ಬೆಂಗಳೂರು: ಬಿಗ್ ಬಾಸ್ ಆಟ ಫಿನಾಲೆಯತ್ತ ಸಾಗುತ್ತಿದೆ. ಸ್ಪರ್ಧಿಗಳು ವೈಯಕ್ತಿಕ ಆಟದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಮುಂದಾಗುತ್ತಿದ್ದಾರೆ.
ಈ ನಡುವೆ ದೊಡ್ಮನೆಯಿಂದ 13ನೇ ವಾರದಿಂದ ಒಬ್ಬರು ಆಚೆ ಬಂದಿದ್ದಾರೆ. ಆ ಮೂಲಕ ಬಿಗ್ ಬಾಸ್ ಆಟದಿಂದ ಖ್ಯಾತ ಸ್ಪರ್ಧಿ ಔಟ್ ಆಗಿದ್ದಾರೆ.
ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಇಡೀ ವಾರ ನಡೆದ ವಿಚಾರಗಳ ಬಗ್ಗೆ ಮಾತನಾಡಿ, ಖಡಕ್ ಆಗಿಯೇ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಭವ್ಯ ಅವರ ಆಟದ ವೈಖರಿಗೆ ಕಿಚ್ಚ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಯಾಪ್ಟನ್ಸಿ ವಿಚಾರವಾಗಿ ನಡೆದ ಕೆಲ ಗೊಂದಲಗಳ ಮಾತನಾಡಿದ್ದಾರೆ. ಅದರಂತೆ ನಾಮಿನೇಟ್ ಆಗಿರುವ 8 ಸದಸ್ಯರಲ್ಲಿ ಒಬ್ಬೊಬ್ಬರನ್ನು ಕಿಚ್ಚ ಸೇಫ್ ಎಂದು ಹೇಳಿದ್ದಾರೆ. ಹನುಮಂತು ಹಾಗೂ ಧನರಾಜ್ ಅವರು ಆರಂಭಿಕವಾಗಿ ಸೇವ್ ಆಗಿದ್ದಾರೆ.
ಚೈತ್ರಾ, ಗೌತಮಿ, ಮೋಕ್ಷಿತಾ, ತ್ರಿವಿಕ್ರಮ್, ಮಂಜು ಹಾಗೂ ಐಶ್ವರ್ಯಾ ಅವರಲ್ಲಿ ಕಡಿಮೆ ವೋಟ್ ಪಡೆದ ಒಬ್ಬರು ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಮೂಲಗಳ ಪ್ರಕಾರ ಐಶ್ವರ್ಯಾ ಹಾಗೂ ಮೋಕ್ಷಿತಾ ಅವರು ಬಾಟಂನಲ್ಲಿರಲ್ಲಿದ್ದಾರೆ. ಈ ಪೈಕಿ ಐಶ್ವರ್ಯಾ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.
ಶಿಶಿರ್ ಅವರು ಮನೆಯಿಂದ ಆಚೆ ಬಂದ ಬಳಿಕ ಐಶ್ವರ್ಯಾ ಅವರು ದೊಡ್ಮನೆ ಮೊದಲ ಎರಡು ದಿನ ಡಲ್ ಆಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಉತ್ತಮವಾಗಿ ಆಡುತ್ತಿದ್ದರು.
ಈ ಹಿಂದೆ ಚೈತ್ರಾ ಅವರೊಂದಿಗೆ ಅವರನ್ನು ಕನ್ಫೆಷನ್ ರೂಮ್ ನಲ್ಲಿಟ್ಟು ಎಲಿಮಿನೇಷನ್ ಚಮಕ್ ನೀಡಲಾಗಿತ್ತು.