬಸ್ಸುಗಳಿಗೆ ಅವಧಿ ಮೀರಿದಾಗ ಪರವಾನಿಗೆಯನ್ನು ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ 15 ವರ್ಷ ಮೀರಿದ ಬಸ್ಸುಗಳಿಗೆ ಪರವಾನಗಿಯನ್ನು ನವೀಕರಿಸುವ ಬದಲು ಅದರ ಓಡಿದ ಕಿ.ಮೀ. ಆಧಾರದ ಮೇಲೆ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಪ್ರಥಮ, ದ್ವಿತೀಯ ಪಿಯುಸಿಯ ವಾರ್ಷಿಕ ಪ್ರಶ್ನೆಪತ್ರಿಕೆಯನ್ನು ತಯಾರಿಸುವಾಗ ಖಾಸಗಿ ಕಾಲೇಜುಗಳ ಅನುಭವಿ ಉಪನ್ಯಾಸಕರನ್ನು ನೇಮಿಸಿಕೊಂಡಲ್ಲಿ ಗೊಂದಲ, ತಪ್ಪುಗಳನ್ನು ಸರಿಪಡಿಸಬಹುದು. ಪದವಿಪೂರ್ವ ಹಂತದಲ್ಲಿ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆ ನಡೆಸಲು ಆದ್ಯತೆ ನೀಡಬೇಕು.

ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಕೋಚಿಂಗ್‌ ಮಾಡಬಾರದೆನ್ನುವ ಷರತ್ತನ್ನು ವಿಧಿಸಬಾರದು. ಪದವಿಪೂರ್ವ ವಿಜ್ಞಾನ ವಿಭಾಗದಲ್ಲಿ ನೀಟ್‌ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯವಾಗಿ ಗಣಿತದ ಬದಲಿಗೆ ಮನಶಾಸ್ತ್ರ ಮತ್ತು ತತ್ವಶಾಸ್ತ್ರವನ್ನು ಅಧ್ಯಯನ ಮಾಡಲು ಅನುವು ಮಾಡಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next