Advertisement

BBMP: “ಗ್ರೇಟರ್‌ ಬೆಂಗಳೂರು’ ರಚನೆಗೆ ಪರ, ವಿರೋಧ

11:17 AM Jun 19, 2024 | Team Udayavani |

ಬೆಂಗಳೂರು: ಸದೃಢ ಆಡಳಿತಾತ್ಮಕ ಹಿತದೃಷ್ಟಿಯಿಂದ ಬಿಬಿಎಂಪಿ ಪುನರ್‌ ರಚನೆ ಸಂಬಂಧ ಸರ್ಕಾರ ನೇಮಕ ಮಾಡಿರುವ ತಜ್ಞರ ಸಮಿತಿ ಬೆಂಗಳೂರು ವ್ಯಾಪ್ತಿಯನ್ನು ಹಿಗ್ಗಿಸಿ “ಗ್ರೇಟರ್‌ ಬೆಂಗಳೂರು’ ರಚನೆಗೆ ಸೇರಿದಂತೆ ಹಲವು ಸಲಹೆಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದು, “ಗ್ರೇಟರ್‌ ಬೆಂಗಳೂರು’ ಪರಿಕಲ್ಪನೆಗೆ ರಾಜಕೀಯ ವಲಯದಲ್ಲಿ ಭಿನ್ನ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

Advertisement

ಇದೇ ವೇಳೆ ಯಾವುದೇ ಕಾರಣಕ್ಕೂ ನಾಡಪ್ರಭುಕೆಂಪೇಗೌಡರ ನಾಡಿನಲ್ಲಿ “ಗ್ರೇಟರ್‌ ಬೆಂಗಳೂರು’ ಕಲ್ಪ ನೆಯೇ ಬೇಡ ಎಂಬುದು ಕನ್ನ ಡ ಪರ ಹೋರಾಟ ಗಾರರ ನಿಲು ವಾಗಿದೆ. ಹೊಸ ಪರಿಕಲ್ಪನೆಯ ಸಾಧಕ ಬಾಧಕಗಳ ಬಗ್ಗೆ ಪಾಲಿಕೆ ಮಾಜಿ ಮೇಯರ್‌ಗಳು ಕೂಡ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಬಿಬಿಎಂಪಿ ಪುನರ್‌ ರಚನೆ ಸಂಬಂಧ ಸರ್ಕಾರ ನೇಮಕ ಮಾಡಿರುವ ತಜ್ಞರ ಸಮಿತಿ “ಗ್ರೇಟರ್‌ ಬೆಂಗ ಳೂರು ರಚನೆ’ ಪರಿಕಲ್ಪನೆ ವ್ಯಕ್ತಪಡಿಸುವುದು ಭವಿಷ್ಯ ತ್ತಿನ ಬೆಂಗಳೂರಿನ ಹಿತ ದೃಷ್ಟಿಯಿಂದ ಉತ್ತಮ ನಡೆಯಾಗಿದೆ.

ನಾಡ ಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಈಗ 25 ಕಿ.ಮೀ.ಗೂ ಅಧಿಕ ಮಟ್ಟದಲ್ಲಿ ವಿಸ್ತಾರ ವಾಗಿದೆ. ಸ್ಥಳೀಯ ಸಂಸ್ಥೆಗಳು ಎಷ್ಟು ಚಿಕ್ಕದಾಗಿ ರು ತ್ತದೆಯೋ ಅಷ್ಟು ಆಡಳಿತ ವ್ಯವಸ್ಥೆ ಚೊಕ್ಕದಾಗಿ ರುತ್ತದೆ. ಸ್ಥಳೀಯ ಸಂಸ್ಥೆಗಳು ದೊಡ್ಡ ದಾದಷ್ಟು ಆಡ ಳಿತದ ಹಿಡಿತ ಕೈತಪ್ಪುವ ಸಂಭವ ಇರು ತ್ತದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ, ಮಾಜಿ ಮೇಯರ್‌ ಪಿ.ಆರ್‌.ರಮೇಶ್‌ ಅಭಿಪ್ರಾಯ ಪಡುತ್ತಾರೆ.

