ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಹಡಪದ ಅಪ್ಪಣ್ಣ ಸಮಾಜಗಳ ಆಶ್ರಯದಲ್ಲಿ ಶುಕ್ರವಾರ ಶಿವಯೋಗಾಶ್ರಮದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣನವರಿಗಿಂತ ಮುನ್ನ ಎಲ್ಲರೂ ಶೋಷಿತರಾಗಿದ್ದರು. ಲಿಂಗಾಯತರು ಸಹ ಅಲಕ್ಷಕ್ಕೆ ಒಳಗಾಗಿದ್ದರು. ಬಸವಣ್ಣನವರು ನೀಡಿದ ಸಂಸ್ಕಾರ, ಸ್ವಾಭಿಮಾನ ಪಾಲಿಸುವ ಮೂಲಕ ಲಿಂಗಾಯತರಾದರು. ಬಸವಾದಿ ಶರಣರು ಎಲ್ಲ ಮತ್ತು ಎಲ್ಲರನ್ನೂ ಅಪ್ಪಿಕೊಳ್ಳುವ ಉದಾತ್ತ ಗುಣದಿಂದ ಆದರ್ಶನೀಯ, ಸೈದ್ಧಾಂತಿಕ, ಮಾನವೀಯ ತಳಹದಿಯೊಂದಿಗೆ ಮೌಲಿಕವಾದ ಸಮಾಜ
ಕಟ್ಟಿಕೊಟ್ಟಿದ್ದಾರೆ ಎಂದರು.
Advertisement
ಬಸವಣ್ಣ ಮತ್ತು ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ನಡುವೆ ಅವಿನಾಭಾವ ಸಂಬಂಧ ಇತ್ತು. ಬಸವಣ್ಣ ಆದರ್ಶದ ನೆಲೆಗಟ್ಟಿನಲ್ಲಿ ಸಮಾಜ ಕಟ್ಟಿದರು. ಅವರು ಕಟ್ಟಿದಂತಹ ಸಮಗ್ರ ಸಮಾಜದಲ್ಲಿ ಹಡಪದ ಅಪ್ಪಣ್ಣ ಸೇರಿದಂತೆ ಎಲ್ಲ ವರ್ಗದವರಿದ್ದರು ಎಂದರು.
Related Articles
ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಸುಂದರವಾಗಿ ಕಾಣಲು ಹಡಪದ ಸಮಾಜದ ಕೊಡುಗೆ ಅಪಾರ. ಎಲ್ಲ ಸಮಾಜದ ಸಮಾನ ಸ್ಥಾನಮಾನಕ್ಕಾಗಿ ಹಿಂದೆ ಬಸವಣ್ಣನವರು ಹೋರಾಡಿದಂತೆ ಈಗ ಮುರುಘಾ ಶ್ರೀಗಳು ಕಾರ್ಯೋನ್ಮುಖರಾಗಿದ್ದಾರೆ. ಎಲ್ಲರೂ ಸಂಘಟಿತರಾಗಿ, ಮೌಡ್ಯವನ್ನು ಮೆಟ್ಟಿನಿಂತು ಮುಂದೆ ಸಾಗಬೇಕು ಎಂದರು.
Advertisement
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಮುರುಘಾ ಶರಣರು ದೇಶದ, ಸಮಾಜದ ಕ್ರಾಂತಿಕಾರಿ ಸ್ವಾಮಿಗಳಾಗಿದ್ದಾರೆ. ಹಡಪದ ಅಪ್ಪಣ್ಣ ಸಮಾಜದವರಿಗೆ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ನವದೆಹಲಿಯ ತೋಂಟದಾರ್ಯ ಶಾಖಾ ಮಠದ ಶ್ರೀ ಮಹಾಂತ ಸ್ವಾಮೀಜಿ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವರಾಜ್, ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಅಧ್ಯಕ್ಷ ಶಶಿ ಬಸಾಪುರ, ಡಾ| ಎಚ್. ವಿಶ್ವನಾಥ್, ಎಂ. ಜಯಕುಮಾರ್, ದೇವಗಿರಿ ವೀರಭದ್ರಪ್ಪ, ಮರುಳ ಸಿದ್ದಪ್ಪ, ಯು. ಬಸವರಾಜ್, ಜಿಲ್ಲಾಧಿ ಕಾರಿ ಡಿ. ಎಸ್. ರಮೇಶ್, ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್, ದಾವಣಗೆರೆ ತಹಶೀಲ್ದಾರ್ ಜಿ. ಸಂತೋಷ್‌ಕುಮಾರ್ ಇತರರು ಇದ್ದರು.
ಬಸವ ಕಲಾ ಲೋಕದವರು ವಚನ ಗಾಯನ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಎನ್.ಜೆ .ಶಿವಕುಮಾರ್ ನಿರೂಪಿಸಿದರು. ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಸಾಲಸೌಲಭ್ಯ, ನಿವೇಶನ, 2ಎ ಪ್ರವರ್ಗಕ್ಕೆ ಸೇರ್ಪಡೆ, ಕ್ಷೌರಿಕ ಕುಟೀರ ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು. ವೇದಿಕೆ ಕಾರ್ಯಕ್ರಮದ ಮುನ್ನ ಹಡಪ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಸ್ವಾಮೀಜಿ ನೇಮಕ ಸಮರ್ಥನೆ ಕಳೆದ 20 ವರ್ಷಗಳ ಹಿಂದೆ ಜಾತಿಗೊಬ್ಬ ಸ್ವಾಮೀಜಿಯವರಿಗೆ ದೀಕ್ಷೆ ನೀಡಿದ ಸಂದರ್ಭದಲ್ಲಿ ಮುರುಘಾ ಮಠ ಜಾತಿಗೊಬ್ಬ ಸ್ವಾಮೀಜಿ ಮಾಡುತ್ತಿರುವುದು ಸೂಕ್ತ ನಿರ್ಣಯ ಅಲ್ಲ. ಏನೋ ಒಂದು ರೀತಿಯಲ್ಲಿ ಸ್ವಾಮೀಜಿಯವರನ್ನು ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಈಗ ನಾವು ನೇಮಕ ಮಾಡಿದ್ದ ಸ್ವಾಮೀಜಿಯವರು ಮುಖ್ಯಮಂತ್ರಿಗಳ ಜೊತೆಗೂಡಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಆ ಮೂಲಕ ಆಯಾ ಜಾತಿ ಬಾಂಧವರನ್ನು ತಲುಪುತ್ತಿದ್ದಾರೆ. ನಾವು ಅಂತಹ ವಾತಾವರಣ ನಿರ್ಮಾಣ ಆಗುವುದನ್ನೇ ಬಯಸಿದ್ದಾಗಿ ಹೇಳುವ ಮೂಲಕ ಡಾ| ಶಿವಮೂರ್ತಿ ಮುರುಘಾ ಶರಣರು ಜಾತಿಗೊಬ್ಬ ಸ್ವಾಮೀಜಿಯವರನ್ನು ಮಾಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡರು.