Advertisement
ಮುಖ್ಯವಾಗಿ ಈ ಬಾರಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವುದು ಅನುಮಾನ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಆಯೋಜಕರು ಹಾಗೂ ಕಲರ್ಸ್ ಕನ್ನಡದ ಮಾತಿಗೆ ಒಪ್ಪಿದ ಕಿಚ್ಚ ಬಿಗ್ ಬಾಸ್ ನಡೆಸಿಕೊಡಲು ಒಪ್ಪಿದ್ದು, ನಿರೂಪಣೆ ಮಾಡುತ್ತಿದ್ದಾರೆ.
Related Articles
ಇತ್ತೀಚೆಗೆ ಬಿಗ್ ಬಾಸ್ ಟಿವಿ ರೇಟಿಂಗ್ ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಇದನ್ನು ಕಿಚ್ಚ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಇದೀಗ ಇದೇ ಫೋಟೋವನ್ನು ಹಂಚಿಕೊಂಡು,
Advertisement
“ಬಿಗ್ ಬಾಸ್ ಗೆ ಅಪಾರವಾದ ಪ್ರೀತಿ ತೋರಿಸಿರುವುದಕ್ಕೆ ನಿಮ್ಮೆಗೆಲ್ಲರಿಗೂ ಧನ್ಯವಾದಗಳು. ಕಾರ್ಯಕ್ರಮಕ್ಕೆ ಸಿಕ್ಕಿರುವ ಟಿಆರ್ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ.10+1 ವರ್ಷ ಜತೆಯಾಗಿ ಪ್ರಯಾಣಿಸಿದ್ದೇನೆ. ಈಗ ನಾನು ಏನು ಮಾಡಬೇಕು ಅಂದುಕೊಂಡಿದ್ದೇನೋ ಅದರೊಂದಿಗೆ ಮುಂದುವರೆಯುವ ಸಮಯ ಬಂದಿದೆ. ಇದು ಬಿಗ್ ಬಾಸ್ ನಿರೂಪಕನಾಗಿ ನನ್ನ ಕೊನೆ ಸೀಸನ್ ಆಗಿದೆ. ನನ್ನ ನಿರ್ಧಾರವನ್ನು ಕಲರ್ಸ್ ಹಾಗೂ ಬಿಗ್ ಬಾಸ್ ನ್ನು ಅನುಸರಿಸಿದ ಎಲ್ಲರಿಗೂ ಗೌರವಿಸುತ್ತದೆ ಎನ್ನುವುದನ್ನು ನಾನು ನಂಬುತ್ತೇನೆ” ಎಂದು ಕಿಚ್ಚ ಹೇಳಿದ್ದಾರೆ.
ಈ ಸೀಸನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ ನನ್ನ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ ಎಂದು ಕಿಚ್ಚ ಹೇಳಿದ್ದಾರೆ.
ಅಂದ ಹಾಗೆ ಕಿಚ್ಚ ಸುದೀಪ್ ಈ ಬಾರಿ ಬಿಗ್ ಬಾಸ್ ನಡೆಸಿಕೊಡಲ್ಲ ಎಂದು ಮೊದಲು ಹೇಳಿದ್ದರು. ಆ ಬಳಿಕ ಅವರ ಮನವೊಲಿಸಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಸುದೀಪ್ ಹೇಳಿದ್ದರು.