Advertisement
ಹೊಸ ಕಾನೂನು ಪ್ರಕಾರ ಹಸಿ, ಒಣ ತ್ಯಾಜ್ಯ , ಪ್ಲಾಸ್ಟಿಕ್, ಕಟ್ಟಡ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ ವಾಹನಗಳಿಗೆ ನೀಡುವುದು ಕಡ್ಡಾಯ. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯವೆಸೆದು ನಿಯಮ ಉಲ್ಲಂ ಸಿದರೆ 1,000 ರೂ. ನಿಂದ 25 ಸಾವಿರ ರೂ. ವರೆಗೆ ದುಬಾರಿ ದಂಡ ಕಟ್ಟಬೇಕಾಗುತ್ತದೆ. ಪಾಲಿಕೆ ಕೌನ್ಸಿಲ್ ಸಭೆ ಅನುಮೋದನೆ ದೊರೆತಿದೆ. ಈ ಕರಡಿನ ಕುರಿತು ಅಧಿಸೂಚನೆ ಪ್ರಕಟಿಣೆ ಬಳಿಕ, ಸಾರ್ವಜನಿಕರಿಂದ ಸಲಹೆ ಅಥವಾ ಅಕ್ಷೇಪಣೆಗಳನ್ನು ಸ್ವೀಕರಿಸಲು 15 ದಿನಗಳ ಕಾಲಾವಕಾಶವನ್ನು ಬಿಬಿಎಂಪಿ ನೀಡಲಿದೆ.
Related Articles
Advertisement
ಸಮಾರಂಭಗಳಿಗಿನ್ನು ಮುಂದೆ ತ್ಯಾಜ್ಯ ಕರ: ಬಿಬಿಎಂಪಿ ವ್ಯಾಪ್ತಿಯ ಹೋಟೆಲ್, ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ಅಥವಾ ಖಾಸಗಿ ಕಟ್ಟಡ, ಖಾಲಿ ನಿವೇಶನಗಳಲ್ಲಿ ಕನಿಷ್ಠ ಒಂದು ವಾರ ಅಥವಾ ಅದಕ್ಕೂ ಮೇಲ್ಪಟ್ಟು ನಡೆಯುವ ವಸ್ತು ಪ್ರದರ್ಶನ, ಮದುವೆ ಸಮಾರಂಭಗಳಿಂದ ಉತ್ಪಾದನೆಯಾಗುವ ತ್ಯಾಜ್ಯ ವಿಲೇವಾರಿ ಅವಧಿವಾರು ಪ್ರತ್ಯೇಕ ಕರ ನಿಗದಿಪಡಿಸಲಾಗಿದೆ.
ಇದರ ಅನ್ವಯ ವಾರದವರೆಗೆ 1500 ರೂ., ವಾರದಿಂದ ತಿಂಗಳವರೆಗೆ 3 ಸಾವಿರ ರೂ., ತಿಂಗಳು ಮೇಲ್ಪಟ್ಟ ಕಾರ್ಯಕ್ರಮಗಳಿಗೆ 6 ಸಾವಿರ ರೂ. ಕರ ನಿಗದಿಪಡಿಸಲಾಗಿದೆ. ಖಾಸಗಿ ಕಾರ್ಯಕ್ರಮಗಳಿಗೆ ಸೇರುವ ಜನಸಂಖ್ಯೆ ಆಧಾರದ ಮೇಲೆ ಕಾರ್ಯಕ್ರಮ ಆಯೋಜಕರು ಕನಿಷ್ಠ 10 ಸಾವಿರದಿಂದ1 ಲಕ್ಷರೂ. ವರೆಗೆ ಪಾಲಿಕೆ ಮುಂಗಡಹಣ ಪಡೆಯಲಿದೆ. ಸಮಾರಂಭಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಬಿಬಿಎಂಪಿಗೆ ಪ್ರತಿ ಕೆ.ಜಿ. ತ್ಯಾಜ್ಯಕ್ಕೆ ನೂರು ರೂ.ಗಳಂತೆ ಪಾವತಿಸಬೇಕಾಗುತ್ತದೆ.
ನಿಯಮ ಉಲ್ಲಂಘನೆಗಳು ಮೊದಲಬಾರಿ ನಂತರ ಉಲ್ಲಂಘನೆ ಮಾಡಿದರೆ(ರೂ.ಗಳಲ್ಲಿ)ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು, ಮೂತ್ರ ವಿರ್ಸಜನೆ 500 1,000
ಕಸ ವಿಂಗಣೆ ನಿಯಮ ಉಲ್ಲಂಘನೆ 500 1,000
ಕಸವಿಂಗಡಣೆ (ವಾಣಿಜ್ಯ ಉತ್ಪಾದಕರಿಗೆ) ಉಲ್ಲಂಘನೆ 1,000 5ಸಾವಿರದ ವರೆಗೆ
ಪ್ರಾಣಿಗಳ ತ್ಯಾಜ್ಯ ವಿಂಗಡಣೆ ವೈಫಲ್ಯ 1000 2,000
ಕಸ ಸುಟ್ಟರೆ 5000
ಕಸ(ವಾಣಿಜ್ಯ ಉತ್ಪಾದಕರಿಗೆ) ಸುಟ್ಟರೆ 25,000
ಕಟ್ಟಡ ತ್ಯಾಜ್ಯ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ 5,000 10,000
ತ್ಯಾಜ್ಯ ಉತ್ಪಾದನೆಯ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ 10 ಸಾವಿರ ಎಲ್ಲಾ ತ್ಯಾಜ್ಯ ಉತ್ಪಾದಕರಿಗೆ ವಿಧಿಸುವ ಕರದರ
ವಸತಿ ಸಮುಚ್ಛಯಗಳು ಸೆಸ್(ಕರ)ದರ (ತಿಂಗಳಿಗೆ ರೂ.ಗಳಲ್ಲಿ)
1 ಸಾವಿರ ಚ.ಅಡಿವರೆಗೆ 30
1 ಸಾವಿರದಿಂದ 3 ಸಾವಿರ ಚ.ಅಡಿವರೆಗೆ 40
3 ಸಾವಿರ ಚ.ಅಡಿಗಿಂತ ಅಧಿಕ 50 ವಾಣಿಜ್ಯ ಕಟ್ಟಡಗಳು
1 ಸಾವಿರ ಚ.ಅಡಿವರೆಗೆ 50
1ರಿಂದ 5ಸಾವಿರ ಚ.ದ ಅಡಿವರೆಗೆ 100
5 ಸಾವಿರ ಚ.ದ ಅಡಿಗಿಂತ ಹೆಚ್ಚು 200 ಕೈಗಾರಿಕಾ ಕಟ್ಟಡಗಳು
1 ಸಾವಿರ ಚ.ಅಡಿವರೆಗೆ 100
1 ಸಾವಿರದಿಂದ 5 ಸಾವಿರ ಚ.ಅಡಿವರೆಗೆ 200
5 ಸಾವಿರ ಚ.ದ ಅಡಿಗಿಂತ ಅಧಿಕ 300 ಕಲ್ಯಾಣ ಮಂಟಪ, ಹೋಟೆಲ್‌ಗಳು ಮತ್ತು ಆರೋಗ್ಯ ಕೇಂದ್ರಗಳು
10 ಸಾವಿರ ಚ.ಅಡಿವರೆಗೆ 300
10 ಸಾವಿರದಿಂದ 50 ಸಾವಿರ ಚ.ಅಡಿವರೆಗೆ 500
50 ಸಾವಿರ ಚ.ಅಡಿಗಿಂತ ಹೆಚ್ಚಿದ್ದರೆ 600