Advertisement
ಬಸವ ಜಯಂತಿ ನಿಮಿತ್ತ ಮೂರುಸಾವಿರ ಮಠದ ಆವರಣದಲ್ಲಿ ವೀರಶೈವ ಸಂಘಟನಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯಕ್ಕೆ ವಚನಗಳನ್ನು ನೀಡಿದ್ದಲ್ಲದೇ ಶರಣ ಹಾಗೂ ಶರಣೆಯರಿಗೆ ವಚನಗಳನ್ನು ರಚಿಸಲು ಪ್ರೇರೇಪಿಸಿದ ಮಹಾತ್ಮ ಬಸವಣ್ಣ. ಲಿಂಗ, ವರ್ಣ, ವರ್ಗ ಭೇದ ಹೋಗಲಾಡಿಸಲು ಪ್ರಯತ್ನ ಪಟ್ಟ ವ್ಯಕ್ತಿ ಎಂದರು.
Related Articles
Advertisement
ಸನ್ಮಾನ ಸ್ವೀಕರಿಸಿದ ಐಎಎಸ್ ಟಾಪರ್ ರಾಹುಲ್ ಸಂಕನೂರ ಮಾತನಾಡಿ, ಗುರಿ ದೊಡ್ಡದಾಗಿರಬೇಕೆನ್ನುವ ಮಹತ್ವದ ಪಾಠವನ್ನು ಮಕ್ಕಳಿಗೆ ಕಲಿಸಬೇಕು. ದೊಡ್ಡ ಗುರಿ ಇಟ್ಟುಕೊಳ್ಳುವುದರೊಂದಿಗೆ ಶ್ರದ್ಧೆ, ನಿಷ್ಠೆಯಿಂದ ಗುರಿಯೆಡೆಗೆ ಸಾಗಬೇಕು ಎಂಬುದನ್ನು ಪಾಲಕರು ಮಕ್ಕಳಿಗೆ ತಿಳಿಸಿಕೊಡಬೇಕು. ಮಕ್ಕಳನ್ನು ಸಾಧನೆಗೆ ಪ್ರೇರೇಪಿಸುವುದು ಪಾಲಕರ ಜವಾಬ್ದಾರಿ ಎಂದರು.
ಸತತ 4 ವರ್ಷ ಪ್ರಯತ್ನದ ನಂತರ ನಾನು ಐಎಎಸ್ ಉತ್ತೀರ್ಣನಾಗಿದ್ದೇನೆ. ಪರಿಶ್ರಮದಿಂದ ಯಾರಾದರೂ ಸಾಧನೆ ಮಾಡಬಹುದೆಂಬುದಕ್ಕೆ ನಾನೇ ಸಾಕ್ಷಿ ಎಂದರು.
ಚನ್ನಬಸಪ್ಪ ಧಾರವಾಡಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಶ್ರೀಶೈಲಪ್ಪ ಶೆಟ್ಟರ, ಜಗದೀಶ ಕಾಳಣ್ಣವರ, ಅಂದಾನಪ್ಪ ಹರದಾರಿ, ಬಸವರಾಜ ಹತ್ತಿಕಾಳ, ಅಂದಾನಪ್ಪ ಸಜ್ಜನರ, ವೀರಣ್ಣ ನೀರಲಗಿ, ತಾರಾದೇವಿ ವಾಲಿ, ಜಯಲಕ್ಷ್ಮಿ ಉಮಚಗಿ ಇದ್ದರು.