ಯಾದಗಿರಿ: ನಮ್ಮ ಅಂತರಂಗವನ್ನು ಶುದ್ಧವಾಗಿಟ್ಟುಕೊಂಡಾಗ ಒಳಗಿನ ಆತ್ಮ ಇತರರಿಗೆ ಲೇಸನ್ನು ಬಯಸಲು ಪ್ರರೇಪಿಸುತ್ತದೆ. ಆತ್ಮ ಶುದ್ಧಿ ಇದ್ದಾಗ ಮಾತ್ರ ನಮ್ಮ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಎಂದು ತಾಲೂಕಿನ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಕೊನೆಯ ವಿಶೇಷ ಪೂಜಾ ಮಹಾಮಂಗಲ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
Advertisement
ಇಡೀ ವರುಷದುದ್ದಕ್ಕೂ ಪ್ರತಿಯೊಬ್ಬ ಮನುಷ್ಯ ಜೀವಿ ಸಾಂಸಾರಿಕ ಜೀವನದಲ್ಲಿ ತೊಡಗಿಸಿಕೊಂಡು ಅನೇಕ ಎಡರು- ತೊಡರುಗಳನ್ನು ಅನು ಭವಿಸುತ್ತಾನೆ. ಈ ಸಂಕಷ್ಟಗಳಿಂದ ನೀಗಲು ಶ್ರಾವಣ ಮಾಸದಲ್ಲಿ ಪುರಾಣ-ಪುಣ್ಯ ಕಥೆಗಳನ್ನು ಆಲಿಸುವುದು ಅಗತ್ಯವಾಗಿದೆಯೆಂದು ಹೇಳಿದರು. ಶ್ರಾವಣವೆಂದರೆ ಶ್ರವಣ. ಅಂದರೆ ಒಳ್ಳೆಯ ವಿಚಾರಗಳನ್ನು ಆಲಿಸುವುದು ಎಂದರ್ಥವಾಗುತ್ತದೆ.
ಮನುಷ್ಯ ಮಹಾಂತನಾಗಲು ಸಾಧ್ಯವಾಗುತ್ತದೆ ಎಂದರು. ಪ್ರತಿ ಯೊಬ್ಬರು ಧರ್ಮ ಮಾರ್ಗದಲ್ಲಿ ನಡೆಯಬೇಕು. ಅಧರ್ಮ, ಅನೀತಿ ಗಳಿಂದ ದೂರವಿದ್ದು, ಸನ್ಮಾರ್ಗದಲ್ಲಿ ಸಾಗಿದಾಗ ಬದುಕಿಗೆ ಅರ್ಥವಂತಿಕೆ ಬರುತ್ತದೆ. ಮನುಷ್ಯ ಬದುಕು
ಮಾರ್ಗದರ್ಶಿಯಾಗಬೇಕಾದರೆ ಮಾನ ವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅವಶ್ಯ ವಿದೆ ಯೆಂದರು. ಲೋಕ ಕಲ್ಯಾಣ ಮತ್ತು ಜನ ಕಲ್ಯಾಣವನ್ನು ಬಯಸಿ, ತಿಂಗಳ ಪರ್ಯಂತ ವಿಶೇಷ ಪೂಜೆಯನ್ನು ನೆರವೇರಿಸಿಕೊಂಡು ಬರಲಾಗಿದೆ. ಶ್ರೀ
ವಿಶ್ವಾರಾಧ್ಯರು ಸಂಪ್ರೀತರಾಗಿ ಎಲ್ಲರಿಗೂ ಒಳಿತಾಗಲು ಹರಸುತ್ತಾರೆಂದು ಹೇಳಿದರು. ಪ್ರಸಾದ ವಿತರಣೆ: ಬೆಳಗ್ಗೆ ಶ್ರೀ ವಿಶ್ವಾರಾಧ್ಯರ ಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾ ಭಿಷೇಕವನ್ನು ನೆರವೇರಿ ಸುವುದರೊಂದಿಗೆ ತಿಂಗಳ ಪರ್ಯಂತ ನಡೆಸಿಕೊಂಡು ಬಂದ ಪೂಜೆಯನ್ನು ಮಹಾ ಮಂಗಲಗೊಳಿಸಲಾಯಿತು. ತರುವಾಯ ಸಿದ್ಧರಾಮ ಮೇತ್ರೆ ಪರಿವಾರದವರಿಂದ ಡಾ| ಗಂಗಾಧರ ಸ್ವಾಮೀಜಿ ಪಾದಪೂಜೆ ನಡೆಯಿತು.
Related Articles
ಮೆರಗನ್ನು ಹೆಚ್ಚಿಸಿತು. ಎಲ್ಲ ಭಕ್ತಾದಿಗಳಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
Advertisement