Advertisement

ಕೋವಿಡ್ ವಾರಿಯರ್ಸ್ ಗಳ ಸೇವೆ ಅನನ್ಯ: ಸುರೇಶಗೌಡ

06:35 PM May 31, 2020 | Naveen |

ಬಸವನಬಾಗೇವಾಡಿ: 3 ತಿಂಗಳದಿಂದ ಮನೆ ಮಠಗಳನ್ನು ಬಿಟ್ಟು ಜೀವದ ಹಂಗು ತೊರೆದು ಜನರ ಸೇವೆಗೆ ನಿರಂತರವಾಗಿ ಸೇವೆ ಸಲ್ಲಿಸಿದ ಪೊಲೀಸ್ ಇಲಾಖೆ ಕಾರ್ಯ ಗಣನೀಯವಾಗಿದೆ ಎಂದು ಸುರೇಶಗೌಡ ಪಾಟೀಲ (ಸಾಸನೂರ) ಹೇಳಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆ ಹೊರ ಆವರಣದಲ್ಲಿ ಪೊಲೀಸ್‌ ಇಲಾಖೆ ಸಿಬ್ಬಂದಿಗಳಿಗೆ ಆಹಾರ ಧಾನ್ಯ ಕಿಟ್‌ ವಿತರಣೆ ಮಾಡಿ ಮಾತನಾಡಿದ ಅವರು, ದೇಶಾದ್ಯಂತ ಕೋವಿಡ್ ವೈರಸ್‌ ಭೀತಿಯಿಂದ ಕೇಂದ್ರ ಸರಕಾರದ ಆದೇಶದಂತೆ ಲಾಕ್‌ಡೌನ್‌ ಅವಧಿಯಲ್ಲಿ ಘೋಷಣೆ ಮಾಡಿರುವ ಹಿನ್ನೆಲೆಯಿಂದ ಪೊಲೀಸ್‌ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಮನೆ ಮಠ ಕುಟುಂಬದ ಸದಸ್ಯರನ್ನು ಬಿಟ್ಟು ಜೀವದ ಹಂಗು ತೊರೆದು ನಿರಂತರವಾಗಿ ಜನರ ಸೇವೆ ಮಾಡುವ ಮೂಲಕ ತಮ್ಮ ಈ ನಿಷ್ಠೆ, ದೇಶದ ಜನರು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಬಿಜೆಪಿ ಮುಖಂಡ ಡಾ| ಬಸವರಾಜ ಅಸ್ಕಿ ಮಾತನಾಡಿ, ಕೋವಿಡ್ ವೈರಸ್‌ ವಿರುದ್ಧ ನಿರಂತರವಾಗಿ ಆರೋಗ್ಯ ಇಲಾಖೆ, ಪೌರಕಾರ್ಮಿಕರು, ಆಶಾ ಕಾರ್ಯಕರ್ತರು, ಪೊಲೀಸ್‌ ಇಲಾಖೆ ಸೇರಿದಂತೆ ಅನೇಕರು ಹೋರಾಟ ಮಾಡಿ ಜನರ ರಕ್ಷಣೆಗೆ ಮತ್ತು ಸ್ವಚ್ಛತೆಗೆ ಜನರ ನಿರಂತರವಾಗಿ ಶ್ರಮಿಸಿದ ಫಲವಾಗಿ ಇಂದು ರಾಜ್ಯದಲ್ಲಿ ಕೋವಿಡ್ ನಿಯಂತ್ರಕ್ಕೆ ತರಲು ಸಾಧ್ಯವಾಗಿದೆ ಎಂದು ಹೇಳಿದರು.

ಬಸವನಬಾಗೇವಾಡಿ ಡಿ.ವೈ. ಎಸ್‌.ಪಿ. ಶಾಂತವೀರ ಈ ಮಾತನಾಡಿ, ಕೋವಿಡ್ ವಿರುದ್ಧ ಹೋರಾಟ ಮಾಡಿದಂಥ ವಾರಿಯರ್ಗೆ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ವೈಯಕ್ತಿಕವಾಗಿ ದಿನಸಿ ಕಿಟ್‌ ಹಾಗೂ ಮಾಸ್ಕ್ ಹಂಚುವ ಮೂಲಕ ಜನಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಹೇಬಗೌಡ ಪಾಟೀಲ, ಜಿಪಂ ಸದಸ್ಯರಾದ ಕಲ್ಲಪ್ಪ ಮಟ್ಟಿ, ಸಂತೋಷ ನಾಯಕ ಸಿ.ಪಿ.ಐ ಸೋಮಶೇಖರ ಜುಟ್ಟಲ್‌, ರಾಮನಗೌಡ ನಾವದಗಿ, ಪಿ.ಎಸ್‌.ಐ. ಚಂದ್ರಶೇಖರ ಹರಕಲ್ಲ, ಬಿ.ಎಂ. ಬಸನಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next