ಬಸವನಬಾಗೇವಾಡಿ: ಆದಿ ಬಸವಣ್ಣ ರೈತ ಉತ್ಪಾದಕರ ಸಂಘವು ರೈತರಿಂದ ತರಕಾರಿ ಖರೀದಿಸಿ ಗ್ರಾಹಕರ ಮನೆ ಬಾಗಿಲಿಗೆ ತಲಪಿಸುವ ಕಾರ್ಯಕ್ಕೆ ಬುಧವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಹಶೀಲ್ದಾರ್ ಎಂ.ಎನ್.ಬಳಿಗಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಆದಿ ಬಸವಣ್ಣ ರೈತ ಉತ್ಪಾದಕರ ಸಂಘವು ರೈತರಿಂದ ತರಕಾರಿ, ಹಣ್ಣು ಖರೀದಿಸಿ ಮನೆ ಮನೆಗೆ ತೆರಳಿ ಮಾರಾಟ ಮಾಡುವುದರಿಂದ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ. ತರಕಾರಿ ಮಾರಾಟ ಮಾಡುವಾಗ ಮಾಸ್ಕ್ ಧರಿಸಬೇಕು. ಕೈಗೆ ಕೈಗವಸು ಹಾಕಿಕೊಳ್ಳಬೇಕಕು. ಗ್ರಾಹಕರೊಂದಿಗೆ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿವೈಎಸ್ಪಿ ಶಾಂತವೀರ ಈ. ಮಾತನಾಡಿ, ಆದಿ ಬಸವಣ್ಣ ರೈತ ಉತ್ಪಾದಕರ ಸಂಘದ ಯೋಜನೆ ಉತ್ತಮವಾಗಿದೆ. ಸಂಘವು ರೈತರಿಗೆ ಯೋಗ್ಯ ಬೆಲೆಯನ್ನು ನೀಡಿ ತರಕಾರಿ, ಹಣ್ಣು ಖರೀದಿಸಬೇಕು. ಗ್ರಾಹಕರಿಗೆ ಹೊರೆಯಾಗದ ಬೆಲೆಯಲ್ಲಿ ಮಾರಾಟ ಮಾಡಬೇಕು ಎಂದ ಅವರು, ಈ ಸಂಘದಡಿ ಪ್ರತಿ ತಾಲ್ಲೂಕಿನಲ್ಲಿ 20 ಕಾರ್ಯಕರ್ತರು, ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಕಾರ್ಯಕರ್ತರು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಸಂಘದ ಅಧ್ಯಕ್ಷ ಎಸ್.ಟಿ.ಪಾಟೀಲ ಮಾತನಾಡಿದರು. ವಿಜಯಪುರ ಕೃಷಿ ವಿವಿ ಸಹ ವಿಸ್ತರಣಾ ನಿರ್ದೇಶಕ ಆರ್.ಬಿ.ಬೆಳ್ಳಿ, ಸಂಘದ ಕಾರ್ಯದರ್ಶಿ ಕೆ.ಎಸ್.ದಶವಂತ, ತಾಲೂಕು ಅಧ್ಯಕ್ಷ
ಯಮನಪ್ಪ ಉಳ್ಳಾಗಡ್ಡಿ, ಪಿಎಸ್‌ಐ ಚಂದ್ರಶೇಖರ ಹೆರಕಲ್, ಗ್ರೇಡ್-2 ತಹಶೀಲ್ದಾರ್ ಪಿ.ಜೆ.ಪವಾರ ಇತರರು ಇದ್ದರು.