Advertisement

ನನ್ನ ಹತ್ಯೆಗೂ ಸುಪಾರಿ ಕೊಟ್ಟಿದ್ದರು ಎಂಬ ವಿಷಯ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ: ಮುತ್ತಗಿ

12:16 PM Dec 17, 2020 | sudhir |

ಧಾರವಾಡ: ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬುಧವಾರವೂ ತೀವ್ರ ತನಿಖೆ ಕೈಗೊಂಡಿದ್ದಾರೆ. ನ್ಯಾಯಾಂಗ ಬಂಧನದಿಂದ ಎರಡು ದಿನಗಳ ಕಾಲ ತಮ್ಮ ಸುಪರ್ದಿಗೆ ಪಡೆದಿರುವ ಚಂದ್ರಶೇಖರ ಇಂಡಿ ಅವರನ್ನು ನಗರದ ಉಪನಗರ ಠಾಣೆಯಲ್ಲಿ ಇಡೀ ದಿನ ವಿಚಾರಣೆಗೆ ಒಳಪಡಿಸಿದರು.

Advertisement

ಈ ಮಧ್ಯೆ ಆರೋಪಿ ಬಸವರಾಜ ಮುತ್ತಗಿ ಸೇರಿ ವಿಜಯ ಕುಲಕರ್ಣಿ, ನಟರಾಜ್‌ ಸೇರಿದಂತೆ ಹಲವರನ್ನು ಠಾಣೆಗೆ ಕರೆಸಿ
ಸಿಬಿಐ ವಿಚಾರಣೆ ಮಾಡಿತು. ವಿಚಾರಣೆ ಎದುರಿಸಿ ಹೊರ ಬಂದ ಬಸವರಾಜ ಮುತ್ತಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನ್ನ ಹತ್ಯೆಗೂ ಸುಪಾರಿ ಕೊಟ್ಟಿದ್ದರು ಎಂಬ ವಿಷಯವನ್ನು ಈಗಲೂ ಜೀರ್ಣಿಸಿಕೊಳ್ಳಲು ಆಗುತ್ತಲೇ ಇಲ್ಲ.

ಕೆಲವರಿಗೆ ಒಂದಿಷ್ಟು ದೌರ್ಬಲ್ಯಗಳಿರುತ್ತವೆ. ನಾವು ಭಾವನೆಗಳಲ್ಲಿ ಬದುಕುವವರು. ಆದರೆ ಕೆಲವರಿಗೆ ಛಾಡಿ ಕೇಳುವ ದೌರ್ಬಲ್ಯ
ಇರುತ್ತದೆ. ಆ ಛಾಡಿ ಕೇಳಿದ್ದರಿಂದಲೇ ಹೀಗೆ ಆಗಿರಬಹುದು. ಚಂದ್ರಶೇಖರ ಇಂಡಿ ಅವರದ್ದು ಮಹಾಭಾರತದ ಶಕುನಿಯ
ಪಾತ್ರ. ನಮ್ಮೆಲ್ಲರ ಬದುಕಿನ ಚಂದು ಮಾಮಾರ ಪಾತ್ರ ಪ್ರವೇಶ ಪಡೆದು ಎಲ್ಲರ ಜೀವನವೂ ಹಾಳು ಮಾಡಿಬಿಟ್ಟಿವೆ. ಈ ಸಂಬಂಧ
ದೂರು ಕೊಡುವ ಬಗ್ಗೆ ನಮ್ಮ ವಕೀಲರೊಂದಿಗೆ ಚರ್ಚೆ ಮಾಡುವುದಾಗಿ ಹೇಳಿ ಅಲ್ಲಿಂದ ತೆರಳಿದರು. ಇನ್ನೂ ವಿಚಾರಣೆ
ಮುಗಿಸಿ ಹೊರ ಬಂದ ವಿಜಯ ಕುಲಕರ್ಣಿ, ಮುತ್ತಗಿ ಹತ್ಯೆಯ ಸುಪಾರಿ ವಿಷಯವನ್ನು ಅಲ್ಲಗೆಳೆದಿದ್ದು, ಇದು ಸತ್ಯಕ್ಕೆ ದೂರವಾದ ವಿಷಯವೆಂದು ಹೇಳಿದರು.

ಇದನ್ನೂ ಓದಿ:ಬಜರಂಗದಳ ಕಂಟೆಂಟ್ ಮೇಲೆ ನಿಷೇಧ ಹೇರುವ ಅಗತ್ಯವಿಲ್ಲ: ಆಯೋಗಕ್ಕೆ ಫೇಸ್ ಬುಕ್ ಇಂಡಿಯಾ

ನಾವು ಜತೆಗೆ ಕುಳಿತು ಸಾಕಷ್ಟು ಸಲ ಊಟ ಮಾಡಿದ್ದೇವೆ. ಎರಡು ಚಮಚ ವಿಷ ಹಾಕಿ ಕೊಟ್ಟಿದ್ದರೆ ತಿಂದು ಬಿಡುತ್ತಿದ್ದೀವಿ.
ಆದರೆ ಈ ರೀತಿ ಅವರು ಒಂದು ವೇಳೆ ಮಾಡಿದ್ದರೆ ಅದು ಅವರಿಗೆ ಶೋಭೆಯಲ್ಲ.
– ಬಸವರಾಜ ಮುತ್ತಗಿ, ಪ್ರಕರಣದ ಆರೋಪಿ

Advertisement

ಬಸವರಾಜ ಮುತ್ತಗಿ ಹಾಗೂ ನಾವೆಲ್ಲರೂ ಕುಟುಂಬ ಸದಸ್ಯರಿದ್ದಂತೆ. ಹೀಗಾಗಿ ಅವರಿಗೆ ಸುಪಾರಿ ಕೊಟ್ಟಿದ್ದೇವು ಎಂಬ
ವಿಷಯವೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಇದನ್ನು ಯಾರು ಹಬ್ಬಿಸಿದ್ದಾರೆಯೋ ಗೊತ್ತಿಲ್ಲ. ಆದರೆ ಇದೆಲ್ಲವೂ ಶುದ್ದ ಸುಳ್ಳು.
– ವಿಜಯ ಕುಲಕರ್ಣಿ, ವಿನಯ ಕುಲಕರ್ಣಿ ಸೋದರ

Advertisement

Udayavani is now on Telegram. Click here to join our channel and stay updated with the latest news.

Next