Advertisement
ಪದೇ ಪದೇ ಕಾಲುವೆ ಕುಸಿತ ಸುದ್ದಿ ರೈತರು ಕೇಳಿಕೊಂಡು ಬರುವುದಾಗಿದೆ ಹೊರುತಾಗಿ ಇಲ್ಲಿಗೆ ಶಾಶ್ವತ ಪರಿಹಾರ ಏನೂ ಇಲ್ಲವೇ? ಎಂಬ ಪ್ರಶ್ನೆ ರೈತಾಪಿ ಜನರಿಂದ ಕೇಳಿ ಬರುತ್ತಿವೆ.ರೈತರ ಹಿತದೃಷ್ಟಿಯಿಂದ ಈಗಾಗಲೇ ಮರಳು ತುಂಬಿದ ಚೀಲ ಹಚ್ಚಿ ತಾತ್ಕಾಲಿಕ ಕಾಮಗಾರಿಯೂ ನಡೆಸಲಾಗಿದೆ. ನಾಲ್ಕು ದಿನಗಳಲ್ಲಿಯೇ ಪೂರ್ಣಗೊಳಿಸಲಾಗುತ್ತಿದೆ ಎಂದು ಎಂಜನಿಯರುಗಳು ತಿಳಿಸುತ್ತಾರೆ.
Related Articles
Advertisement
ಪ್ಯಾಕೇಜ ಎರಡರಲ್ಲಿ ಎಡದಂಡೆ ಕಾಲುವೆ ಕಿ.ಮೀ 62 ರಿಂದ 68 ರವರೆಗೂ ರೂ.5463.91 ಲಕ್ಷ ಅನುದಾನದಲ್ಲಿ ಆಧುನೀಕರಣಗೊಳಿಸಲಾಗಿತ್ತು. ಪ್ಯಾಕೇಜ ಮೂರರಲ್ಲಿ ಕಿ.ಮೀ. 70 ರಿಂದ 73 ರವರೆಗೆ ರೂ.3180.57 ಲಕ್ಷ ಅನುದಾನದಲ್ಲಿ ಕಾಮಗಾರಿ ಕೈಗೊಂಡು ಜೂನ್-2012 ರಲ್ಲಿ ಪೂರ್ಣಗೊಳಿಸಲಾಗಿದೆ.
ಇದನ್ನೂ ಓದಿ : ಹೆಚ್.ಕೆ.ಕುಮಾರಸ್ವಾಮಿ ರಾಜ್ಯದಲ್ಲಿಯೇ ಅತ್ಯಂತ ಸೋಮಾರಿ ಶಾಸಕ: ಹೆಚ್.ಎಂ.ವಿಶ್ವನಾಥ್ ವಾಗ್ದಾಳಿ
ಮುಖ್ಯವಾಗಿ ಕಾಲುವೆಯ 62 ರಿಂದ 68 ಕಮೀ ನಡುವೆ ಅಗ್ನಿ ಬಳಿಯೇ ಪದೇ ಪದೇ ಕಾಲುವೆ ಕುಸಿತಗೊಳ್ಳುತ್ತಿದೆ. 2014 ರಲ್ಲಿ ಮತ್ತು 2015 ರಲ್ಲಿ ಕುಸಿತಗೊಂಡ ನಂತರ 2017 ರಲ್ಲಿ ಕುಸಿದಿತ್ತು. ಮತ್ತೇ 2020 ರಲ್ಲಿ ಅದೇ ಸ್ಥಳದಲ್ಲಿಯೇ ಕುಸಿದು ಅಧಿಕಾರಿಗಳನ್ನು ಬೆಚ್ಚುಬೀಳಿಸಿತ್ತು.
ಸದ್ಯ ಪ್ರಸಕ್ತ 2022 ರಲ್ಲಿ ಅದೇ ಸ್ಥಳದಲ್ಲಿಯೇ ಕುಸಿತಗೊಂಡಿದ್ದು ಆಶ್ಚರ್ಯ ಮೂಡಿಸಿದೆ. ಮೂರು ಬಾರಿ ಸಂಬಂಧಿಸಿದ ಗುತ್ತಿಗೇದಾರರೆ ಕಾಲುವೆ ರಿಪೇರಿ ಮಾಡಿಸಿದ್ದಾರೆ. ಆದರೆ ನಾಲ್ಕನೆ ಬಾರಿ ಕೆಬಿಜೆಎನ್‌ಎಲ್ ನಿಗಮದ ಮೇಲಾಧಿಕಾರಿಗಳ ಮೇರೆಗೆ ಈಗಾ ಕುಸಿತ ಕಾಲುವೆ ತಾತ್ಕಾಲಿಕ ಕಾಮಗಾರಿ ಕೈಗೊಂಡಿದೆ ಎಂದು ಎಂಜನಿಯರ ತಿಳಿಸುತ್ತಾರೆ.
ಒಟ್ಟಾರೆ ಶಾಶ್ವತ ಪರಿಹಾರ ಹುಡಕಬೇಕು ಅಥವಾ ಪಕ್ಕದ ಸ್ಥಳದಲ್ಲಿ ಪರ್ಯಾಯ ಕಾಲುವೆ ಕಟ್ಟಿಂಗ್ ಮಾಡಬೇಕು ಎಂಬ ಒತ್ತಾಯ ರೈತಾಪಿ ಜನರಿಂದ ಕೇಳಿಬರುತ್ತಿದೆ.
ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರು ಭೇಟಿ ನೀಡಲಿದ್ದಾರೆ. ನಂತರ ಪರಿಶೀಲಿಸಿ ಅವರ ನಿರ್ಣಯದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು.
-ರವಿಕುಮಾರ, ಸಹಾಯಕ ಎಂಜಿನಿಯರ್, ಕೆಬಿಜೆಎನ್ ಎಲ್ ವಿಭಾಗ-7, ಹುಣಸಗಿ