Advertisement

Basroor: ಜಲ್ಲಿ ಕಲ್ಲುಗಳನ್ನು ಸುರಿದರೂ ಪ್ರಯೋಜನ ಶೂನ್ಯ

01:09 PM Sep 12, 2024 | Team Udayavani |

ಬಸ್ರೂರು: ಕುಂದಾಪುರದಿಂದ ಬಸ್ರೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಕೋಣಿ, ಸಟ್ವಾಡಿ ಮತ್ತಿತರ ಹಲವೆಡೆಗಳಲ್ಲಿ ಮತ್ತೆ ಬೃಹದಾಕಾರವಾದ ಹೊಂಡ- ಗುಂಡಿಗಳು ಸೃಷ್ಟಿಯಾಗಿದ್ದು, ವಾಹನ ಸವಾರರು ಪ್ರಯಾಸಪಟ್ಟು ಸಂಚರಿಸುವಂತಾಗಿದೆ.

Advertisement

ಬಸ್ರೂರಿನಿಂದ ಕುಂದಾಪುರಕ್ಕೆ ಸಾಗುವ ರಸ್ತೆಯ ಸಟ್ವಾಡಿಯ ಸರ್ಕಲ್‌ನ ಸುತ್ತ, ಮುಂದೆ ಕೋಣಿಯ ಎಚ್‌ಎಂಟಿ ರಸ್ತೆಯ ತಿರುವಿನವರೆಗೆ ರಸ್ತೆಯುದ್ದಕ್ಕೂ ಹೊಂಡ ಬಿದ್ದಿದೆ. ಈ ಹೊಂಡದಿಂದಾಗಿ ಇಲ್ಲಿ ಸಂಚರಿಸುವ ವಾಹನಗಳು ಸಂಕಷ್ಟ ಅನುಭವಿಸುತ್ತಿವೆ. ಹಲವು ದ್ವಿಚಕ್ರ ವಾಹನಗಳು ಇಲ್ಲಿ ರಾತ್ರಿ ವೇಳೆ ಪಲ್ಟಿಯಾಗಿವೆ.

ಈ ಹಿಂದೆ ಭಾರೀ ಮಳೆ ಬರುತ್ತಿರುವಾಗಲೇ ಒಂದು ಲಾರಿ ಜಲ್ಲಿ ಕಲ್ಲುಗಳನ್ನು ಹಾಕಲಾಗಿತ್ತು. ಹಲವು ಸಮಯದಿಂದ ಹೊಂಡ ಬಿದ್ದ ಈ ರಸ್ತೆಯ ಹೊಂಡಗಳಿಗೆ ಮತ್ತೆ ಎರಡನೇ ಬಾರಿಗೆ ಸುಮಾರು ಹದಿನೈದು ಬುಟ್ಟಿಗಳಷ್ಟು ಜಲ್ಲಿಕಲ್ಲುಗಳನ್ನು ಹಾಕಲಾಗಿತ್ತು. ಹೊಂಡಕ್ಕೆ ಜಲ್ಲಿಕಲ್ಲುಗಳನ್ನು ತಂದು ಹಾಕುವುದರಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ಈ ಹೊಂಡಗಳಿಗೆ ಜಲ್ಲಿ ಕಲ್ಲುಗಳನ್ನು ಹಾಕಿ ಮುಚ್ಚಿ ಮೇಲೆ ಕಾಕ್ರೀಟ್‌ ಅಥವಾ ಡಾಮರು ಹಾಕಿ ತೇಪೆ ಕಾರ್ಯ ಮಾಡಬೇಕಾಗಿದೆ. ಇಲ್ಲವೇ ಇಡೀ ರಸ್ತೆಯನ್ನೇ ಪುನರ್‌ ನಿರ್ಮಾಣ ಮಾಡಿ ಸರಿಪಡಿಸಬೇಕಾಗಿದೆ ಎನ್ನುವುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈಗಾಗಲೇ ಹಲವು ವಾಹನಗಳು ಪಲ್ಟಿಯಾದ ಈ ಹೊಂಡಗಳಿಗೆ ಶಾಶ್ವತ ಪರಿಹಾರವನ್ನು ತತ್‌ಕ್ಷಣ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next