ಈ ಹಿಂದೆ ಕೆಂಪೇಗೌಡರು ಹಾಕಿದ 4 ಗೋಪುರ (ಮೇಖ್ರಿ ಸರ್ಕಲ್‌, ಲಾಲ್‌ಬಾಗ್‌, ಹಲಸೂರು, ಕೆಂಪಾಂಬುಧಿ ಕೆರೆ)ಗಳ ಪ್ರದೇಶ ಮಾತ್ರ ಬೆಂಗಳೂರು ಆಗಿತ್ತು. ಆದರೆ, ಈಗ ಆ ಗಡಿ ಮೀರಿ ಹರಡಿಕೊಂಡಿದೆ. ಹಳ್ಳಿಗಳು ನಗರಗಳಾಗಿ ರೂಪಾಂತರ ಗೊಂಡಿವೆ. ಜತೆಗೆ ಜನಸಂಖ್ಯೆ ಕೂಡ 1.30 ಕೋಟಿ ಗೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಉತ್ತಮ ಸವಲತ್ತುಗಳ ಜತೆಗೆ ಪಾರದರ್ಶಕ ಆಡಳಿತ ನೀಡಬೇಕಾಗುತ್ತದೆ.

ಭವಿಷ್ಯತ್ತಿನ ಬೆಂಗಳೂರಿನ ಸಮಗ್ರ ಅಧ್ಯಯನ ದೃಷ್ಟಿಯಿಂದ ಸರ್ಕಾರ ಉತ್ತಮ ನಿಲುವು ತೆಗೆದು ಕೊಳ್ಳಲಿದೆ ಎನ್ನುತ್ತಾರೆ. ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌, ಭವಿಷ್ಯತ್ತಿನ ದೃಷ್ಟಿಯನ್ನು ಇಟ್ಟುಕೊಂಡು ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ಮಾಜಿ ಮೇಯರ್‌, ಪಾಲಿಕೆ ಮಾಜಿ ಸದಸ್ಯರು, ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ಕನ್ನಡಪರ ಹೋರಾಟ ಗಾರ ರೊಂದಿಗೆ ಚರ್ಚೆ ನಡೆಸಿ ಸರ್ಕಾರ ” ಗ್ರೇಟರ್‌ ಬೆಂಗಳೂರು’ ಬಗ್ಗೆ ಹೆಜ್ಜೆಯನ್ನು ಇರಿಸಲಿ ಎಂದು ಸಲಹೆ ನೀಡುತ್ತಾರೆ.

Advertisement

ಪ್ರಯೋಜನವಿಲ್ಲ:

ರಾಜಧಾನಿ ಬೆಂಗಳೂರಿಗೆ “ಗ್ರೇಟರ್‌ ಬೆಂಗಳೂರು’ ಪರಿಕಲ್ಪನೆ ಬೇಕಾಗಿಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯನ್ನು 8 ವಲಯಗಳನ್ನಾಗಿ ರಚನೆ ಮಾಡಲಾಗಿದೆ. ಅದರಲ್ಲಿ ಹೊಸ ಪರಿಕಲ್ಪ ನೆಯ ರೀತಿಯಲ್ಲಿ 3 ಇಲ್ಲವೆ 5 ಪಾಲಿಕೆ ರಚನೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಈಗಿನ ಪರಿಸ್ಥಿತಿ ಯಲ್ಲಿ ಎಂಟೂ ವಲಯಗಳ ಪಾಲಿಕೆ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಬಹುದು. ಜತೆಗೆ 2020ರ ಬಿಬಿಎಂಪಿ ಹೊಸ ಬೈಲಾ ಪ್ರಕಾರ ಪಾಲಿಕೆ ಆಯುಕ್ತರಿಗೆ ಮತ್ತು ಶಾಸಕರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಇದನ್ನು ಸರ್ಕಾರ ಸರಿಯಾಗಿ ಕಾರ್ಯಗತ ಮಾಡಲಿ ಎಂದು ಬಿಜೆಪಿ ಮುಖಂಡ, ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಹೇಳುತ್ತಾರೆ.

ಆರ್ಥಿಕ ಅಸಮತೋಲನ ನಡೆ:

