Advertisement

ಬಸವಣ್ಣ ನವರ ಸಾಹಿತ್ಯ ವಿಶ್ವ ವ್ಯಾಪಿಯಾಗಿಲ್ಲ 

05:13 PM Jun 29, 2018 | Team Udayavani |

ಕೂಡಲಸಂಗಮ: 17ನೇ ಶತಮಾನದ ಕಾರ್ಲ್ಮಾರ್ಕ್ಸ್ ತತ್ವಗಳು ವಿಶ್ವವ್ಯಾಪಿಯಾಗಿ ಪ್ರಸಿದ್ಧಿ ಪಡೆದವು. ಆದರೆ 12ನೇ ಶತಮಾನದ ಬಸವಣ್ಣನ ವಚನಸ ಸಾಹಿತ್ಯ ವಿಶ್ವವ್ಯಾಪಿಯಾಗಿ ಪಸರಿಸಲಿಲ್ಲ. ಇದಕ್ಕೆ ಭಾಷೆ ಮತ್ತು ಸಂಪರ್ಕದ ಕೊರತೆ ಕಾರಣವಾಗಿದೆ ಎಂದು ಹುನಗುಂದ ವಿಜಯ ಮಹಾಂತೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಹಾಂತೇಶ ಅವಾರಿ ಹೇಳಿದರು.

Advertisement

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಅರಬ್‌ ರಾಷ್ಟ್ರದ ಕತಾರ, ವುಮನ್‌ ಪ್ರದೇಶದಲ್ಲಿ ನಡೆಯುವ ಪ್ರಥಮ ಬಸವ ಜಯಂತಿ, ಬಸವ ಉತ್ಸವ ಹಾಗೂ ಬಸವ ಶಾಂತಿ ಪ್ರತಿಷ್ಠಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು 5ನೇ ಬಾರಿಯ ಪ್ರವಾಸದ ನಿಮಿತ್ತ ಶ್ರೀಗಳಿಗೆ ಗೌರವ ಸನ್ಮಾನ ಮತ್ತು ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಸ್ಲಾಂ ಧರ್ಮದ ಆಚರಣೆಯುಳ್ಳ ಅರಬ್‌ ರಾಷ್ಟ್ರದ ಕತಾರ್‌ ಮತು ಉಮನ್‌ದಲ್ಲಿ ಲಿಂಗಾಯತ ಬಸವ ಧರ್ಮದ ಪ್ರಚಾರಕ್ಕಾಗಿ ಹೊರಟಿರುವ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಗಳವರ ಪ್ರವಾಸ ಯಶಸ್ವಿಯಾಗಲಿ. ಆಚರಣೆಯಲ್ಲಿ ಜಟಿಲವಾದ ಇಸ್ಲಾಂ, ಧರ್ಮಿಯರಲ್ಲಿ ಲಿಂಗಾಯತ ಧರ್ಮ ಸಂಸ್ಕೃತಿಯನ್ನು ಸಾರಲು ಹೊರಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.  ಸಾಹಿತಿ ಪ್ರಹ್ಲಾದ ದೇಸಾಯಿ ಮಾತನಾಡಿ, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಇಂದು ವಿಶ್ವದಲ್ಲಿ ಯುದ್ಧದ ಭೀತಿ, ದ್ವೇಷದ ಭೀತಿ ಹೋಗಲಾಡಿಸಿ ಅನಾಹುತಗಳನ್ನು ತಡೆಹಿಡಿಯುವ ಶಾಂತಿ ಸಂದೇಶವನ್ನು ನೀಡುವ ಸರಳ ಧರ್ಮವಾಗಿದೆ ಎಂದರು.

ಸನ್ಮಾನ ಸ್ವಿಕರಿಸಿ ಮಾತನಾಡಿದ ಶ್ರೀಗಳು, ಕಟ್ಟಾ ಇಸ್ಲಾಂ ರಾಷ್ಟ್ರಗಳಲ್ಲಿ ಹಿಂದುಯೇತರ ಧರ್ಮ ಗುರುಗಳಿಗೆ ಅವಕಾಶ ದೊರೆಯುವುದು ವಿರಳ. ಅಲ್ಲಿನ ಮಸೀದಿ ಮತ್ತು ದರ್ಗಾಗಳಲ್ಲಿನ ಧಾರ್ಮಿಕ ಮುಖಂಡರಿಗೆ ಬಸವಾ  ಶರಣರ ತತ್ವ ಮತ್ತು ವಚನ ಸಾಹಿತ್ಯದ ಬಗ್ಗೆ ಮನವರಿಕೆ ಮಾಡಿದ ನಂತರ ನಮಗೆ ಪ್ರಥಮ ಬಾರಿಗೆ ಅಲ್ಲಿಗೆ ಪ್ರವಾಸಕ್ಕಾಗಿ ಅನುಮತಿ ದೊರೆಯಿತು. ಶಾರ್ಜಾದ ವಿಶ್ವವಿದ್ಯಾಲಯದಲ್ಲಿ ಜಗತ್ತಿನ ಎಲ್ಲ ಧರ್ಮಗಳ ಧರ್ಮ ಗ್ರಂಥಗಳ ಸಾಲಿನಲ್ಲಿ ವಚನ ಗ್ರಂಥ ಇಟ್ಟಿರುವುದು ನಮ್ಮ ಕನ್ನಡ ನಾಡಿನ ಹೆಮ್ಮೆಯಾಗಿದೆ. ವಿಶ್ವದಲ್ಲಿ ಯುದ್ಧದ ಭೀತಿ ಹೋಗಲಾಡಿಸಲು ಬಸವ ಮಾರ್ಗ ಅವಶ್ಯವಾಗಿದೆ ಎಂದರು.

ವಿಜಯ ಮಹಾಂತೇಶ್ವರ ಸಹಕಾರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್‌.ಬಿ.ಗಂಜಿಹಾಳ, ಹಿರಿಯ ಮುಖಂಡರಾದ ಶೇಖರಪ್ಪ ಬಾದವಾಡಗಿ, ಪರಪ್ಪ ಕೊಕಾಟಿ, ರುದ್ರಪ್ಪ, ಶೇಖರಗೌಡ ಗೌಡರ, ಬಸನಗೌಡ ಗೌಡರ, ಮಹಾಂತೇಶ ನಾಡಗೌಡ, ಮುತ್ತಣ್ಣ ಕಠಾಣಿ, ಶಂಕರಗೌಡ ಬಿರಾದಾರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next