Advertisement

ಬಸವನಗುಡಿ ಈಜು ಕೇಂದ್ರಕ್ಕೆ ಸಮಗ್ರ ಪ್ರಶಸ್ತಿ

01:04 PM Aug 19, 2017 | Team Udayavani |

ಬೆಂಗಳೂರು: ರಾಜ್ಯ ಈಜು ಸಂಸ್ಥೆ ವತಿಯಿಂದ ಕಳೆದ ಮೂರು ದಿನಗಳಿಂದ ಬೆಂಗಳೂರಿನ ರಾಮಕೃಷ್ಣ ಹೆಗ್ಡೆ ಈಜು ಕೇಂದ್ರದಲ್ಲಿ ನಡೆಯುತ್ತಿದ್ದ ರಾಜ್ಯ ಹಿರಿಯರ ಈಜು ಕೂಟದಲ್ಲಿ ಬಸವನ ಗುಡಿ ಈಜು ಕೇಂದ್ರ (463 ಅಂಕ) ಸಮಗ್ರ ಪ್ರಶಸ್ತಿ ಗೆದ್ದಿದೆ. 

Advertisement

ಒಟ್ಟಾರೆ 192 ಅಂಕ ಪಡೆದ ಗ್ಲೋಬಲ್‌ ಸ್ವಿಮ್ಮಿಂಗ್‌ ಸೆಂಟರ್‌ ರನ್ನರ್‌ಅಪ್‌ ಪ್ರಶಸ್ತಿ ಪಡೆದಿದೆ. 113 ಅಂಕ ಪಡೆದ ಡಾಲ್ಫಿನ್‌ ಈಜು ಕೇಂದ್ರ ತೃತೀಯ ಸ್ಥಾನ ಪಡೆಯಿತು. ಉಳಿದಂತೆ ಪೂಜಾ ಅಕ್ವೇಟಿಕ್‌ ಸೆಂಟರ್‌ (54 ಅಂಕ) ಹಾಗೂ ಪುತ್ತೂರು ಅಕ್ವೇಟಿಕ್‌ ಕ್ಲಬ್‌ (30 ಅಂಕ) ಕ್ರಮವಾಗಿ ನಂತರದ ಸ್ಥಾನ ಪಡೆದುಕೊಂಡವು. ಇನ್ನು ವಾಟರ್‌ ಪೋಲೋದ ಪುರುಷರ ವಿಭಾಗದಲ್ಲಿ ಎಎಸ್‌ಸಿ ಹಾಗೂ ಮಹಿಳಾ ವಿಭಾಗದಲ್ಲಿ ಬಸವನಗುಡಿ ಈಜು ಕೇಂದ್ರ ಪ್ರಶಸ್ತಿ ಗೆದ್ದಿದೆ. ಪುರುಷರ ವಿಭಾಗದಲ್ಲಿ ಬಸವನಗುಡಿ ತಂಡ ರನ್ನರ್‌ಅಪ್‌ ಪಡೆಯಿತು.

76 ಪದಕ ಗೆದ್ದ ಬಸವನಗುಡಿ ಈಜು ಕೇಂದ್ರ: ಬಸವನಗುಡಿ ಈಜು ಕೇಂದ್ರ ಕೂಟದಲ್ಲಿ ಒಟ್ಟು 76 ಪದಕ ಗೆದ್ದಿತು. ಪುರುಷರ ವಿಭಾಗದಲ್ಲಿ 10 ಚಿನ್ನ, 12 ಬೆಳ್ಳಿ ಹಾಗೂ 15 ಕಂಚಿನ ಪದಕ ಮತ್ತು ಮಹಿಳಾ ವಿಭಾಗದಲ್ಲಿ 15 ಚಿನ್ನ, 15 ಬೆಳ್ಳಿ ಹಾಗೂ 9 ಕಂಚಿನ ಪದಕ. ಒಟ್ಟಾರೆ 25 ಚಿನ್ನ, 27 ಬೆಳ್ಳಿ ಹಾಗೂ 24 ಕಂಚಿನ ಪದಕವನ್ನು ಬಸವನಗುಡಿ ಈಜು ಕೇಂದ್ರ ಗೆದ್ದಿತು. ಗ್ಲೋಬಲ್‌ ಸ್ವಿಮ್ಮಿಂಗ್‌ ಸೆಂಟರ್‌ ಒಟ್ಟು 23 ಪದಕ ಹಾಗೂ ಡಾಲ್ಫಿನ್‌ ಅಕ್ವೇಟಿಕ್ಸ್‌ 11 ಪದಕ ಜಯಿಸಿತು. 

ಶ್ರೀಹರಿ, ಸಲೋನಿ, ಅಮರ್‌ ಚಾಂಪಿಯನ್ಸ್
ಒಂದು ರಾಷ್ಟ್ರೀಯ ದಾಖಲೆ ಹಾಗೂ 1 ರಾಜ್ಯ ದಾಖಲೆ ನಿರ್ಮಿಸಿದ ಗ್ಲೋಬಲ್‌ ಈಜು ಕೇಂದ್ರದ ಶ್ರೀಹರಿ ನಟರಾಜನ್‌ ಒಟ್ಟಾರೆ 588 ಅಂಕ ಪಡೆದು ವೈಯಕ್ತಿಕ ವಿಭಾಗದ ಚಾಂಪಿಯನ್‌ ಆದರು. ಮಹಿಳಾ ವಿಭಾಗದಲ್ಲಿ ಬಸವನಗುಡಿ ಈಜು ಕೇಂದ್ರದ ಸಲೋನಿ ದಲಾಲ್‌ 3 ರಾಜ್ಯ ದಾಖಲೆಗಳೊಂದಿಗೆ ಒಟ್ಟಾರೆ 176 ಅಂಕ ಸಂಪಾದಿಸಿ ವೈಯಕ್ತಿಕ ಶ್ರೇಷ್ಠ ಪ್ರಶಸ್ತಿ ಗೆದ್ದರು.  ಪುರುಷರ ವಿಭಾಗದ ಡೈವಿಂಗ್‌ನಲ್ಲಿ 14 ಅಂಕ ಪಡೆದ ಎಬಿಬಿಎ ನ ಓಂ ಅಮರ್‌ ಹೊಂಗೇಕರ್‌ ಚಾಂಪಿಯನ್‌ ಆದರು. 

Advertisement

Udayavani is now on Telegram. Click here to join our channel and stay updated with the latest news.

Next