Advertisement

Karnataka: ಬಸವ, ಮಹಾವೀರ, ಚೌಡಯ್ಯ ಹಾಗೂ ಪಂಪ ಪ್ರಶಸ್ತಿ ಪ್ರಕಟ

09:35 PM Jan 25, 2024 | Team Udayavani |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಸವ ರಾಷ್ಟ್ರೀಯ ಪುರಸ್ಕಾರ, ಶ್ರೀ ಭಗವಾನ್‌ ಮಹಾವೀರ ಶಾಂತಿ ಪ್ರಶಸ್ತಿ , ಟಿ.ಚೌಡಯ್ಯ ಪ್ರಶಸ್ತಿ ಹಾಗೂ ಗಾನ ಯೋಗಿ ಪಂಡಿತ್‌ ಪಂಚಾಕ್ಷರಿ ಗವಾಯಿ ಪ್ರಶಸ್ತಿ ಸಹಿತ ಒಟ್ಟು 31 ಪ್ರಶಸ್ತಿಗಳನ್ನು ಘೋಷಿಸಿದೆ. ವಿವಿಧ ಕ್ಷೇತ್ರಗಳ 75 ಸಾಧಕರಿಗೆ ಜ.31ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Advertisement

ಇದರಲ್ಲಿ 2018-19ರಿಂದ 2022-23ನೇ ಸಾಲಿನಲ್ಲಿ ಸಾಧಕರನ್ನು ಘೋಷಿಸಿದ್ದರೂ ವಿವಿಧ ಕಾರಣಗಳಿಂದಾಗಿ ಪ್ರದಾನ ಮಾಡಲಾಗದ ಪ್ರಶಸ್ತಿಗಳೂ ಸೇರಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

2023ನೇ ಸಾಲಿನ ಬಸವರಾಷ್ಟ್ರೀಯ ಪುರಸ್ಕಾರಕ್ಕೆ ಆನಂದ್‌ ತೆಲ್ತುಂಬಡೆ (ಮಹಾರಾಷ್ಟ್ರ), ಡಾ| ಎನ್‌.ಜಿ.ಮಹದೇವಪ್ಪ (ಧಾರವಾಡ) ಆಯ್ಕೆ ಆಗಿದ್ದಾರೆ. 2023ನೇ ಸಾಲಿನ ಶ್ರೀ ಭಗವಾನ್‌ ಮಹಾವೀರ ಶಾಂತಿ ಪ್ರಶಸ್ತಿಗೆ ಜಿನದತ್ತ ದೇಸಾಯಿ (ಧಾರವಾಡ), 2023-24ನೇ ಸಾಲಿನ ಗಾಂಧಿ ಸೇವಾಶ್ರಮ (ಗುಜರಾತ್‌) ಆಯ್ಕೆ ಮಾಡಲಾಗಿದೆ. 2022-23ನೇ ಸಾಲಿನ ಟಿ.ಚೌಡಯ್ಯ ಪ್ರಶಸ್ತಿಗೆ ಕೊಳಲು ವಾದಕ ನಿತ್ಯಾನಂದ ಹಳದೀಪುರ (ಮುಂಬಯಿ), 2023-24ನೇ ಸಾಲಿನ ಪ್ರಶಸ್ತಿಗೆ ಕೋಲಾರದ ನಾದಸ್ವರ ಕಲಾವಿದ ಶ್ರೀರಾಮು ಅವರನ್ನು ಆಯ್ಕೆ ಮಾಡಲಾಗಿದೆ.

2022-23ನೇ ಸಾಲಿನ ಗಾನಯೋಗಿ ಪಂ| ಪಂಚಾಕ್ಷರಿ ಗವಾಯಿ ಪ್ರಶಸ್ತಿಗೆ ಧಾರವಾಡ ಮೂಲದ ಹಿಂದೂಸ್ಥಾನಿ ಗಾಯಕ ಪಂ| ಸೋಮನಾಥ್‌ ಮರಡೂರು, 2023-24ನೇ ಸಾಲಿನ ಪ್ರಶಸ್ತಿಗೆ ಮೈಸೂರಿನ ಕರ್ನಾಟಕ ಸಂಗೀತ ಕಲಾವಿದ ಡಾ| ನಾಗಮಣಿ ಶ್ರೀನಾಥ್‌ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 10 ಲಕ್ಷ ರೂ. ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಸಚಿವರು ತಿಳಿಸಿದರು.

