ಬೆಂಗಳೂರು: ಬಿಗ್ ಬಾಸ್ (Bigg Boss Kannada11) ಮನೆಯಲ್ಲಿ ಫಿನಾಲೆ ಟಿಕೆಟ್ಗಾಗಿ ನಡೆಯುತ್ತಿರುವ ಟಾಸ್ಕ್ಗಳನ್ನು ಗೆಲ್ಲಲು ಸ್ಪರ್ಧಿಗಳು ಹಣಾಹಣೆ ನಡೆಸುತ್ತಿದ್ದಾರೆ. ಒಬ್ಬರಿಗಿಂತ ಒಬ್ಬರು ತಾವು ಏನೇ ಮಾಡಿ ಟಾಸ್ಕ್ ಗೆಲ್ಲಬೇಕೆನ್ನುವ ಹಟಕ್ಕೆ ಬಿದ್ದಿದ್ದಾರೆ.
ಭವ್ಯ ಚೈತ್ರಾ, ಧನರಾಜ್, ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಅವರು ಈ ವಾರ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ. ಇದರೊಂದಿಗೆ ಕ್ಯಾಪ್ಟನ್ ನೇರವಾಗಿ ಒಬ್ಬರನ್ನು ನಾಮಿನೇಟ್ ಮಾಡಲಿದ್ದಾರೆ.
ಚೆಂಡು ಸಂಗ್ರಹ ಹಾಗೂ ಬಲೂನ್ ಟಾಸ್ಕ್ ಗಳ ಬಳಿಕ ಇದೀಗ ಮತ್ತೊಂದು ಭಿನ್ನವಾದ ಚೆಂಡುಗಳ ಟಾಸ್ಕ್ ನೀಡಲಾಗಿದೆ. ಅದರಂತೆ ಈಗಾಗಲೇ ರಚನೆಯಾಗಿರುವ ತಂಡಗಳು ಬಿಗ್ ಬಾಸ್ ಸೂಚಿಸುವ ಸಂಖ್ಯೆಯತ್ತ ತೆರಳಬೇಕು. ಸದಸ್ಯರ ಕಾಲಿಗೆ ಹಗ್ಗವನ್ನು ಕಟ್ಟಲಾಗಿದೆ. ಕುಂಟುತ್ತಾ ಚೆಂಡನ್ನು ಸಂಗ್ರಹಿಸಿ ಆ ಬಳಿಕ ಅದನ್ನು ತಮಗೆ ಮೀಸಲಿರುವ ಬಾಸ್ಕೆಟ್ಗೆ ಹಾಕಬೇಕು.
ಇದರಲ್ಲಿ ಮಂಜು ಅಗ್ರೆಸಿವ್ ಆಗಿ ಆಡಿದ್ದಾರೆ. ಮಂಜಣ್ಣ ತಳ್ಳುತ್ತಿದ್ದಾರೆ ಎಂದು ಭವ್ಯ ಸಿಟ್ಟಿನಿಂದಲೇ ಹೇಳಿದ್ದಾರೆ. ನೀವು ಮೊದಲು ಬೇರೆಯವರಿಗೆ ಹೇಳೋಕ್ಕೂ ಮುಂಚೆ ಕರೆಕ್ಟಾಗಿ ಆಟ ಆಡಿ ಭವ್ಯ ಹೇಳಿದ್ದಾರೆ.
ಕೊನೆಯದಾಗಿ ಚೆಂಡು ಸಂಗ್ರಹಿಸಲು ಇನ್ನೊಬ್ಬರ ಮೈ ಮೇಲೆ ಬಿದ್ದ ಮಂಜು ಅವರನ್ನು ಉಸ್ತುವಾರಿ ವಹಿಸಿರುವ ರಜತ್ ಅವರು ನೀನು ಆಡ್ತಾ ಇರೋದು ಸರಿಯಲ್ಲ ಮಂಜು ಎಂದು ಹೇಳಿದ್ದಾರೆ.
ನಿಮ್ಮೊಳಗೆ ಚರ್ಚಿಸಿ ಒಬ್ಬರನ್ನು ʼಟಿಕೆಟ್ ಟು ಫಿನಾಲೆʼ ಓಟದಿಂದ ಹೊರಗೆ ಇಡಬೇಕೆಂದು ಬಿಗ್ ಬಾಸ್ ಹೇಳಿದ್ದಾರೆ. ಇದಕ್ಕೆ ಮಂಜು, ಧನರಾಜ್, ರಜತ್, ಗೌತಮಿ ಹಾಗೂ ಇತರೆ ಕೆಲವರು ಚೈತ್ರಾ ಅವರ ಹೆಸರನ್ನು ಹೇಳಿದ್ದಾರೆ.
ಅವರು ಯಾವಾಗಲೂ ವಾದಾ ಮಾಡುತ್ತಲೇ ಇರುತ್ತಾರೆ ಎಂದು ಮಂಜು ಹೇಳಿದ್ದಾರೆ. ತಪ್ಪನ್ನು ಸರಿ ಮಾಡಿಕೊಂಡು ಮುಂದೆ ಹೋಗುವ ಗುಣ ಅವರಲ್ಲಿ ಇಲ್ಲ ಎಂದು ಧನರಾಜ್ ಹೇಳಿದ್ದಾರೆ. ಎಲ್ಲರೂ ಒಂದು ಹೆಸರು ತೆಗೆದುಕೊಳ್ಳುತ್ತಾ ಇದ್ದಾರೆ ಅಂಥ ಹೇಳಿದ್ರೆ ಅವರ ಕಡೆಯಿಂದ ಮತ್ತೆ ಮತ್ತೆ ತಪ್ಪು ಆಗುತ್ತಾ ಇದೆ ಅಂಥ ಅರ್ಥವೆಂದು ಗೌತಮಿ ಹೇಳಿದ್ದಾರೆ.
ಒಬ್ಬರನ್ನು ಟಾರ್ಗೆಟ್ ಮಾಡಿ ಈಗಲೇ ಪ್ಲ್ಯಾನ್ ಮಾಡುತ್ತಾರೆ. ಈ ನೂರು ದಿನವೂ ಈ ಮನೆಯಲ್ಲಿ ನಡೆದದ್ದು ಇದೆ. ಆಡೋಕೆ ಕೊಡ್ತಾ ಇರಲಿಲ್ಲ. ಇದೇ ತರ ಟಾರ್ಗೆಟ್ ಮಾಡಿ ಆಟದಿಂದ ಹೊರಗಡೆ ಇಡ್ತಾ ಇದ್ರು. ಆಡೋಕೆ ಈಗಿನಿಂದ ಬರ್ತಾ ಇದ್ದೆ ಅಲ್ಲಿಂದಲೇ ಅಡ್ಡಗಾಲು ಇಟ್ರು ಎಂದು ಚೈತ್ರಾ ಕಣ್ಣೀರು ಇಟ್ಟಿದ್ದಾರೆ