Advertisement

ಯಾವುದೇ ಕ್ರೀಡೆಯಲ್ಲಿ ಆಡುವಾಗ ಗೆಲ್ಲಲೆಂದೇ ಆಡಬೇಕು : ಮುಖ್ಯಮಂತ್ರಿ ಬೊಮ್ಮಾಯಿ

08:49 PM Dec 11, 2021 | Team Udayavani |

ಬೆಂಗಳೂರು : ಆಟದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ, ಆಟವಾಡೋದು ಬಹಳ ಮುಖ್ಯ, ಅದರ ಜತೆಗೆ ಆಡುವಾಗ ಗೆಲ್ಲಲೆಂದೇ ಆಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅವರು ಇಂದು ಬೆಂಗಳೂರಿನಲ್ಲಿ ಮುಕ್ತಾಯವಾದ 70 ನೇ ಅಖಿಲ ಭಾರತ ಪೊಲೀಸ್ ಚಾಂಪಿಯನ್ ಶಿಪ್‍ನಲ್ಲಿ ಗೆಲುವು ಸಾಧಿಸಿದ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಯಾವುದೇ ಕ್ರೀಡೆಯಲ್ಲಿ ಆಡುವವರು ಸೋಲಬೇಕೆಂದು ಆಡಬಾರದು. ಸೋಲಿಗೆ ಹೆದರಲೂಬಾರದು ಯಾರು ಸೋಲಲು ಹೆದರುವುದಿಲ್ಲವೋ ಅವರೇ ಗೆಲ್ಲುತ್ತಾರೆ. ಆಟದಿಂದ ಶಿಸ್ತು ಬೆಳೆಯುತ್ತದೆ, ವ್ಯಕ್ತಿತ್ವ ವಿಕಸನವಾಗುತ್ತದೆ ಮತ್ತು ಕ್ರೀಡಾಮನೋಭಾವವೂ ಬೆಳೆಯುತ್ತದೆ. ಜೀವನಕ್ಕೆ ಕೂಡ ಇದು ಅನ್ವಯವಾಗುತ್ತದೆ ಎಂದರು.

ಸೋತವರು ಮುಂದಿನ ಬಾರಿ ಗೆಲ್ಲಲು ಪ್ರಯತ್ನ ಮಾಡಬೇಕೆಂದು ಕಿವಿ ಮಾತು ಹೇಳಿದ ಮುಖ್ಯಮಂತ್ರಿಗಳು, ಗೆದ್ದವರು ತಮ್ಮ ಸ್ಪೂರ್ತಿಯನ್ನು ಕಾಯ್ದುಕೊಳ್ಳಬೇಕೆಂದರು.

ಚಾಂಪಿಯನ್ ಶಿಪ್‍ನಲ್ಲಿ ವಿಜೇತರಾದ ಪಂಜಾಬ್ ಪೊಲೀಸ್ ಹಾಕಿ ತಂಡ ಹಾಗೂ ಭಾಗವಹಿಸಿದ ವಿವಿಧ ರಾಜ್ಯಗಳ ಹಾಕಿಪಟುಗಳಿಗೆ ಅಭಿನಂದಿಸಿದರು.

Advertisement

ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ, ಶಾಸಕ ಎನ್.ಎ.ಹ್ಯಾರಿಸ್, ನಟ ಶಿವರಾಜ್ ಕುಮಾರ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೋಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಕುಂದಾಪುರ : ಅನಾರೋಗ್ಯ ಪೀಡಿತ ಬಾಲಕನ ಚಿಕಿತ್ಸೆಗಾಗಿ ಯಕ್ಷ ವೇಷ ಧರಿಸಿ ಧನ ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next