Advertisement

ಬಿಬಿಸಿಯಿಂದ ತೆರಿಗೆ ವಂಚನೆ ದೃಢ: ಸಿಬಿಡಿಟಿ

09:19 PM Feb 17, 2023 | Team Udayavani |

ನವದೆಹಲಿ:ದೇಶದಲ್ಲಿ ಕಾರ್ಯವೆಸಗುವ ಬಿಬಿಸಿಯ ಮುಂಬೈ, ನವದೆಹಲಿ ಕಚೇರಿಗಳಿಂದ ನಿಯಮಿತವಾಗಿ ತೆರಿಗೆ ಪಾವತಿ ಆಗಿಲ್ಲ. ಜತೆಗೆ, ಆದಾಯ ಮತ್ತು ಲಾಭಕ್ಕೆ ಸಂಬಂಧಿಸಿದಂತೆ ಭಾರೀ ವ್ಯತ್ಯಾಸಗಳು ಪತ್ತೆಯಾಗಿವೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಶುಕ್ರವಾರ ಸ್ಪಷ್ಟನೆ ನೀಡಿದೆ. ಮಂಗಳವಾರ ಶುರುವಾಗಿದ್ದ ಸಮೀಕ್ಷೆ ಗುರುವಾರ ಮುಕ್ತಾಯವಾಗಿತ್ತು.

Advertisement

ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ ಬಳಿಕ ಮಂಡಳಿ ಈ ಹೇಳಿಕೆ ನೀಡಿದೆ. ಆದರೆ, ಈ ಹೇಳಿಕೆಯಲ್ಲಿ ಬಿಬಿಸಿಯ ಕಚೇರಿಯ ಹೆಸರನ್ನೇ ಉಲ್ಲೇಖಿಸಲಾಗಿಲ್ಲ. ಎರಡೂ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವವರ ಹೇಳಿಕೆ, ಡಿಜಿಟಲ್‌ ದಾಖಲೆಗಳು, ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ದೇಶದಲ್ಲಿ ಕಾರ್ಯವೆಸಗುವ ಬಿಬಿಸಿ ಹಾಗೂ ಸಹವರ್ತಿ ಸಂಸ್ಥೆಗಳಿಗೆ ಬರುವ ಲಾಭಕ್ಕೆ ಸಂಬಂಧಿಸಿದಂತೆ ಕೆಲವು ತೆರಿಗೆ ಪಾವತಿ ಮಾಡಲಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಂಸ್ಥೆ ದೇಶದಲ್ಲಿ ನಡೆಸುತ್ತಿರುವ ವಹಿವಾಟಿಗೆ ಅನ್ವಯವಾಗುವಂತೆ ತೆರಿಗೆ ಮಾಹಿತಿ ಸಲ್ಲಿಕೆ ಮಾಡಲಾಗಿಲ್ಲ ಎಂದು ಸಿಬಿಡಿಟಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಿತ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿ, ಬಿಬಿಸಿ ವಿವಾದಕ್ಕೆ ಗುರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next