ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್, ಉಪ ಮೇಯರ್ ಚುನಾವಣೆ ಶುಕ್ರವಾರ ನಡೆದಿದ್ದು , ಮೇಯರ್ ಆಗಿ ಕಾಂಗ್ರೆಸ್‌ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಆಯ್ಕೆಯಾಗಿದ್ದು , ಉಪಮೇಯರ್ ಆಗಿ ಜೆಡಿಎಸ್‌ನ ರಮೀಳಾ ಉಮಾಶಂಕರ್ ಅವರು ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಗೂ ಮುನ್ನ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ತಳ್ಳಾಟ ನೂಕಾಟ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಮೆಯರ್ ಪಟ್ಟ ಸಿಗದಿರುವುದು ಖಚಿತಗೊಂಡ ನಂತರ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು. ಇದರಿಂದಾಗಿ ಕೈ -ಜೆಡಿಎಸ್ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ತೀವ್ರ ಗದ್ದಲದ ನಡುವೆ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಲಾಯಿತು.259 ಸದಸ್ಯರ ಪೈಕಿ 253 ಮಂದಿ ಮಾತ್ರ ಹಾಜರಿದ್ದರು. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅನಂತ್‌ಕುಮಾರ್ ಮತ್ತು ನಾಲ್ವರು ಸದಸ್ಯರು ಗೈರಾಗಿದ್ದರು.
ಬಿಜೆಪಿ ಶಾಸಕರು,ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ಕೊರಳ ಪಟ್ಟಿ ಹಿಡಿದು ಎಳೆದಾಡಿದ ದೃಶ್ಯ ಕಂಡು ಬಂದಿತ್ತು.