ಹಾವೇರಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆ ಈಗಾಗಲೇ ಘೋಷಣೆ ಆಗಿದ್ದು, ನಾವು ಇದಕ್ಕೆ ಸಂಬಂಧಿಸಿದಂತೆ ಎರಡು ಹಂತಗಳಲ್ಲಿ ಪ್ರಚಾರ ಮಾಡಲು ತಂಡ ರಚನೆ ಮಾಡಿದ್ದೇವೆ
ಚುನಾವಣೆ ಘೋಷಣೆ ನೀತಿ ಸಂಹಿತೆ ಜಾರಿ ಹಿನ್ನಲೆ ಸಚಿವ ಸ್ಥಾನ ಆಕಾಂಕ್ಷಿಗಳು ನಿರಾಶೆ ಆಗೊ ಪ್ರಶ್ನೆ ಇಲ್ಲ. ಮುಖ್ಯಮಂತ್ರಿಗಳು ಯಾವಾಗ ಬೇಕಾದರು ಸಚಿವ ಸಂಪುಟ ವಿಸ್ತರಣೆ ಮಾಡಬಹುದು. ಹೈಕಮಾಂಡ್ ಜೊತೆ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ನೀತಿ ಸಂಹಿತೆ ಇದಕ್ಕೆ ಅನ್ವಯಿಸುವುದಿಲ್ಲ ಎಂದರು.
ಸಿಎಂ ಆಪ್ತ ಸಹಾಯಕ ಸಂತೋಷ ಆತ್ಮಹತ್ಯೆ ಯತ್ನ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಿಡಿ ವಿಚಾರವಾಗಿ ನಾನು ಹೇಳಿದ್ದೇನೆ. ಅದಕ್ಕೆ ಡಿಕೆ ಶಿವಕುಮಾರವರು ಉತ್ತರವನ್ನೂ ಕೊಟ್ಟಿದಾರೆ. ಅದನ್ನು ಮತ್ತೆ ಮಾತಾಡುವ ಅವಶ್ಯಕತೆ ಇಲ್ಲ ಎಂದರು.
ಮೂಲ ಬಿಜೆಪಿಗರು ಮತ್ತು ವಲಸಿಗರ ರಹಸ್ಯ ಸಭೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾರಾದರೂ ಒಟ್ಟಿಗೆ ಊಟಕ್ಕೆ ಹೋಗೋದೇ ತಪ್ಪಾ, ಸ್ನೇಹಿತರು ಸೇರಿ ಒಟ್ಟಿಗೆ ಊಟ ಮಾಡಿದ್ರೆ ಅದನ್ನು ತಪ್ಪು ಅಂತಾ ಅನ್ನೋಕೆ ಆಗೊಲ್ಲಾ ಎಂದರು.