ಬೆಂಗಳೂರು: ಬಿಗ್ ಬಾಸ್ ಮನೆಯ ಆಟ (Bigg Boss Kannada-11) ರೋಚಕವಾಗಿ ಸಾಗುತ್ತಿದೆ. ವಾರಗಳು ಕಳೆಯುತ್ತಿದ್ದಂತೆ ದೊಡ್ಮನೆ ಆಟ ಕಳೆಗಟ್ಟುತ್ತಿದೆ.
ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಮಂಜು – ಮೋಕ್ಷಿತಾ ಅವರ ಆಟಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟದಲ್ಲಿ ವೈಯಕ್ತಿಕ ವಿಚಾರ ತರಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಮಂಜು – ಮೋಕ್ಷಿತಾ ನೀವು ತುಂಬಾ ನಿರಾಸೆ ಮೂಡಿಸಿದ್ದೀರಿ. ಟಾಸ್ಕ್ ಥೀಮ್ ಅನ್ನೇ ಹಾಳು ಮಾಡಿಬಿಟ್ರಿ. ಒಬ್ಬರು ಹಾಳು ಮಾಡಿದ್ರೆ ಒಬ್ಬರು ಚೆನ್ನಾಗಿ ಆಡಿದಿದ್ರೆ ಜನರ ಚಪ್ಪಾಳೆ ಸಿಗ್ತಾ ಇತ್ತು. ನೋಡುತ್ತಿರುವ ವೀಕ್ಷಕರಿಗೆ ಏನು ನ್ಯಾಯ ಮಾಡಿದ್ರಿ. ಪಾತ್ರ ಚೆನ್ನಾಗಿ ಮಾಡಿದ್ರಿ ಆದರೆ ಒಂದು ಹೆಜ್ಜೆಯಿಂದ ಎಲ್ಲವೂ ಹಾಳಾಯಿತು ಎಂದು ಕಿಚ್ಚ ಕೇಳಿದ್ದಾರೆ.
ಈ ನಡುವೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಸುರೇಶ್ ಹಾಗೂ ತ್ರಿವಿಕ್ರಮ್ ಅವರು ಸೇಫ್ ಆಗಿದ್ದಾರೆ.
ಉಳಿದ ಶೋಭಾ, ಭವ್ಯ, ಚೈತ್ರಾ, ಶಿಶಿರ್, ಐಶ್ವರ್ಯಾ ಅವರ ಪೈಕಿ ಒಬ್ಬರು ಆಚೆ ಬರಲಿದ್ದಾರೆ.
ಇವರುಗಳಲ್ಲಿ ಯಾರು ಸೇಫ್ ಆಗ್ತಾರೆ ಯಾರು ಆಚೆ ಬರ್ತಾರೆ ಎನ್ನುವುದರ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮನೆಮಾಡಿದೆ.
ವೈಲ್ಡ್ ಕಾರ್ಡ್ ಸ್ಪರ್ಧಿ ಔಟ್..?: ಬಿಗ್ ಬಾಸ್ ಮನೆಗೆ ಹನುಮಂತು ಬಳಿಕ ಶೋಭಾ ಶೆಟ್ಟಿ, ರಜತ್ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ರಜತ್, ಶೋಭಾ ಬಂದ ಆರಂಭಿಕ ದಿನಗಳಲ್ಲಿ ದೊಡ್ಡದಾಗಿಯೇ ಸೌಂಡ್ ಮಾಡಿದ್ದರು.
ದಿನಗಳು ಕಳೆಯುತ್ತಿದ್ದಂತೆ ಶೋಭಾ ಸ್ವಲ್ಪ ಡಲ್ ಆಗಿದ್ದರು. ನಾಮಿನೇಟ್ ಆಗಿ ಕಳಪೆ ಪಡೆದು ಜೈಲು ಕೂಡ ಸೇರಿದ್ದರು. ಜೈಲು ಸೇರಿದ ಬಳಿಕ ತಾಯಿಯನ್ನು ನೆನೆದು ನಾನು ಜೈಲಿಗೆ ಹೋಗುತ್ತಿದ್ದೇನೆ ಅಂಥ ಬೇಜಾರ್ ಮಾಡ್ಕೋಬೇಡ ಅಮ್ಮ ಎಂದು ಕಣ್ಣೀರಿಟ್ಟಿದ್ದರು. ಕಂಬ್ಯಾಕ್ ಮಾಡುತ್ತೀನಿ ಎಂದು ತಮಗೆ ತಾವೇ ಧೈರ್ಯ ತುಂಬಿಕೊಂಡಿದ್ದರು.
