Advertisement

ಗುಲಾಮಗಿರಿ ಅಳಿಸಲು ಶ್ರಮಿಸಿದ್ದ ಬಸವಣ್ಣ: ಅಜೇಂದ್ರ ಸ್ವಾಮೀಜಿ

03:16 PM Jul 30, 2018 | |

ಶಹಾಪುರ: ಗುಲಾಮಗಿರಿಗೆ ತುತ್ತಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ಅಂದಿನ ಜನ ಸಾಮಾನ್ಯರಲ್ಲಿ ಆತ್ಮ ವಿಶ್ವಾಸ ತುಂಬುವ ಮೂಲಕ ಅವರನ್ನೆಲ್ಲ ಶರಣರನ್ನಾಗಿ ಮಾಡಿದ ಕೀರ್ತಿ ವಿಶ್ವ ಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಏಕದಂಡಗಿ ಮಠದ ಅಜೇಂದ್ರ ಸ್ವಾಮೀಜಿ ಹೇಳಿದರು.

Advertisement

ನಗರದ ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಪ್ರತಿ ತಿಂಗಳು ಹಮ್ಮಿಕೊಳ್ಳುವ ತಿಂಗಳ ಬಸವ ಬೆಳಕು -77ರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶರಣ ಚಳುವಳಿಯಂತ ಸಮಗ್ರ ಚಳುವಳಿ ಜಗತ್ತಿನ ಯಾವ ಮೂಲೆಯಲ್ಲೂ ಇದುವರೆಗೆ ನಡೆದಿಲ್ಲ ಎಂದರು.
 
ಭಕ್ತ ಮತ್ತು ದೇವರ ಮಧ್ಯೆ ಮಧ್ಯವರ್ತಿಗಳಿದ್ದರು. ದೇವರ ಪೂಜೆ ದಂಧೆಯಾಗಿರುವ ಸಂದರ್ಭದಲ್ಲಿ ಸಜ್ಜಳಾಗಿ,
ಶಾಂತಳಾಗಿ ಪೂಜೆಯನ್ನು ಮಾಡುವುದೆ ಶ್ರೇಷ್ಠ ಎಂದು ಅರುಹಿದವರು ಬಸವಣ್ಣನವರು ಎಂದು ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆ ದೇವಸ್ಥಾನದಲ್ಲಿ ಪ್ರವೇಶ ಪಡೆಯಬಹುದು ಎಂಬುದನ್ನು ಇತ್ತೀಚೆಗೆ ಸುಪ್ರಿಂಕೋರ್ಟ್‌ ತೀರ್ಪು ನೀಡಿದೆ. ಆದರೆ ಹನ್ನೆರಡನೆಯೇ ಶತಮಾನದಲ್ಲಿ ಶರಣರು ಜಾತಿ-ಮತ ಹೆಣ್ಣು-ಗಂಡು ಎಂಬ ಭೇದ ಭಾವ ಇಲ್ಲದೆ ಎಲ್ಲರಿಗೂ ಇಷ್ಟಲಿಂಗ ಪೂಜೆ ಮಾಡಲು ಅವಕಾಶ ಕಲ್ಪಿಸಿದ್ದರು ಎಂದು ಹೇಳಿದರು.

ವೇದಿಕೆ ಮೇಲೆ ಏಕದಂಡಗಿ ಮಠದ ಕಾಳಹಸ್ತೆಂದ್ರ ಸ್ವಾಮೀಜಿ, ಕಾಳಮ್ಮ ಸುಭಾಷ ಕನ್ಯಾಕೋಳೂರು, ಶ್ರೀದೇವಿ ಕನ್ಯಾಕೋಳೂರ ಉಪಸ್ಥಿತರಿದ್ದರು. ಬಸವರಾಜ ಸಿನ್ನೂರ ಸ್ವಾಗತಿಸಿದರು.  ಶಿವಣ್ಣ ಇಜೇರಿ ನಿರೂಪಿಸಿದರು.ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ, ಅಲ್ಲಮಪ್ರಭು ಸತ್ಯಂಪೇಟೆ, ಸೃಜನ ಬಿರಾದಾರ ವಚನ ಗಾಯನ ಮಾಡಿದರು. ಕೊನೆಯಲ್ಲಿ ಶಿವರುದ್ರ ಉಳ್ಳಿ ವಂದಿಸಿದರು.

ಸಭೆಯಲ್ಲಿ ಮಾನಪ್ಪ ಹೂಗಾರ, ಶರಣಪ್ಪ ಮುಂಡಾಸ, ಶಿವಯೋಗಪ್ಪ ಮುಡಬೂಳ, ನಿಂಗಣ್ಣ ಮುಡಬೂಳ, ಯಂಕಪ್ಪ ಅಲೆಮನಿ, ವಿಶ್ವನಾಥರೆಡ್ಡಿ ಗೊಂದಡಗಿ, ಭಾರತಿ ಪಾಟೀಲ, ರೇಣುಕಾ ಚಟ್ರಿಕಿ, ಶಶಿಕಲಾ ತುಂಬಗಿ, ಸಂಗಮ್ಮ ಶೆಟ್ಟರ, ಸಂಗಮ್ಮ ಹರನೂರ, ಮಹಾದೇವಪ್ಪ ಗಾಳಿ, ಹೊನ್ನಾರೆಡ್ಡಿ ವಕೀಲರು, ಎಂ.ಬಿ. ನಾಡಗೌಡ, ಶಿವಕುಮಾರ ಕರದಳ್ಳಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next