ಪ್ರಶಸ್ತಿಗಳ ವಿವರ ( ಪ್ರಶಸ್ತಿ ಮೊತ್ತ ತಲಾ 5 ಲಕ್ಷ ರೂ. ನಗದು, ಫ‌ಲಕ)
ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಭಾಗ
ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪುರಸ್ಕೃತರು: 2020-21ನೇ ಸಾಲಿಗೆ ಕೆ.ಮರುಳಸಿದ್ದಪ್ಪ (ಬೆಂಗಳೂರು), 2021-22ನೇ ಸಾಲಿಗೆ ಹಸನ್‌ ನಯೀಂ ಸುರಕೋಡ (ಬೆಳಗಾವಿ), 2022-23ನೇ ಸಾಲಿಗೆ ಕೆ. ರಾಮಯ್ಯ (ಕೋಲಾರ), 2023-24 ನೇ ಸಾಲಿಗೆ ವೀರಸಂಗಯ್ಯ (ಬಳ್ಳಾರಿ).

Advertisement

ಅಕ್ಕಮಹಾದೇವಿ: 2020-21ನೇ ಸಾಲಿಗೆ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್‌ (ಧಾರವಾಡ), 2021-22ನೇ ಸಾಲಿಗೆ ಡಾ| ಆರ್‌.ಸುನಂದಮ್ಮ (ಮಂಡ್ಯ), 2022-23ನೇ ಸಾಲಿಗೆ ಮೀನಾಕ್ಷಿ ಬಾಳಿ (ಕಲಬುರಗಿ ), ಡಾ| ವಸುಂಧರಾ ಭೂಪತಿ (ಬೆಂಗಳೂರು).

ಕನಕಶ್ರೀ ಪ್ರಶಸ್ತಿ : 2021-22ನೇ ಸಾಲಿಗೆ ಡಾ| ಲಿಂಗದಹಳ್ಳಿ ಹಾಲಪ್ಪ (ಹಾವೇರಿ), ಡಾ| ಬಿ. ಶಿವರಾಮ ಶೆಟ್ಟಿ (ಮಂಗಳೂರು).

ಸಾಹಿತ್ಯ/ನಾಟಕ ಪ್ರಶಸ್ತಿ ವಿಭಾಗ; ಪಂಪ ಪ್ರಶಸ್ತಿ: 2023-24ನೇ ಸಾಲಿಗೆ ಹಿರಿಯ ಸಾಹಿತಿ ನಾ.ಡಿ’ ಸೋಜ (ಶಿವಮೊಗ್ಗ).

ಪ್ರೊ| ಕೆ.ಜಿ.ಕುಂದಣಗಾರ ಗಡಿಗಾಡ ಸಾಹಿತ್ಯ ಪ್ರಶಸ್ತಿ: 2022-23ನೇ ಸಾಲಿಗೆ ಡಾ| ಕೆ.ವಿಶ್ವನಾಥ ಕಾರ್ನಾಡ್‌ (ಮಹಾರಾಷ್ಟ್ರ), 2023-24ನೇ ಸಾಲಿಗೆ ಚಂದ್ರಕಾಂತ ಪೋಕಳೆ (ಬೆಳಗಾವಿ).

ದಾನಚಿಂತಾವಣಿ ಅತ್ತಿಮಬ್ಬೆ ಪ್ರಶಸ್ತಿ: 2022 -23ನೇ ಸಾಲಿಗೆ ಭಾನು ಮುಷ್ತಾಕ್‌ (ಹಾಸನ), 2023-24ನೇ ಸಾಲಿಗೆ ಎಚ್‌.ಎಸ್‌.ಮುಕ್ತಾಯಕ್ಕ (ರಾಯಚೂರು). ಬಿ.ವಿ.ಕಾರಂತ ಪ್ರಶಸ್ತಿ : 2022-23ನೇ ಸಾಲಿಗೆ ಸಿ.ಬಸವಲಿಂಗಯ್ಯ (ಬೆಂಗಳೂರು), 2023-24ನೇ ಸಾಲಿಗೆ ಸದಾನಂದ ಸುವರ್ಣ (ಮಂಗಳೂರು), ಡಾ| ಗುಬ್ಬಿ ವೀರಣ್ಣ ಪ್ರಶಸ್ತಿ: 2022-23ನೇ ಸಾಲಿಗೆ ಚನ್ನಬಸವಯ್ಯ ಗುಬ್ಬಿ (ತುಮಕೂರು), 2023 -24ನೇ ಸಾಲಿಗೆ ಎಲ್‌.ಬಿ.ಶೇಖ ಮಾಸ್ತರ (ವಿಜಯಪುರ).

