Advertisement

ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭ ; ಹೇಗೆ ಆರಂಭವಾಯ್ತು ಗೊತ್ತಾ?

03:32 PM Dec 03, 2018 | Team Udayavani |

ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ  ಕಾರ್ತಿಕ ಮಾಸದ ಕೊನೆಯ ಸೋಮವಾರ ಅಧಿಕೃತ ಚಾಲನೆ ದೊರೆತಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದು , ಪರಿಷೆಯನ್ನು ಪ್ಲ್ರಾಸ್ಟಿಕ್‌ ಮುಕ್ತ ಮಾಡಿ, ಸ್ವತ್ಛತೆ ಕಾಪಾಡುವಂತೆ ಮನವಿ ಮಾಡಲಾಗಿದ್ದು, ವ್ಯವಸ್ಥೆಯನ್ನೂ ಮಾಡಲಾಗಿದೆ.

Advertisement

ಪ್ಲಾಸ್ಟಿಕ್‌ ಚೀಲಕ್ಕೆ ಬದಲಾಗಿ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಬಳಸಲು ವ್ಯವಸ್ಥೆ ಮಾಡಲಾಗಿದೆ.

ಎರಡು ದಿನ ಸಂಚಾರ ಬಂದ್‌
 ರಾಮಕೃಷ್ಣ ಆಶ್ರಮದಿಂದ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜುವರೆಗಿನ ರಸ್ತೆಯಲ್ಲಿ ಸೋಮವಾರ, ಮಂಗಳವಾರ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಪರಿಷೆಗೆ ಆಗಮಿಸುವವರ ಅನುಕೂಲಕ್ಕಾಗಿ ಸಮೀಪದ ಎಪಿಎಸ್‌ ಕಾಲೇಜು ಆವರಣ ಮತ್ತು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.  

ಪರಿಷೆ ಆರಂಭವಾಗಿದ್ದು ಹೇಗೆ ? 
ಬೆಂಗಳೂರು ಅಭಿವೃದ್ಧಿ ಹೊಂದುವುದಕ್ಕೂ ಮೊದಲು, ಬಸವನಗುಡಿಯ ಪ್ರದೇಶ ಕೃಷಿ ಭೂಮಿಯಾಗಿತ್ತು. ಅಲ್ಲಿ ಹೆಚ್ಚಾಗಿ ಕಡಲೆಕಾಯಿ ಬೆಳೆಯುತ್ತಿದ್ದರು. ಫ‌ಸಲು ಬಲಿಯುತ್ತಿದ್ದಂತೆಯೇ ಯಾವುದೋ ಪ್ರಾಣಿ, ರಾತ್ರೋರಾತ್ರಿ ಅದನ್ನು ತಿಂದು ಹಾಕುತ್ತಿತ್ತು. ಗಾಬರಿಯಾದ ರೈತರು, ರಾತ್ರಿಯ ವೇಳೆ ಅಡಗಿ ಕುಳಿತು ಪರೀಕ್ಷಿಸಿದಾಗ- ಭಾರೀ ಗಾತ್ರದ ಹೋರಿಯೊಂದು ಕಡಲೆಕಾಯಿ ಬೆಳೆಯನ್ನು ತಿನ್ನುವುದು ಕಾಣಿಸಿತು. ಅದು ಸಾಮಾನ್ಯ ಹೋರಿಯಲ್ಲ. ದೈವಾಂಶ ಸಂಭೂತವಾದ
ಬಸವಣ್ಣ ಎಂದು ಊಹಿಸಿದ ರೈತರು- ನಮ್ಮ ಬೆಳೆಯನ್ನು ಹಾಳು ಮಾಡಬೇಡ. ಪ್ರತಿ ವರ್ಷವೂ ಕೃಷಿ ಚಟುವಟಿಕೆ ಮುಗಿದ ನಂತರ, ನಿನ್ನ ಹೆಸರಿನಲ್ಲಿ ಪರಿಷೆ ಮಾಡುತ್ತೇವೆ ಎಂದು ಹರಕೆ ಕಟ್ಟಿಕೊಂಡರಂತೆ… 

Advertisement
Advertisement

Udayavani is now on Telegram. Click here to join our channel and stay updated with the latest news.

Next