Advertisement

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

03:15 PM Dec 19, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ವಾರದ ಎಲ್ಲಾ ಟಾಸ್ಕ್‌ಗಳು ಮುಕ್ತಾಯ ಕಂಡಿದೆ. ನಾಮಿನೇಷನ್‌ ವಿಚಾರದ ನಡುವೆ ವಾಗ್ವಾದ ನಡೆದಿದ್ದು ಕೊನೆ ಹಂತದ ನಾಮಿನೇಷನ್‌ ಪ್ರಕ್ರಿಯೆ ನಡೆಯಲಿದೆ.

Advertisement

ಈಗಾಗಲೇ ಎರಡು ತಂಡಗಳ ನಡುವೆ ಟಾಸ್ಕ್‌ನಲ್ಲಿ ಹಣಾಹಣಿ ನಡೆದಿದ್ದು, ಕೊನೆಯ ಟಾಸ್ಕ್‌ನಲ್ಲಿ ತ್ರಿವಿಕ್ರಮ್‌ ಅವರ ತಂಡ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ಗೆದ್ದ ತಂಡ ನಾಮಿನೇಷನ್‌ನಿಂದ ಒಬ್ಬರನ್ನು ಪಾರು ಮಾಡುವ ಅಧಿಕಾರವನ್ನು ಪಡೆದಿದೆ. ತ್ರಿವಿಕ್ರಮ್‌ ಅವರ ತಂಡ ಯಾರನ್ನು ಸೇಫ್ ಮಾಡಿಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:  BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಇನ್ನೊಂದು ಕಡೆ ಬೋರ್ಡ್‌ನಲ್ಲಿ ಪಕ್ಷಪಾತಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಶಕ್ತ, ನಿರ್ಧಾರಗಳನ್ನು ತೆಗದುಕೊಳ್ಳುವಲ್ಲಿ ಆಶಕ್ತ, ಜನ ನಿರ್ವಹಣೆಯಲ್ಲಿ ಆಶಕ್ತ ಹೀಗೆ ಕೆಲವೊಂದಿಷ್ಟು ವಾಕ್ಯಗಳನ್ನು ನೀಡಲಾಗಿದೆ. ಈ ಮಾತಿಗೆ ಯಾವ ಸ್ಪರ್ಧಿ ಸೂಕ್ತವಾಗುತ್ತಾರೆ ಅವರನ್ನು ಸಿಮ್ಮಿಂಗ್‌ ಪೂಲ್‌ ದೂಡಬೇಕು.

Advertisement

ಇದರಲ್ಲಿ ʼಪಕ್ಷಪಾತಿʼ ಎನ್ನುವ ಮಾತಿಗೆ ಹನುಮಂತು, ರಜತ್ ಸೇರಿ ನಾಲ್ವರು ಚೈತ್ರಾ ಅವರನ್ನು ಆಯ್ಕೆ ಮಾಡಿ ಸಿಮ್ಮಿಂಗ್‌ ಪೂಲ್‌ಗೆ ದೂಡಿದ್ದಾರೆ. ‌ಇನ್ನು ಮೋಕ್ಷಿತಾ ಅವರು ಗೌತಮಿ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಶಕ್ತ ಎನ್ನುವ ಗುಣವನ್ನು ಕೊಟ್ಟಿದ್ದಾರೆ.