ಡಾ| ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ: 2021 -22ನೇ ಸಾಲಿಗೆ ಡೊ.ಮೊಗಳ್ಳಿ ಗಣೇಶ್‌ (ಹಂಪಿ), ಉತ್ತಮ ಕಾಂಬ್ಳೆ ( ಮರಾಠಿ ಲೇಖಕ), ಬಿ.ಟಿ.ಜಾಹ್ನವಿ (ದಾವಣಗೆರೆ).

ಕಲಾ ಪ್ರಶಸ್ತಿ ವಿಭಾಗ
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: 2022-23ನೇ ಸಾಲಿಗೆ ಜಿ.ಎಲ್‌.ಎನ್‌. ಸಿಂಹ (ಮೈಸೂರು), 2023-24ನೇ ಸಾಲಿಗೆ ಬಸವರಾಜ್‌ ಎಲ್‌.ಜಾನೆ (ಕಲಬುರಗಿ).ಜಾನಪದ ಶ್ರೀ ಪ್ರಶಸ್ತಿ-ವಾದನ: 2022-23ನೇ ಸಾಲಿಗೆ ಅರುವ ಕೊರಗಪ್ಪ ಶೆಟ್ಟಿ (ದಕ್ಷಿಣ ಕನ್ನಡ), 2023-24ನೇ ಸಾಲಿಗೆ ಜಿ.ಪಿ.ಜಗದೀಶ್‌ ( ಚಿಕ್ಕಮಗಳೂರು). ಜಾನಪದ ಶ್ರೀ ಪ್ರಶಸ್ತಿ-ಗಾಯನ: 2022-23ನೇ ಸಾಲಿಗೆ ಕಲ್ಲಪ್ಪ ವಿರ್ಜಾಪುರ (ಬೀದರ್‌), 2023-24ನೇ ಸಾಲಿಗೆ ಹಲಗೆ ದುರ್ಗಮ್ಮ (ಚಿತ್ರದುರ್ಗ).

ಸಂಗೀತ,ನೃತ್ಯ ಪ್ರಶಸ್ತಿ ವಿಭಾಗ
ಶ್ರೀ ನಿಜಗುಣ-ಪುರಂದರ ಪ್ರಶಸ್ತಿ: 2022-23ನೇ ಸಾಲಿಗೆ ಎಂ.ಕೆ.ಸರಸ್ವತಿ (ಮೈಸೂರು), 2023-24ನೇ ಸಾಲಿಗೆ ಅಕ್ಕಮಹಾದೇವಿ ಮಠ (ಧಾರವಾಡ). ಕುಮಾರವ್ಯಾಸ ಪ್ರಶಸ್ತಿ: 2022-23ನೇ ಸಾಲಿಗೆ ಸಿದ್ದೇಶ್ವರ ಶಾಸ್ತ್ರೀ (ಗದಗ), 2023-24ನೇ ಸಾಲಿಗೆ ಕೃಷ್ಣಗಿರಿ ರಾಮಚಂದ್ರ (ಮೈಸೂರು). ಶಾಂತಲಾನಾಟ್ಯ ಪ್ರಶಸ್ತಿ: 2022-23ನೇ ಸಾಲಿಗೆ ಚಿತ್ರ ವೇಣುಗೋಪಾಲ್‌ (ಬೆಂಗಳೂರು), 2023-24ನೇ ಸಾಲಿಗೆ ರೇವತಿ ನರಸಿಂಹನ್‌ ( ಬೆಂಗಳೂರು). ಸಂತ ಶಿಶುನಾಳ ಷರೀಫ‌ ಪ್ರಶಸ್ತಿ: 2022-23ನೇ ಸಾಲಿಗೆ ಕಸ್ತೂರಿ ಶಂಕರ್‌ (ಬೆಂಗಳೂರು), 2023-24ನೇ ಸಾಲಿಗೆ ಎನ್‌.ಬಿ.ಶಿವಲಿಂಗಪ್ಪ (ಶಿವಮೊಗ್ಗ).

