Advertisement

ದುಶ್ಚಟ ಜೋಳಿಗೆಗೆ ಹಾಕಿ ಉತ್ತಮ ಜೀವನ ಸಾಗಿಸಿ

04:27 PM May 27, 2019 | Naveen |

ಬಸವನಬಾಗೇವಾಡಿ: ಇಂದು ನಮ್ಮ ಯುವ ಪೀಳಿಗೆಗಳು ಸಲ್ಲದ ದುಶ್ಚಟಗಳಿಗೆ ದಾಸರಾಗಿ ತಮ್ಮ ಸುಂದರ ಬದುಕನ್ನೆ ಹಾಳು ಮಾಡಿಕೊಳ್ಳುತ್ತಿರುವುದು. ನೋವಿನ ಸಂಗತಿಯಾಗಿದೆ ಎಂದು ಗದುಗಿನ ಅನ್ನದಾನೀಶ್ವರ ಶಾಸ್ತ್ರಿಗಳು ಹೇಳಿದರು.

Advertisement

ತಾಲೂಕಿನ ಇಂಗಳೇಶ್ವರ ಗ್ರಾಮದ ಹಿರೇಮಠದ ನೂತನ ಕಟ್ಟಡದ ಉದ್ಘಾಟಣಾ ಸಮಾರಂಭ ನಿಮಿತ್ತ ಒಂದು ತಿಂಗಳವರೆಗೆ ಹಮ್ಮಿಕೊಂಡಿದ್ದ ಗುಡ್ಡಾಪುರ ದಾನಮ್ಮದೇವಿ ಪುರಾಣದ ಪ್ರತಿ ದಿನದಂದು ಬೆಳಗ್ಗೆ ಗ್ರಾಮದ ಓಣಿಗಳಲ್ಲಿ ಸಂಚರಿಸಿ, ದುಶ್ಚಟಗಳನ್ನು ತ್ಯಜಿಸಲು ಸಭೆ ಮುಖಾಂತರ ಯುವಕರಿಗೆ ಅವರು ಸಂದೇಶ ನೀಡಿದರು.

ಒಂದು ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಗರಡಿ ಮನೆ, ಕುಸ್ತಿ, ಖೋಖೋ, ಕಬಡ್ಡಿ ಸೇರಿದಂತೆ ಅನೇಕ ಗ್ರಾಮೀಣ ಭಾಗದಲ್ಲಿ ಯುವಕರು ದಿನನಿತ್ಯ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ದೇಹವನ್ನು ಸದೃಢವಾಗಿ ಬೆಳೆಸಿಕೊಳ್ಳುತ್ತಿದ್ದರು. ಆದರೆ ಇಂದು ಇಂತ ಚಟುವಟಿಕೆಗಳು ಕಣ್ಮರೆಯಾಗಿ ಯುವಕರು ತಮ್ಮ ಜೀವನ ಹಾಳು ಮಾಡಿಕೊಳ್ಳುವಂತ ಸ್ಥಿತಿ ಬಂದೊದಗಿದೆ ಎಂದರು.

ಯುವಕರು ಇತ್ತೀಚಿಗೆ ಹೆಚ್ಚು ಹೆಚ್ಚು ದುಶ್ಚಟಗಳ ದಾಸರಾಗಿ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ರೋಗಗಳಿಗೆ ತುತ್ತಾಗಿ ಸಾವಿಗಿಡಾಗುತ್ತಿದ್ದಾರೆ. ಇದರಿಂದ ಮುಂದಿನ ಭವಿಷ್ಯದಲ್ಲಿ ಮಕ್ಕಳನ್ನೇ ಆಶ್ರಯಿಸುವ ತಂದೆ ತಾಯಿಗಳು ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಆದ್ದರಿಂದ ದುಶ್ಚಟಗಳನ್ನು ಮುಚ್ಚುಮರೆಯಿಲ್ಲದೆ ಶ್ರೀಗಳ ಜೋಳಿಗೆಗೆ ಹಾಕಿ ವ್ಯಸನ ಮುಕ್ತ ವ್ಯಕ್ತಿಗಳಾಗಿ ರೂಪುಗೊಳ್ಳಿರಿ ಎಂದು ಶ್ರೀಗಳು ಸಲಹೆ ನೀಡಿದರು.

ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಇಂದಿನ ಯುವ ಪೀಳಿಗೆ ತಂದೆ ತಾಯಿಗಳ ಮಾತನ್ನು ಆಲಿಸದೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಂಜೆಯಾದರೆ ಸಾಕು ಡಾಬಾಗಳಿಗೆ ತೆರಳುತ್ತಾರೆ. ಕ್ಷಣಿಕ ಬಾಯಿ ಚಪಲಕ್ಕಾಗಿ ಇಲ್ಲ ಸಲ್ಲದ ಚಟಾದಿಗಳನ್ನು ಅಂಟಿಸಿಕೊಂಡು ರೋಗ ರುಜಿನಗಳಿಗೆ ಬಲಿಯಾಗಿ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಡಾಬಾಗಳಿಗೆ ತೆರಳುವ ಕೆಟ್ಟ ಸಂಸ್ಕೃತಿಯಿಂದ ಯುವಕರು ದೂರವುಳಿದು ತಮ್ಮ ಸುಂದರ ಬದುಕನ್ನು ರೂಪಿಸಿಕೊಂಡು ಸಮಾಜದಲ್ಲಿ ಒಳ್ಳೆ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದು ಯುವಕರಿಗೆ ಕರೆ ನೀಡಿದರು.

Advertisement

ಈ ಸಂದರ್ಭದಲ್ಲಿ ಕೆಲವು ಜನ ತಾವು ಮಾಡುವ ಬೀಡಿ ಸೇದುವುದು, ತಂಬಾಕು ತಿನ್ನುವುದನ್ನು ಇಂದಿನಿಂದಲೇ ತ್ಯಜಿಸಿ ಪೂಜ್ಯರ ಮೇಲೆ ಪ್ರಮಾಣ ಮಾಡಿ ಪೂಜ್ಯರ ಪಾದಗಳಿಗೆ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಬಿ.ಜಿ. ಪಾಟೀಲ, ಅಣ್ಣುಗೌಡ ಪಾಟೀಲ, ಅಜ್ಜಪ್ಪ ನಡಕಟ್ಟಿ, ಮಲ್ಲಪ್ಪ ಪಟ್ಟಣಶೆಟ್ಟಿ, ದುಂಡಪ್ಪ ಐಗಳಿ, ಈರನಗೌಡ ಪಾಟೀಲ, ರಾಮನಗೌಡ ಬಿರಾದಾರ, ಶಿಕ್ಷಕರಾದ ಕೆ.ಎಸ್‌. ಬಾಗೇವಾಡಿ, ಧ್ಯೇಯನಗೌಡ ಬಿರಾದಾರ, ಡಾ | ಸಿದ್ದು ಬಿರಾದಾರ, ಶರಣಗೌಡ ಬಿರಾದಾರ, ಗುರುಪಾದಯ್ಯ ಮಠಪತಿ, ಶ್ರೀಶೈಲ ದಿಗ್ಗಾವಿ, ಶಂಕರ ಹದಿಮೂರು, ಶಶಿಕಲಾ ಪಾಟೀಲ, ರೂಪಾ ಪಾಟೀಲ, ಸವಿತಾ ಹಿಪ್ಪರಗಿ, ಸಂಗಮ್ಮ ಬಿರಾದಾರ, ಅನ್ನಪೂರ್ಣ ಬಿರಾದಾರ, ಚನ್ನಮ್ಮ ಮಠಪತಿ ಸೇರಿದಂತೆ ಅನೇಕರು ಇದ್ದರು.

ಶಿಕ್ಷಕ ಬಸನಗೌಡ ಬಿರಾದಾರ ಸ್ವಾಗತಿಸಿದರು. ಅಶೋಕ ಹೊನವಾಡ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next