ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ರಚನೆ ಆಗಿರುವ ಎರಡು ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರಕ್ಕೆ ಜನಸಾಮಾನ್ಯರು ದೊಡ್ಮನೆಯೊಳಗೆ ಎಂಟ್ರಿ ಆಗಿದ್ದಾರೆ. ಬಂದಿರುವ ಜನರನ್ನು ಉದ್ದೇಶಿಸಿ ತಮಗೆ ಮತನೀಡಿ ಎಂದು ಆಯಾ ಪಕ್ಷದ ಅಧ್ಯಕ್ಷರು ಕೇಳಿಕೊಂಡಿದ್ದು, ಇನ್ನೊಂದೆಡೆ ಬಂದಿರುವ ಜನರಿಗೆ ಸ್ಪರ್ಧಿಗಳು ನೃತ್ಯದ ಮೂಲಕ ರಂಜಿಸಿದ್ದಾರೆ.
ಮನೆಗೆ ಬಂದ ಜನ ಸಾಮಾನ್ಯರು ಎರಡು ಪಕ್ಷದ ಬಹಿರಂಗ ಪ್ರಚಾರವನ್ನು ಕೇಳಿ, ತಮ್ಮ ಮತವನ್ನು ನೀಡಿದ್ದಾರೆ. ಮತವನ್ನು ಲೆಕ್ಕ ಮಾಡಿದ ಬಳಿಕ ಬಹುಮತವನ್ನು ಜನ ʼಪ್ರಾಮಾಣಿಕ ಸಮರ್ಥರ ನ್ಯಾಯಯುತ ಪಕ್ಷʼಕ್ಕೆ ನೀಡಿದ್ದಾರೆ. ಆ ಮೂಲಕ ವಿಶೇಷ ಅಧಿಕಾರವನ್ನು ಪಡೆದುಕೊಂಡಿದೆ. ಎದುರಾಳಿ ಪಕ್ಷದ ಅಧ್ಯಕ್ಷರನ್ನು ಹೊರತುಪಡಿಸಿ ಒಬ್ಬರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಡುವ ಅಧಿಕಾರವನ್ನು ಪಡೆದುಕೊಂಡಿದೆ. ಎದುರಾಳಿ ಪಕ್ಷ ಭವ್ಯಾ ಗೌಡ ಅವರನ್ನು ಕ್ಯಾಪ್ಟನ್ಸಿಯಿಂದ ಹೊರಗಿಡಲಾಗಿದೆ.
ಕಿಚ್ಚನ ಪಂಚಾಯ್ತಿ ಬದಲಿಗೆ ಬದಲಿಗೆ ಬಂದ್ರು ಯೋಗರಾಜ್ ಭಟ್ರು.. ಕಿಚ್ಚ ಸುದೀಪ್(Kiccha Sudeep) ಅವರು ಈ ವಾರ ಬಿಗ್ ಬಾಸ್ ಶೂಟಿಂಗ್ ನಲ್ಲಿ ಭಾಗಿಯಾಗದ ಕಾರಣ, ಶನಿವಾರ ಪಂಚಾಯ್ತಿಗೆ ನಿರ್ದೇಶಕ ಯೋಗರಾಜ್ ಭಟ್ರು ದೊಡ್ಮನೆಗೆ ಬಂದಿದ್ದಾರೆ.
ಇಲ್ಲಿಗೆ ಬರಬೇಕೆನ್ನುವ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಜನತೆ ದೃಷ್ಟಿಯಲ್ಲಿ ನೀವೆಲ್ಲ ಸ್ಟಾರ್‌ಗಳು. ಪಬ್ಲಿಕ್ ಇದನ್ನು ಡ್ರಾಮಾ ಅಂಥ ಅಂದುಕೊಳ್ಳುವ ರೀತಿ ಬದುಕಬೇಡಿ. ಜನ ಇಲ್ಲಿ ನಿಮ್ಮನ್ನು ಅವರ ಸ್ಥಾನದಲ್ಲಿ ನಿಂತು ನೋಡುತ್ತಾರೆ ಎಂದು ಯೋಗರಾಜ್ ಭಟ್ರು ಸ್ಪರ್ಧಿಗಳಿಗೆ ವ್ಯಕ್ತಿತ್ವದ ಪಾಠ ಮಾಡಿದ್ದಾರೆ.
ಯೋಗರಾಜ್ ಭಟ್ರು ಸ್ಪರ್ಧಿಗಳ ಮುಂದೆ ಪಂಚಾಯ್ತಿ ನಡೆಸಿಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಈ ವಾರ ಬರಲ್ಲ ಎಂದಿದ್ದಾರೆ.
ಸ್ಪರ್ಧಿಗಳ ಮೇಲೆ ಕೇಳಿ ಬಂತು ನಾನಾ ಆರೋಪ..
ಮೊದಲು ಉಗ್ರಂ ಮಂಜು ಅವರನ್ನು ಕರೆಸಿ, ಮನೆಯ ಎಲ್ಲ ಸದಸ್ಯರನ್ನು ಟಾರ್ಗೆಟ್ ಮಾಡಿ ಮಾತನಾಡುವುದು, ವೈಯಕ್ತಿಕ ನಿಂದನೆ ಮಾಡುವುದು, ಮುಂದೆ ಒಂದು ರೀತಿ ಹಿಂದೆ ಒಂದು ರೀತಿ ಇರುವುದು, ಹೊಸ ಗುಂಪು ಕಟ್ಟುವುದು ಎನ್ನುವ ಆರೋಪಗಳು ಕೇಳಿಬಂದಿದೆ.