ಗೌತಮಿ ಅವರು ನಮ್ಮ ಮೂರು ಜನರ ಫ್ರೆಂಡ್‌ ಶಿಪ್‌ ಕಡೆಯವರಿಗೆ ಕಾಪಾಡ್ತೀನಿ ಅಂಥ ಹೇಳಿದ್ರಿ ಎಂದು ಮೋಕ್ಷಿತಾ ಹೇಳಿದ್ದಾರೆ. ಇದಕ್ಕೆ ಗೌತಮಿ, ಯಾವಾಗ ನೀವು ಹೊರಗೆ ಹೋಗಿ ಬಂದ್ರಿ ಆಟದ ಸಲುವಾಗಿ ನಿಮ್ಮಲ್ಲಿ ಸಾಕಷ್ಟು ಬದಲಾವಣೆಗಳಿತ್ತು ಎಂದಿದ್ದಾರೆ. ಈ ಮಾತಿಗೆ ಉತ್ತರಿಸಿದ ಮೋಕ್ಷಿತಾ ಮಂಜಣ್ಣನಿಗೆ ಬೇಜಾರ್‌ ಆದ್ರೆ ನಿಮಗ ಫೀಲ್‌ ಆಗುತ್ತದೆ. ಅದೇ ಮೋಕ್ಷಿತಾಗೆ ಬೇಜಾರ್‌ ಆಗಿದ್ದಾಗ ಗೌತಮಿ ಇರ್ತಾ ಇರಲಿಲ್ಲವೆಂದಿದ್ದಾರೆ.

ನಾನು ಕೂತರೆ ನನ್ನ ಮಾತನ್ನೇ ಆಡ್ತೀನಿ ನಿಮ್ಮ ಥರ ಯೋಚನೆ ಮಾಡಲ್ಲ. ಇವತ್ತಿನವರೆಗೂ ಫ್ರೆಂಡ್‌ ಶಿಪ್‌ ನಿಭಾಯಿಸುತ್ತಾ ಇರೋದು ನಾನೇ ಎಂದು ಗೌತಮಿ ಹೇಳಿದ್ದಾರೆ.

ಮಂಜು ಹೆಸರನ್ನು ತೆಗೆದುಕೊಂಡಿರುವ ರಜತ್‌, ನನ್ನಿಂದ ಈ ಟಾಸ್ಕ್‌ ಗೆಲ್ತು, ಟೀಮ್‌ ಗೆಲ್ತು ಎನ್ನುವುದು ಚೀಪ್‌ ಮೆಂಟಲಿಟಿ ಎನ್ನುವ ಕಾರಣವನ್ನು ನೀಡಿದ್ದಾರೆ. ಇದಕ್ಕೆ ಮಂಜು ನಾನು ಮಾಡಿರುವ ಕೆಲಸ ನಾನೇ ಹೇಳಿಕೊಂಡರೆ ತಪ್ಪೇನಿದೆ ಎಂದಿದ್ದಾರೆ.

ಭವ್ಯ ಅವರು ಎಲ್ಲರ ಜತೆ ಹೊಂದಿಕೊಳ್ಳಲ್ಲ. ತ್ರಿವಿಕ್ರಮ್‌ ಜತೆನೇ ಇರುತ್ತೀರಾ. ತುಂಬಾ ಉಡಾಫೆಯಾಗಿ ಮಾತನಾಡುತ್ತೀರಾ ಎಂದು ಮೋಕ್ಚಿತಾ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಭವ್ಯ, ನನ್ನ ಕಷ್ಟ ಸುಖವನ್ನು ಎಲ್ಲರ ಜತೆ ಹೋಗಿ ಮಾತನಾಡೋಕೆ ಆಗಲ್ಲ. ನಾನು ತ್ರಿವಿಕ್ರಮ್‌ ಜತೆ ಕಂಫರ್ಟ್‌ ಆಗಿರುತ್ತೇನೆ. ಹಾಗೆ ಅಂದಕ್ಷಣ ನನ್ನ ಆಟ ಎಲ್ಲ ತ್ರಿವಿಕ್ರಮ್‌ ಆಡುತ್ತಿಲ್ಲ. ನಾನು ಮನೆಯಲ್ಲಿ ಸಂಬಂಧಗಳನ್ನು ಬೆಳೆಸೋಕೆ ಬಂದಿಲ್ಲ. ನನ್ನ ಬಗ್ಗೆ ನನಗೆ ಹೆಮ್ಮೆಯಿದೆ. ಯಾರ ಹತ್ರನೂ ಸರ್ಟಿಫಿಕೇಟ್‌ ತೆಗೆದುಕೊಂಡು ಹೋಗುವ ಅವಶ್ಯಕತೆ ನನಗಿಲ್ಲ ಎಂದು ಗುಡುಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next