Advertisement

ಅಗ್ನಿ ದೇವರು ಎನ್ನುವವರು ಅದರ ಜತೆ ಮಲಗುತ್ತಿರಾ ಎಂದಿದ್ದ ಬಸವಣ್ಣ : ನಿಜಗುಣಾನಂದ ಶ್ರೀ

09:43 PM May 13, 2024 | Team Udayavani |

ಧಾರವಾಡ: ಅಗ್ನಿಯನ್ನು ದೇವರ ಸ್ವರೂಪವಾಗಿ ಕಾಣುವವರೇ ಅದರ ಮೇಲೆ ಬರಿಗಾಲಿನಲ್ಲಿ ಓಡಾಡುತ್ತಾ ತುಳಿಯುತ್ತಾರೆ. ಅದರ ಬದಲು ಸ್ವಲ್ಪ ಹೊತ್ತು ಅದರ ಮೇಲೆ ಮಲಗತ್ತೀರಾ ಎಂದು ತೋಂಟದ ಶ್ರೀ ನಿಜಗುಣಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.

Advertisement

ಕವಿವಿಯಲ್ಲಿ ನಡೆದ ‘ಬಸವಣ್ಣ-ಸಾಂಸ್ಕೃತಿಕ ನಾಯಕ’ ಕುರಿತಾದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಅಗ್ನಿಯನ್ನು ದೇವರ ಮಾಡಿ, ಅದರ ಮೇಲೆಯೇ ಓಡುತ್ತಾರೆ. ಇದಕ್ಕೇನು ಅನ್ನಬೇಕು. ಅದರ ಬದಲು ಸ್ವಲ್ಪ ಹೊತ್ತು ಮಲಗಿಬಿಟ್ಟರೆ ಅಗ್ನಿಯ ನಿಜಸ್ವರೂಪ ಕೂಡ ತಿಳಿಯುತ್ತದೆ ಎಂದರು.

ಬೆಂಕಿಯನ್ನು ದೇವರೆನ್ನುವುದು ನಿಮ್ಮ ಸಂಸ್ಕೃತಿಯಾ? ಬೆಂಕಿಗೆ ತುಪ್ಪ ಹಾಕುವುದು ನಿಮ್ಮ ಸಂಸ್ಕೃತಿಯಾ? ಜನರನ್ನು ಯಾವ ಜಾತಿ ಎಂಬುದಾಗಿ ಕೇಳುವುದು ಸಂಸ್ಕೃತಿಯಾ? ಇದೆಲ್ಲವೂ ನನ್ನ ಮಾತಲ್ಲ. ಬಸವಣ್ಣನವರ ಹೇಳಿದ ಮಾತು. ಇದನ್ನು ಬಸವಣ್ಣ ಕೇಳಿದ್ದಾನೆ. ನಾ ಹೇಳಿದೆ ಎಂಬುದಾಗಿ ನನ್ನ ಮೇಲೆ ಸಿಟ್ಟಾಗಬೇಡಿ ಎಂದು ಚಟಾಕಿ ಹಾರಿಸಿದರು.

ಬಸವಣ್ಣನವರಿಗೆ ಎಲ್ಲಿಯೂ ಕೆಟ್ಟವರು ಕಾಣಲಿಲ್ಲ. ಆತನ ಸಂಸ್ಕೃತಿ, ಸಂಸ್ಕಾರ ಯಾರಿಗೂ ಕೊಡಲು ಆಗುವುದಿಲ್ಲ. ಮನುಷ್ಯರಲ್ಲಿ ಪ್ರೀತಿ ಕಂಡು ಮನುಷ್ಯತ್ವದ ಬಗ್ಗೆ ಮಾತನಾಡಿದವರು ಬಸವೇಶ್ವರರು. ಆದರೆ ಕಾಣುವ ಮನುಷ್ಯರನ್ನು ಪ್ರೀತಿ ಮಾಡಲಾರದವರು ಕಾಣದೇ ಇರೋ ದೇವರನ್ನು ಪ್ರೀತಿ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಪ್ರಾಣಿದಯವಾದ ಸಂಸ್ಕೃತಿ ಬಸವಣ್ಣನವರದ್ದು. ಹಬ್ಬ-ಹರಿದಿನಗಳಲ್ಲಿ ಕುರಿ, ಕೋಣ ತಂದಿಟ್ಟು ಕಡಿಯುತ್ತಿದ್ದರು. ಆಗ ಬಸವಣ್ಣ ಯಾವ ಸಂಸ್ಕೃತಿ ನಿಮ್ಮದು? ಎಂಬುದಾಗಿ ಕೇಳಿದ್ದರು. ದೇವರ ಹೆಸರಿನಲ್ಲಿ ಪ್ರಾಣಿ ವಧೆ ಮಾಡುವುದು ನಿಮ್ಮ ಸಂಸ್ಕೃತಿಯೇ? ದೇವರ ಹೆಸರಲ್ಲಿ ಹೋಮ ಮಾಡಿ ತಿನ್ನುವ ಪದಾರ್ಥ ಹಾಕುತ್ತಿರಲ್ಲ? ಏನಿದು ನಿಮ್ಮ ಸಂಸ್ಕೃತಿ? ಬಸವಣ್ಣ ಸುಮ್ಮನೆ ಸಾಂಸ್ಕೃತಿಕ ನಾಯಕ ಅಲ್ಲ. ಅವರನ್ನು ದಕ್ಕಿಸಿಕೊಂಡು ಮಾತನಾಡಲು ಗಟ್ಟಿತನ ಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next