Advertisement
ಉದಯವಾಣಿ ಬೆಂಗಳೂರು ಕಚೇರಿಯಲ್ಲಿ “ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಷತ್ತಿನ ಘನತೆ ಎತ್ತಿ ಹಿಡಿಯುವ ಕೆಲಸವಾಗಬೇಕಿದೆ. ಇದೊಂದು ಗಂಜಿ ಕೇಂದ್ರ, ವೃದ್ಧಾಶ್ರಮ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಸದನದ ಬಗ್ಗೆ ಸಾಮಾನ್ಯರಿಗೂ ಗೌರವ ಮೂಡುವಂತೆ ಮಾಡುವ ಪ್ರಯತ್ನಿಸಲಾಗುವುದು. ಕಚೇರಿಯಲ್ಲಿ ಕೆಳ ಹಂತದಿಂದ ಮೇಲ್ವರ್ಗ ದವರೆಗೂ ಇರುವ ಅಧಿಕಾರಿಗಳಲ್ಲಿ ಎಲ್ಲರಿಗೂ ಗೌರವ ದೊರೆಯುವಂತೆ ಮಾಡುತ್ತೇನೆ. ಬಹಳ ವರ್ಷಗಳಿಂದ ಇಲ್ಲಿಯೇ ಠಿಕಾಣಿ ಹೂಡಿರು ವವರನ್ನು ವರ್ಗಾಯಿಸುವ ಕಾರ್ಯಕ್ಕೆ ಚಾಲನೆ ನೀಡುತ್ತೇವೆ ಎಂದರು.
ಶಾಸಕರ ಭವನದಲ್ಲಿ 15 ಸಾವಿರ ಜನಸಂಖ್ಯೆ ಇರುವ ಪಟ್ಟಣಕ್ಕೆ ಬೇಕಾಗುವಷ್ಟು ನೀರು ಮತ್ತು ವಿದ್ಯುತ್ ಬಳಕೆಯಾಗುತ್ತದೆ. ಆದರೆ, ಅಲ್ಲಿ ಶೇ. 15ರಷ್ಟು ಶಾಸಕರು ಮಾತ್ರ ಉಳಿದುಕೊಳ್ಳುತ್ತಾರೆ. ಉಳಿದಂತೆ ಅವರ ಆಪ್ತರು, ಗನ್‌ಮ್ಯಾನ್‌ಗಳು ಉಳಿದುಕೊಳ್ಳುತ್ತಾರೆ.
Related Articles
Advertisement
ಸದ್ಯದ ಪರಿಸ್ಥಿತಿಯಲ್ಲಿ ಒಮ್ಮೆಲೆ ಎಲ್ಲವನ್ನೂ ಸರಿಪಡಿಸುವ ಭ್ರಮೆ ಇಲ್ಲ. ಹಂತ ಹಂತವಾಗಿ ಶಾಸಕರ ಮನ ಪರಿವರ್ತನೆಯನ್ನೂ ಮಾಡುವ ಮೂಲಕ ಬದಲಾವಣೆಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಅಧಿವೇಶನದ ಸಂದರ್ಭ ಎಲ್ಲ ಸದಸ್ಯರು ತಮ್ಮ ವಿಷಯ ಇಲ್ಲದಿದ್ದರೂ, ಸದನ ದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಲು ಪ್ರೇರೇಪಿಸುವುದು. ಪ್ರತಿದಿನ ಕಾರ್ಯ ಸೂಚಿಯನ್ನು ಅಂದೇ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು .-ಬಸವರಾಜ ಹೊರಟ್ಟಿ, ಸಭಾಪತಿ