Advertisement

ಮೂಲಭೂತ ಸೌಲಭ್ಯ ವಂಚಿತ ಬಾಲಛೇಡ್‌

05:25 PM May 17, 2018 | Team Udayavani |

ಯಾದಗಿರಿ: ಗುರುಮಠಕಲ್‌ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಬಾಲ್‌ಛೇಡ್‌ ಗ್ರಾಮ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಗ್ರಾಮದ ಒಳಗಡೆ ರಸ್ತೆಗಳು ಕೆಸರು ಗದ್ದೆಯಾಗಿ ನಿರ್ಮಾಣವಾಗಿದ್ದು, ಬೇಸಿಗೆ ಕಾಲದಲ್ಲಿ ಈ ಗತಿಯಾದರೆ
ಇನ್ನು ಮಳೆಗಾಲದಲ್ಲಿ ಯಾವ ರೀತಿ ಆಗಬಹುದು. ಇದಕ್ಕೆಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ
ಕಾರಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸೈದಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಿಷ್ಕಾಳಜಿಯಿಂದ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಕೂಡಲೇ ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ತನಿಖೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಾಲ್‌ಛೇಡ್‌ ಗ್ರಾಮದಲ್ಲಿ ಚರಂಡಿ ತುಂಬಿ ಕಲುಷಿತ ನೀರು ಸಿಸಿ ರಸ್ತೆ ಮೇಲೆ ಹರಿದು ಇಡೀ ಗ್ರಾಮ ದುರ್ವಾಸನೆಯಿಂದ ಕೂಡಿದೆ. ಹೀಗಾಗಿ ನೂರೆಂಟು ಸಮಸ್ಯೆಗಳಿಂದ ಜನಸಾಮಾನ್ಯರು ಕೃಷಿ ಕೂಲಿ ಕಾರ್ಮಿಕರು ಪರದಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.

ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳು ತಲೆದೂರುತ್ತಿವೆ. ಸರ್ಕಾರದಿಂದ ಹಣ
ಹರಿದು ಬರುತ್ತಿದ್ದರೂ ಗ್ರಾಮದಲ್ಲಿ ಚರಂಡಿ, ನೀರು, ವಿದ್ಯುತ್‌ ಸೇರಿದಂತೆ ಇತರ ಸಮಸ್ಯೆಗಳು ಬಗೆಹರಿದಿಲ್ಲ
ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ಎಲ್ಲೆಂದರಲ್ಲಿ ಕಸ ಕೊಳಚೆ ಬೆಳೆದು ಜಾಲಿಗಿಡಗಳಿಂದ ರಸ್ತೆಗಳು
ಮುಚ್ಚಿವೆ. ಕೆಲವು ಬಡಾವಣೆಗಳಲ್ಲಿ ಸಿಸಿ ರಸ್ತೆಯಿಲ್ಲದೆ ಧೂಳು ಮನೆಗಳಲ್ಲಿ ಬರುತ್ತದೆ. ಚಂರಂಡಿ ನಿಂತ ಮಲಿನ
ನೀರಿನಿಂದಾಗಿ ದುರ್ವಾಸನೆ ಬೀರಿ ಸೊಳ್ಳೆಗಳ ತಾಣವಾಗಿ ಮಾರ್ಪಡುತ್ತಿದೆ.

Advertisement

ಹೀಗಾಗಿ ಜನರಲ್ಲಿ ರೋಗದ ಭೀತಿ ಎದುರಾಗುತ್ತಿದೆ. ಗ್ರಾಮದಲ್ಲಿ ಸ್ವತ್ಛತೆ ಕಾಪಾಡಲು ಸಂಬಂಧಿಸಿದ ಜಿಲ್ಲಾ
ಮಟ್ಟದ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ ಅನುಕೂಲ ಮಾಡಿಕೊಡಬೇಕು ಎಂದು
ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮದ ಸಮಸ್ಯೆಗಳಿಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಪಂದಿಸಬೇಕು. ಇಲ್ಲದಿದ್ದರೆ ಸೈದಾಪುರ ಮುಖ್ಯ ರಸ್ತೆಯ
ಸರ್ಕಲ್‌ ಬಂದ್‌ ಮಾಡಿ ಪ್ರತಿಭಟನೆ ರ್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಜಿಲ್ಲಾಡಳಿತ
ಎಚ್ಚರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next