ಮೂಲಗಳ ಪ್ರಕಾರ ಐಶ್ವರ್ಯಾ ಅವರಿಗೆ ಅತೀ ಕಡಿಮೆ ಮತಗಳು ಬಂದಿವೆ ಎನ್ನಲಾಗಿದೆ. ಆದರೆ ಶೋಭಾ ಅವರು ತಾವು ಬಿಗ್ ಬಾಸ್ ಮನೆ ಬಿಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ವೈಯಕ್ತಿಕ ಕಾರಣಗಳನ್ನು ಕೊಟ್ಟು ತಾವು ಬಿಗ್ ಬಾಸ್ ಶೋನಿಂದ ಹೊರಗೆ ಹೋಗುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಅವರ ನಿರ್ಧಾರಕ್ಕೆ ಬಿಗ್ ಬಾಸ್ ಒಪ್ಪಿದ್ದು ಅವರು ಮನೆಯಿ ಆಚೆ ಬಂದಿದ್ದಾರೆ ಎನ್ನಲಾಗಿದೆ. ಹಾಗಾಗಿ ಐಶ್ವರ್ಯಾ ಅವರಿಗೆ ಒಂದು ಅವಕಾಶ ಸಿಕ್ಕಿದೆ.
ಸದ್ಯ ಶೋಭಾ ಅವರು ಬಿಗ್ ಬಾಸ್ ಮನೆ ಬಿಟ್ಟು ಬಂದಿರುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕುವಂತೆ ಮಾಡಿದೆ.
ಇರೋಕೆ ಆಗ್ತಾ ಇಲ್ಲ ಎಂದ ಶೋಭಾ: ಶೋಭಾ ಅವರೇ ಯು ಆರ್ ಸೇಫ್ ಎಂದು ಕಿಚ್ಚ ಹೇಳಿದ್ದಾರೆ. ಅದಕ್ಕೆ ಶೋಭಾ ಸರ್ ಎಲ್ಲೋ ಒಂದು ಕಡೆ ನನಗೆ ಇರೋಕೆ ಆಗ್ತಾ ಇಲ್ಲ ಅಂಥ ಅನ್ನಿಸ್ತಾ ಇದೆ. ನನಗೆ ಕಂಟಿನ್ಯೂ ಮಾಡೋಕೆ ಆಗ್ತಾ ಇಲ್ಲ. ವೀಕ್ಷಕರ ನಿರೀಕ್ಷೆಗಳನ್ನು ರೀಚ್ ಮಾಡೋಕೆ ಆಗ್ತಾ ಇಲ್ಲ ಅನ್ನಿಸುತ್ತಿದೆ ಸರ್. ಫೇಸ್ ಮಾಡೋದು ಹೇಗೆ ಅಂಥ ಗೊತ್ತಾಗುತ್ತಿಲ್ಲ. ಇರಬೇಕು ಆದ್ರೆ ಭಯ ಆಗ್ತಾ ಇದೆ ಎಂದು ಶೋಭಾ ಹೇಳಿದ್ದಾರೆ.
ಅರ್ಥ ಮಾಡ್ಕೊಳ್ಲಿ ಯಾಕೆ ಒಳಗಡೆ ಹೋದ್ರಿ ಅಂಥ. ನಿಮ್ಮನ್ನು ಸೇವ್ ಮಾಡಿದ್ರು ಅಲ್ವಾ ಅವರ ನಂಬಿಕೆ ಮೇಲೆ ನೀವು ಈ ರೀತಿ ಹೇಳೋಕೆ ಆಗಲ್ಲ. ನಿಮಗೆ ಬಾಗಿಲು ಓಪನ್ ಮಾಡುತ್ತೇನೆ ಎಂದು ಕಿಚ್ಚ ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಈ ಹಿಂದೆಯೂ ಸ್ವ ಇಚ್ಚೆಯಿಂದ ಹೊರಗಡೆ ಹೋಗಿದ್ದ ಸ್ಪರ್ಧಿ:
ಬಿಗ್ ಬಾಸ್ ಮನೆಯಿಂದ ಸ್ವ ಇಚ್ಛೆಯಿಂದ ಶೋಭಾ ಅವರು ಹೊರಗೆ ಹೋಗಿದ್ದಾರೆ. ಹಾಗಂತ ಈ ರೀತಿ ಕನ್ನಡ ಬಿಗ್ ಬಾಸ್ ನಲ್ಲಿ ಆಗಿರೋದು ಇದೇ ಮೊದಲಲ್ಲ. ಈ ಹಿಂದೆ ಬಿಗ್ ಬಾಸ್ ಕನ್ನಡ ಸೀಸನ್ -8 ರಲ್ಲಿ ವೈಜಂತಿ ಅವರು ಆಚೆ ಹೋಗಿದ್ದರು.
ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್ ಸೀಸನ್ – 7 ನಲ್ಲಿ ಭಾಗಿಯಾಗಿದ್ದರು. ಅಲ್ಲಿ ಗೆಲ್ಲುವ ಸ್ಪರ್ಧಿಯಾಗಿಯೇ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಎಲಿಮಿನೇಟ್ ಆಗಿದ್ದರು.