ನಾರಾಯಣಪುರ: ಬಸವಸಾಗರ ಜಲಾಶಯಕ್ಕೆ ನಿರಂತರ ಒಳಹರಿವು ಹರಿದು ಬರುತ್ತಿದ್ದು, ಗುರುವಾರ ಬೆಳಗ್ಗೆಯಿಂದ ಜಲಾಶಯದ ಮೂರು ಕ್ರಸ್ಟ್‌ಗೇಟ್ ತೆರೆಯುವ ಮೂಲಕ 16 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.
ಇನ್ನುಳಿದಂತೆ ಹೆಚ್ಚುವರಿ ನೀರನ್ನು ಜಲ ವಿದ್ಯುತ್ ಉತ್ಪಾದನೆಗೆಂದು ಜಲಾಶಯಕ್ಕೆ ಹೊಂದಿಕೊಂಡಿರುವ ಮುರಡೇಶ್ವರ ಜಲ ವಿದ್ಯುತ್ ಸ್ಥಾವರ ಮೂಲಕ 6 ಸಾವಿರ ಕ್ಯೂಸೆಕ್ ನಷ್ಟು ಒಟ್ಟು 22 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ ಎಂದು ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷ್ಣಾ ಜಲಾನಯನ ಪ್ರದೇಶದ ತೀರಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಆಲಮಟ್ಟಿ ಅಣೆಕಟ್ಟಿಗೆ ಹೆಚ್ಚುವರಿ ಬರುತ್ತಿರುವ ನೀರನ್ನು ಇಲ್ಲಿನ ಬಸವಸಾಗರಕ್ಕೆ ಹರಿಬಿಟ್ಟಿದ್ದರಿಂದ ಜಲಾಶಯದ ಗರಿಷ್ಠ ಮಟ್ಟವಾದ 492.25 ಮೀಟರ್ ತಲುಪಿದೆ. ಹೆಚ್ಚುವರಿಯಾಗಿ ಹರಿದು ಬರುತ್ತಿರುವ ಹಿನ್ನೀರನ್ನು ಅಣೆಕಟ್ಟಿನ ಮೂರು ಮುಖ್ಯ ಕ್ರಸ್ಟ್‌ಗೇಟ್ ಮೇಲೆತ್ತುವ ಮೂಲಕ 16 ಸಾವಿರ ಕ್ಯೂಸೆಕ್ ಹಾಗೂ ಜಲಾಶಯಕ್ಕೆ ಹೊಂದಿಕೊಂಡಿರುವ ಮುರಡೇಶ್ವರ ಜಲ ವಿದ್ಯುತ್ ಸ್ಥಾವರ ಮೂಲಕ 6 ಸಾವಿರ ಕ್ಯೂಸೆಕ್‌ನಷ್ಟು ಒಟ್ಟಾರೆ 22 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ ಎಂದು ಅಣೆಕಟ್ಟು ಉಪವಿಭಾಗದ ಅಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 492.25 ಮೀಟರ್ ತಲುಪಿದೆ. 33.31 ಟಿಎಂಸಿಯಷ್ಟು ನೀರು ಸಂಗ್ರವಿದೆ. ಒಳಹರಿವು 12 ಸಾವಿರ ಕ್ಯೂಸೆಕ್ ಇದೆ. ಒಟ್ಟು ಹೊರ ಹರಿವು ಕ್ರಸ್ಟ್‌ಗೇಟ್ ಹಾಗೂ ಜಲವಿದ್ಯುತ್ ಸ್ಥಾವರ ಮೂಲಕ 22 ಸಾವಿರ ಕ್ಯೂಸೆಕ್ ಇದೆ. ಹಾಗೂ ಕೃಷ್ಣಾ ಅಚ್ಚಕಟ್ಟು ಜಮೀನುಗಳಿಗೆ ನೀರಾವರಿಗಾಗಿ ಎಡದಂಡೆ ಮುಖ್ಯ ಕಾಲುವೆಗೆ 6,800 ಕ್ಯೂಸೆಕ್, ಬಲದಂಡೆ ಮುಖ್ಯ ಕಾಲುವೆಗೆ 2,400 ಕ್ಯೂಸೆಕ್‌ನಷ್ಟು ನೀರನ್ನು ಕಾಲುವೆ ಜಾಲಗಳಿಗೆ ಹರಿಸಲಾಗುತ್ತಿದೆ ಎಂದು ಕೃಭಾಜನನಿ ಮೂಲಗಳಿಂದ ತಿಳಿದು ಬಂದಿದೆ.