ಇದಕ್ಕೆ ಮಂಜು ಅವರು ರಿಯಾಕ್ಟ್ ಮಾಡಿದ್ದು, ಟಾಸ್ಕ್ ಸಂದರ್ಭದಲ್ಲಷ್ಟೇ ಹೇಳಿದ್ದೇನೆ. ಕೋಪದ ಭರದಲ್ಲಿ ಮಾತುಗಳನ್ನು ಆಡಿದ್ದೇನೆ. ವಿನಃ ಯಾರಿಗೂ ಹಲ್ಕಾ ಮಾತುಗಳನ್ನು ಆಡಿಲ್ಲ.
ಮೊದಲು ಅಣ್ಣ ತಂಗಿಯಂಥ ಹೇಳಿ ಆ ಮೇಲೆ ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಂಜು ಮಾತನಾಡ್ತಾರೆ ಎಂದು ಭವ್ಯ ಅವರು ಗಂಭೀರ ಆರೋಪ ಮಾಡಿದ್ದು, ಇದು ನನಗೆ ನೋವು ತಂದಿದೆ ಎಂದಿದ್ದಾರೆ. ಭವ್ಯಾ ಅವರ ನೆರಳಿನಲ್ಲಿ ತಿವಿಕ್ರಮ್ ಅವರು ಆಡುತ್ತಿದ್ದಾರೆ ಎಂದು ಮಂಜು ಹೇಳಿದ್ದರು ಎಂದು ಮಾನಸ ಅವರು ಹೇಳಿದ್ದಾರೆ.
ನೀವು ಕೂಡ ಇಬ್ಬರು ಹುಡಗಿಯರ ಜತೆ ಇರುತ್ತೀರಾ ಅಲ್ವಾ ನಿಮಗೂ ನಾವು ಅದೇ ರೀತಿ ನಾವು ಮಾತನಾಡಿದ್ರೆ ಸರಿ ಆಗುತ್ತಾದಾ? ಎಂದು ಭವ್ಯ ಅವರು ಮಂಜು ಅವರಿಗೆ ಪ್ರಶ್ನಿಸಿದ್ದಾರೆ.
ಮಾನಸ ಅವರನ್ನು ಕರೆದು ಅವರ ಮೇಲಿನ ಆರೋಪಗಳನ್ನು ಯೋಗರಾಜ್ ಭಟ್ರು ಓದಿದ್ದಾರೆ.
ತನ್ನದಲ್ಲದ ವಿಚಾರಗಳಿಗೆ ಮೂಗು ತೂರಿಸಿಕೊಂಡು ಮಾತನಾಡುತ್ತಾರೆ, ನಾಲಗೆ ಮೇಲೆ ಹಿಡಿತ ಕಡಿಮೆ ಎನ್ನುವ ಆರೋಪ ಮಾನಸ ಅವರ ಮೇಲೆ ಬಂದಿದೆ. ಇತರರ ಚರ್ಚೆಗಳಲ್ಲಿ ಭಾಗಿಯಾಗಿ ಚರ್ಚೆಯ ದಿಕ್ಕನ್ನೇ ಬದಲಾಯಿಸುವುದು ಎನ್ನುವ ಆರೋಪಗಳು ಮಾನಸ ಅವರ ಮೇಲೆ ಕೇಳಿಬಂದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾನಸ, ನಾನು ಮನೆಯಲ್ಲಿ ಮಾತನಾಡುವುದು ಹೀಗೆಯೇ, ನನ್ನ ಧ್ವನಿ ಮಾತ್ರ ಜೋರಾಗಿರುತ್ತದೆ ಎಂದು ಹೇಳಿದ್ದಾರೆ.
ಇನ್ನು ಹನುಮಂತು ಅವರನ್ನು ಕರೆದು, ಹನುಮಂತು ನಿಜವಾಗಿಯೂ ಮುಗ್ಧನಾ ಅಥವಾ ಸ್ಮಾರ್ಟ್ ಆಗಿದ್ದಾನಾ? ಈ ಅವಕಾಶನಾ ಈತ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನಾ? ಹನುಂತು ಬಹಳ ಖತರ್ ನಾಕ್ ಇದ್ದಾನೆ ಎನ್ನುವುದನ್ನು ನಂಬುತ್ತೀರಾ? ಎನ್ನುವ ಪ್ರಶ್ನೆಗೆ ಸಹ ಸ್ಪರ್ಧಿಗಳು ಉತ್ತರಿಸಿದ್ದಾರೆ.
ಬುದ್ದಿವಂತ ಆಗಿದ್ದಾನೆ, ದಡ್ಡ ಅಂತೂ ಅಲ್ಲವೇ ಅಲ್ಲ, ಇಷ್ಟು ಶೋ ಮಾಡಿ ಗೆದ್ದುಕೊಂಡು ಬಂದಿದ್ದಾನೆ ಅಂದರೆ ಬುದ್ದಿವಂತನೇ ಆಗಿದ್ದಾನೆ. ತಲೆಯಿದ್ದೆ ಅವನು ಬಂದಿದ್ದಾನೆ, ತಲೆ ಇದ್ದೇ ಆಡುತ್ತಿದ್ದಾನೆ ಎಂದಿದ್ದಾರೆ.
ನೀನು ಆಡಲು ಬಂದಿರುವುದು ಪ್ರೇಕ್ಷಕರಂತೆ ಇರುವಂತೆ ಇರಲು ಬಂದಿರುವುದಲ್ಲ. ಎಲ್ಲರೊಂದಿಗೆ ಬೆರೆಯಬೇಕೆಂದು ಯೋಗರಾಜ್ ಭಟ್ರು ಹನುಮಂತು ಅವರಿಗೆ ತಿಳಿವಳಿಕೆಯ ಪಾಠವನ್ನು ಮಾಡಿದ್ದಾರೆ.