Advertisement
ಗುರುವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾತನಾಡಿ, ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಶನಿವಾರ ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮೈದಾನಕ್ಕೆ ಆಗಮಿಸಲಿದ್ದಾರೆ. 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆ ಬಳಿಕ ಪರೇಡ್ ವಂದನೆ ಸ್ವೀಕರಿಸಿ ನಾಡ ಜನತೆ ಉದ್ದೇಶಿಸಿ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಜತೆಗೆ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೈಬಿಡಲಾಗಿದೆ. ನಾಡಗೀತೆ, ರೈತಗೀತೆ, ದೇಶ ಭಕ್ತಿ ಗೀತೆ ಮಾತ್ರ ಇರಲಿದೆ. ದೂರದರ್ಶನದಲ್ಲಿ ಕಾರ್ಯಕ್ರಮ ನೇರ ಪ್ರಸಾರವಾಗುತ್ತದೆ ಎಂದು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಹೇಳಿದರು. ಪರೇಡ್ ನಲ್ಲಿ 16 ತುಕಡಿ ಮಾತ್ರ
ಈ ಹಿಂದೆ 30ಕ್ಕೂ ಹೆಚ್ಚು ತುಕಡಿಗಳಿಂದ ಪಥಸಂಚಲನ (ಪರೇಡ್) ನಡೆಯುತ್ತಿತ್ತು. ಈ ಬಾರಿ 16 ತುಕಡಿಗಳು ಮಾತ್ರ ಇದ್ದು, 350 ಮಂದಿ ಭಾಗವಹಿಸುತ್ತಿದ್ದಾರೆ. ಎಲ್ಲರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
Related Articles
ಗುರುವಾರ ಪಥಸಂಚಲನ, ನಾಡಗೀತೆ ಹಾಗೂ ರೈತಗೀತೆಯ ಅಂತಿಮ ಹಂತದ ತಾಲೀಮು ನಡೆಯಿತು. ಸಾರ್ವಜನಿಕ ಪ್ರವೇಶ ನಿರ್ಬಂಧ ಹಿನ್ನೆಲೆ ಅತಿಗಣ್ಯರು, ಗಣ್ಯರು, ವಿಶೇಷ ಆಹ್ವಾನಿತರಿಗಾಗಿ 500 ಆಸನ, ವೇದಿಕೆ ಸಿದ್ಧಪಡಿಸಲಾಗಿದೆ.
Advertisement
ಕೋವಿಡ್ ವಾರಿಯರ್ಸ್ ಭಾಗಿಈ ಬಾರಿ ವಿಶೇಷವಾಗಿ ಕಾರ್ಯಕ್ರಮದಲ್ಲಿ 75 ಮಂದಿ ಕೋವಿಡ್ ವಾರಿಯರ್ಸ್ ಮತ್ತು 25 ಮಂದಿ ಸೋಂಕಿನಿಂದ ಗುಣಮುಖರು ಭಾಗಿಯಾಗುತ್ತಾರೆ. ಭದ್ರತೆ
ಕೋವಿಡ್-19 ಮಾರ್ಗಸೂಚಿ ಪ್ರಕಾರ ಕಾರ್ಯಕ್ರಮ ಆಚರಣೆ ಮಾಡಲಾಗುತ್ತದೆ. ಭದ್ರತೆಗಾಗಿ 47 ಸಿಸಿ ಕ್ಯಾಮರಾ, 680 ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲರಿಗೂ ಮಾಸ್ಕ್ ಕಡ್ಡಾಯ. ಪಾಸ್ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಮಾಹಿತಿ ನೀಡಿದರು.