Advertisement

ಸೀಲ್‌ಡೌನ್‌ ಪ್ರದೇಶಕ್ಕೂ ಅಗತ್ಯ ವಸ್ತು ಪೂರೈಕೆ ಪಾಲಿಕೆ ಜವಾಬ್ದಾರಿ

06:00 AM Jun 26, 2020 | Lakshmi GovindaRaj |

ಬೆಂಗಳೂರು: “ಕಂಟೈನ್ಮೆಂಟ್‌ ವಲಯದ ಸೀಲ್‌ಡೌನ್‌ ಪ್ರದೇಶಗಳಲ್ಲಿ ಜನರಿಗೆ ಆಹಾರ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸು ವುದು ಬಿಬಿಎಂಪಿಯ ಜವಾಬ್ದಾರಿ. ಇದರ ನಿರ್ವಹಣೆಯಲ್ಲಿ ವಿಫ‌ಲವಾದರೆ, ಮೂಲಭೂತ  ಹಕ್ಕುಗಳ ಉಲ್ಲಂಘನೆ ಆಗಲಿದೆ’ ಎಂದು ಹೈಕೋರ್ಟ್‌ ಎಚ್ಚರಿಸಿದೆ. ಅಗತ್ಯವಸ್ತುಗಳ ಪೂರೈಕೆ ಮಾಡದಿ ದ್ದರೆ, ಸಂವಿಧಾನದ ಕಲಂ 21ರ ಅನ್ವಯ ಮೂಲಭೂತ ಹಕ್ಕಗಳು ಉಲ್ಲಂಘನೆಯಾಗಲಿದೆ.

Advertisement

ಅದರಂತೆ ಬಾಧಿತರು ಬಿಬಿಎಂಪಿಯಿಂದ  ಪರಿಹಾರ ಕೇಳುವ ಹಕ್ಕು ಪಡೆದಿರುತ್ತಾರೆ. ತೊಂದರೆಯಾದರೆ ದೂರು ನೀಡುವ ವ್ಯವಸ್ಥೆಯನ್ನೂ ಪಾಲಿಕೆಯೇ ಮಾಡಬೇಕು ಎಂದು ಸೂಚಿಸಿದೆ. ಈ ಕುರಿತು ಸಲ್ಲಿಸಲಾಗಿರುವ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ  ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಸೀಲ್‌ ಡೌನ್‌ ಪ್ರದೇಶಗಳಲ್ಲಿ ಅವಶ್ಯಕತೆ ಇರುವ ಜನರಿಗೆ ಅಗತ್ಯವಸ್ತುಗಳು ಪೂರೈಸುವುದು ಪಾಲಿಕೆ ಜವಾಬ್ದಾರಿ ಎಂದು ಸರ್ಕಾರ ಹೇಳಿದೆ.

ಈ ಬಗ್ಗೆ 2020ರ  ಏಪ್ರಿಲ್‌ 19ರಂದು ಸ್ವತಃ ಬಿಬಿಎಂಪಿ ಆದೇಶ ಹೊರಡಿಸಿದೆ. ಈಗ ನಗರದಲ್ಲಿ ಸೀಲ್‌ಡೌನ್‌ ಆಗಿರುವ ಪ್ರದೇಶಗಳಲ್ಲಿ ಬಹುತೇಕ ಏರಿಯಾಗಳಲ್ಲಿ ಬಡವರು ವಾಸ ಮಾಡುತ್ತಿದ್ದಾರೆ. ಹಾಗಾಗಿ, ಈ ನಿಟ್ಟಿನಲ್ಲಿ ಬಿಬಿಎಂಪಿಗೆ ಸೂಕ್ತ ನಿರ್ದೇಶನ  ನೀಡುವಂತೆ ಅರ್ಜಿದಾರರು ಕೋರಿದರು. ಅದಕ್ಕೆ ಬಿಬಿಎಂಪಿ ಪರ ವಕೀಲರು, ನಗರದಲ್ಲಿ 400ಕ್ಕೂ ಹೆಚ್ಚು ಕಂಟೈನ್ಮೆಂಟ್‌ ವಲಯಗಳಿವೆ ಇಷ್ಟೊಂದು ದೊಡ್ಡ ಸಂಖ್ಯೆ ಪ್ರದೇಶಗಳಗೆ ರೇಷನ್‌ ಕಿಟ್‌ ವಿತರಣೆ ತುಂಬಾ ಕಷ್ಟದ ಕೆಲಸ. ಇದು  ಬಿಬಿಎಂಪಿಯಿಂದ ಸಾಧ್ಯವಿಲ್ಲ.

ಸರ್ಕಾರ ಆಹಾರ ಧಾನ್ಯ ನೀಡಿದರೆ, ವಿತರಿಸಲು ಪಾಲಿಕೆ ಸಹಾಯ ಮಾಡಬಹುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ತಾನೇ ಹೊರಡಿಸಿದ ಆದೇಶದ ಬಗ್ಗೆ ಪಾಲಿಕೆಗೆ ಸ್ಪಷ್ಟತೆ ಇಲ್ಲ. ಸೂಕ್ತ  ನಿರ್ದೇಶನಗಳನ್ನು ನೀಡಬೇಕು’ ಎಂದು ಸೂಚಿಸಿ ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next