ಈಗಾಗಲೇ ಘೋಷಿಸಲಾಗಿದ್ದರೂ ಪ್ರಶಸ್ತಿ ಪ್ರದಾನ ಆಗದಿರುವ ಹಿಂದಿನ ಸಾಲಿನ ಪ್ರಶಸ್ತಿ ಪುರಸ್ಕೃತರು
ಬಸವ ರಾಷ್ಟ್ರೀಯ ಪುರಸ್ಕಾರ: 2020 -21ನೇ ಸಾಲಿಗೆ ಭಿಕು ರಾಮ್‌ ಜಿ ಇದಾತೆ ರತ್ನಾಗಿರಿ (ಮಹಾರಾಷ್ಟ್ರ), 2021 -22ನೇ ಸಾಲಿಗೆ ಡಾ| ವೀರಣ್ಣ ರಾಜೂರು. ಶ್ರೀ ಭಗವಾನ್‌ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ: 2020 -21ನೇ ಸಾಲಿಗೆ ಜಪಾನಂದ ಸ್ವಾಮಿ, 2021 -22 ನೇ ಸಾಲಿಗೆ ಸದಾನಂದ ಮಾಸ್ಟರ್‌.

ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ: 2020 -21ನೇ ಸಾಲಿಗೆ ಎಂ.ವಾಸುದೇವ ಮೋಹಿತೆ, 2021 -22 ನೇ ಸಾಲಿಗೆ ಹರಿಪ್ರಸಾದ್‌ ಚೌರಾಸಿಯಾ. ಪಂಪ ಪ್ರಶಸ್ತಿ: 2020 -21ನೇ ಸಾಲಿಗೆ ಪ್ರೊ| ಸಿ.ಪಿ.ಕೃಷ್ಣ ಕುಮಾರ್‌, 2022-23ನೇ ಸಾಲಿಗೆ ಡಾ| ಎಸ್‌.ಆರ್‌.ರಾಮಸ್ವಾಮಿ.

ಪ್ರೊ| ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: 2020 -21ನೇ ಸಾಲಿಗೆ ಡಾ| ರಮಾನಂದ ಬನಾರಿ, 2021-22 ಎಂ.ಎನ್‌.ವೆಂಕಟೇಶ (ಕುಪ್ಪಂ) . ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: 2020 -21ನೇ ಸಾಲಿಗೆ ಕೌಸಲ್ಯಾ ಧರಣೀಂದ್ರ, 2021-22ನೇ ಸಾಲಿಗೆ ಮಾಲತಿ ಪಟ್ಟಣಶೆಟ್ಟಿ

ಬಿ.ವಿ.ಕಾರಂತ ಪ್ರಶಸ್ತಿ: 2018-19ನೇ ಸಾಲಿಗೆ ಎಸ್‌.ಮಾಲತಿ (ಶಿವಮೊಗ್ಗ), 2020-21 ನೇ ಸಾಲಿಗೆ ಡಾ| ಬಿ.ವಿ.ರಾಜಾರಾಂ, 2021-22 ಅಬ್ದುಲ್ಲ ಪಿಂಜಾರ. ಡಾ| ಗುಬ್ಬಿವೀರಣ್ಣ ಪ್ರಶಸ್ತಿ : 2020 -21 ಸಾಲಿಗೆ ಕುಮಾರಸ್ವಾಮಿ (ಚಿತ್ರದುರ್ಗ), 2021-22ನೇ ಸಾಲಿಗೆ ಬಾಬಣ್ಣ ಕಲ್ಮನಿ.

Advertisement

Udayavani is now on Telegram. Click here to join our channel and stay updated with the latest news.

Next