ಈಗಗಾಲೇ ಗ್ರೇಟರ್‌ ಬಾಂಬೆ ಆಡಳಿತ ನೋಡಿದ್ದೇವೆ. ಅಲ್ಲಿನ ಆv ‌ಳಿತ ವ್ಯವಸ್ಥೆ ಅದ್ವಾನವಾಗಿದೆ. ಈ ಎಲ್ಲ ಕಾರಣ ಗಳಿಂದಾಗಿ “ಗ್ರೇಟರ್‌ ಬೆಂಗಳೂರಿಗೆ’ ನಮ್ಮ ವಿರೋಧ ವಿದೆ ಎನ್ನು ತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಮಹ ದೇವಪುರ ಮತ್ತು ಪೂರ್ವ ವಲಯದಲ್ಲಿ ಹೆಚ್ಚಿನ ಆದಾಯ ಬಿಬಿಎಂಪಿ ಸಂದಾಯವಾಗುತ್ತದೆ. ಈ ವಲಯಗಳ ವ್ಯಾಪ್ತಿಯಲ್ಲಿ 3400ಕ್ಕೂ ಅಧಿಕ ಐಟಿ ಸಂಸ್ಥೆಗಳು, 89 ಟೆಕ್‌ ಪಾಕ್‌ ಗಳು ಇಲ್ಲಿ ನೆಲೆಯೂ ರಿದ್ದು ಶ್ರೀಮಂತ ವಲಯಗಳು ಎಂದು ಕರೆಸಿಕೊಂಡಿವೆ. ಈಗಿರುವ ವ್ಯವಸ್ಥೆಯನ್ನು ಬದಲಾ ಯಿಸಿದರೆ. ಮುಂದೆ ಇದು ಆರ್ಥಿಕ ಅಸಮತೋಲನಕ್ಕೆ ಎಡೆ ಮಾಡಿ ಕೊಡಲಿದೆ ಎಂಬ ಆತಂಕವನ್ನು ಪಾಲಿಕೆ ಮಾಜಿ ಸದಸ್ಯ ಎನ್‌.ಆರ್‌.ರಮೇಶ್‌ ವ್ಯಕ್ತಪಡಿಸುತ್ತಾರೆ.

ರಾಜಧಾನಿ ಬೆಂಗಳೂರಿನ ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ವಲಯಗಳನ್ನು ರಚನೆ ಮಾಡಿ ವಿಕೇಂದ್ರೀಕ ರಣದ ಹೆಜ್ಜೆಯಿರಿಸಿದೆ. ಎಂಟೂ ವಲಯಗ ಳಿಗೆ ಐಎಎಸ್‌ ಅಧಿಕಾರಿಗಳನ್ನು ವಲಯ ಆಯುಕ್ತರನ್ನಾಗಿ ನೇಮಿಸಿದೆ. ಜತೆಗೆ ಜಂಟಿ ಆಯುಕ್ತರನ್ನೂ ಕೂಡ ನೇಮಕ ಮಾಡಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಈ ಎಂಟೂ ವಲಯಗಳಿಗೆ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸ ಮಾಡಲಿ. ಆಡಳಿತ ನಿರ್ವಹಣೆ ದೃಷ್ಟಿಯಿಂದ ವಿಭಜನೆ ಯೊಂದೆ ಪರಿಹಾರವಲ್ಲ. ಬಿಬಿಎಂಪಿ ವಿಭಜನೆ ಕನ್ನಡಿಗರ ಹಿತಾಶಕ್ತಿಗೆ ಮಾರಕ.  ಟಿ.ಎ.ನಾರಾಯಣ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ

“ಗ್ರೇಟರ್‌ ಬೆಂಗಳೂರು ರಚನೆ’ ಬುದ್ಧಿ ಇಲ್ಲದವರು ಮಾಡುವ ಕೆಲಸ. ಗ್ರೇಟರ್‌ ಬೆಂಗಳೂರು ಪರಿಕಲ್ಪನೆ ಬಿಟ್ಟು ಸರ್ಕಾರ ಕೂಡಲೇ ಬಿಬಿಎಂಪಿಗೆ ಚುನಾವಣೆ ನಡೆಸಲಿ. ಈಗಾಗಲೇ ಬೆಂಗಳೂರಿನಲ್ಲಿ ಭಾಷಾ ವಿಚಾರದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿ ಹೋಗಿದ್ದಾರೆ. ಮತ್ತೆ ಹಲವು ಪಾಲಿಕೆ ರಚನೆ ಮಾಡಿದರೆ ತೆಲುಗು, ತಮಿಳು, ಮರಾಠಿ, ರಾಜಸ್ಥಾನಿಗಳ ಕೈಗೆ ರಾಜಧಾನಿಯ ಆಡಳಿತ ನೀಡಬೇಕಾದ ಪರಿಸ್ಥಿತಿ ಬರಲಿದೆ. ಒಂದು ವೇಳೆ ಸರ್ಕಾರ “ಗ್ರೇಟರ್‌ ಬೆಂಗಳೂರು ರಚನೆ’ ಗೆ ಮುಂದಾದರೆ ಪಾಲಿಕೆ ಎದುರು ಧರಣಿ ಕೂರುತ್ತೇನೆ.  – ವಾಟಾಳ್‌ ನಾಗರಾಜ್‌, ಕನ್ನಡ ಒಕ್ಕೂಟದ ರಾಜ್ಯಾಧ್ಯಕ್ಷ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next