Advertisement

ರಮೇಶ ಜಾರಕಿಹೊಳಿ ಪ್ರಕರಣದ ನಂತ್ರ ಬಹಳ‌ಷ್ಟು ಊಹಾಪೋಹಗಳು ಎದ್ದಿವೆ : ಬೊಮ್ಮಾಯಿ

04:37 PM Mar 06, 2021 | Team Udayavani |

ಹಾವೇರಿ : ರಮೇಶ ಜಾರಕಿಹೊಳಿ ಪ್ರಕರಣ ಆದ ಮೇಲೆ ಬಹಳ‌ಷ್ಟು ಊಹಾಪೋಹಗಳು, ಸಂಶಯಾಸ್ಪದ ಷಡ್ಯಂತ್ರಗಳು, ಪೂರ್ವಭಾವಿ ಹನಿಟ್ರ್ಯಾಪ್  ಸೇರಿದಂತೆ ಬಹಳಷ್ಟು ವಿಚಾರಗಳು ಬಂದಿವೆ. ಹೀಗಾಗಿ ಕೆಲವು ಸಚಿವರು, ಶಾಸಕರಾಗಲಿ ಅವರ ತೇಜೋವಧೆ ಆಗೋ ಸಾಧ್ಯತೆಗಳು ಹೆಚ್ಚಿವೆ ಎಂದು ಆರು ಸಚಿವರು ಕೋರ್ಟ್ ಮೊರೆ ಹೋಗಿರೋ ವಿಚಾರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Advertisement

ತೇಜೋವಧೆ, ವಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವಂಥದ್ದು ಮತ್ತು ರಾಜಕೀಯವಾಗಿ ಅಸ್ಥಿರತೆಯನ್ನ ಮಾಡಲಾಗುವ ಸಾಧ್ಯತೆಯಲ್ಲಿ ಕೆಲವರು ನ್ಯಾಯಾಂಗದ ರಕ್ಷಣೆ ಕೋರಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಅಲ್ಲದೇ ರಮೇಶ ಜಾರಕಿಹೊಳಿ ಮೇಲೆ ದೂರು ಬಂದಿದೆ. ಅದರ ಆಧಾರದ‌ ಮೇಲೆ ತನಿಖೆ ನಡೆಯುತ್ತಿದೆ. ದೂರು ಕೊಟ್ಟವರು ಏನು ಮಾಹಿತಿ ಕೊಡಬೇಕಾಗಿತ್ತು, ಆ ಮಹಿಳೆ ಬಂದು ಹೇಳಿಕೆ ಕೊಡಬೇಕಾಗಿತ್ತು, ಇದುವರೆಗೆ ಕೊಟ್ಟಿಲ್ಲ ಎಂದರು.

ಇಂಥಾ ಕೇಸ್ ನಲ್ಲಿ ಮುಂದೆ ಬಂದು ದೂರು ಕೊಡದಿರೋದು, ಹೇಳಿಕೆ ಕೊಡದಿರೋದು ಷಡ್ಯಂತ್ರ ಸೇರಿದಂತೆ ಎಲ್ಲ ಸಂಶಯಗಳಿಗೆ ಕಾರಣವಾಗಿದೆ. ಹೀಗಾಗಿ ಕೆಲವರು ಕಾನೂನಿನ ರಕ್ಷಣೆ ತೆಗೆದುಕೊಳ್ಳುತ್ತಿದ್ದಾರೆ. ಪೊಲೀಸರು ಸಹ ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ.

ಎಚ್ ಡಿಕೆ ಹೇಳಿಕೆ ವಿಚಾರ : ಈ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಈ ವಿಷಯದಲ್ಲಿ ಹಲವಾರು ಜನರು ಹಲವಾರು ಹೇಳಿಕೆ ಕೊಟ್ಟಿದ್ದಾರೆ. ಕೆಲವರು ಹತ್ತೊಂಬತ್ತು ಜನ ಇದ್ದಾರೆ ಅಂತಿದ್ದಾರೆ. ಕೆಲವರು ಡೀಲ್ ಆಗಿದೆ ಅಂತಿದ್ದಾರೆ. ಎಲ್ಲ ವಿಚಾರಗಳನ್ನ ಗಮನಿಸಿದ್ದೇವೆ. ಎಲ್ಲೆಲ್ಲಿ ತನಿಖೆ ಮಾಡಬೇಕೋ ಅಲ್ಲಿ ಎಲ್ಲ ತನಿಖೆ ಮಾಡಲಾಗುವುದು ಎಂದರು.

Advertisement

ದಿನೇಶ ಕಲ್ಲಹಳ್ಳಿ ಬಿಜೆಪಿ ಜೊತೆ ಗುರ್ತಿಸಿಕೊಂಡಿರೋ ವಿಚಾರ : ಎಲ್ಲಾರೂ ಯಾವ್ಯಾವ ಪಕ್ಷದಲ್ಲಿ ಇದ್ದಾರೆ ಯಾರಿಗೊತ್ತು. ಏನು ದೂರು ಕೊಟ್ಟಿದ್ದಾರೆ. ಅದರ ಬಗ್ಗೆ ಎರಡು ಬಾರಿ ಕರೆದಿದ್ದೇವೆ. ಎರಡು ಬಾರಿ ಕರೆದಾಗಲೂ ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಎಂಬುದು  ಮಾಧ್ಯಮಗಳ ಮುಂದೆಯೆ ಇದೆ. ಅದರ ಆಧಾರದ ಮೇಲೆ ತನಿಖೆ ಮಾಡಲಾಗುವುದು. ಅವರು ಯಾರು ಜೊತೆ ಗುರ್ತಿಸಿಕೊಂಡಿದ್ದಾರೆ ಅದು ನಮಗೆ ಸಂಬಂಧವಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next