Advertisement

ಬಸವಕಲ್ಯಾಣ ಉಪ ಚುನಾವಣೆ : ಮತ ಚಲಾಯಿಸಿದ ಬಿಜೆಪಿ ಬಂಡಾಯ ಅಭ್ಯರ್ಥಿ‌ ಮಲ್ಲಿಕಾರ್ಜುನ ಖೂಬಾ

11:39 AM Apr 17, 2021 | Team Udayavani |

ಬೀದರ್ : ಬಸವಕಲ್ಯಾಣ ಉಪ ಚುನಾವಣೆಯ ಮತದಾನ ನಿಧಾನವಾಗಿ ಕಾವೇರುತ್ತಿದ್ದು, ಮತದಾರರು ತಮ್ಮ ತಮ್ಮ ಬೂತ್ ಗೆ ಬಂದು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ.

Advertisement

ಬಿಜೆಪಿ ಬಂಡಾಯ ಅಭ್ಯರ್ಥಿ‌ ಮಲ್ಲಿಕಾರ್ಜುನ ಖೂಬಾ ಅವರುತ್ರಿಪುರಾಂತದ ಪ್ರಾಥಮಿಕ ಶಾಲೆ ಬೂತ್ ನಂ. 118 ರಲ್ಲಿ ಮತ ಚಲಾಯಿಸಿದರು.

ಇದನ್ನೂ ಓದಿ : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಕೋವಿಡ್-19 ಸೋಂಕು ದೃಢ

ಮುಂಜಾನೆಯಿಂದ ಮಂದಗತಿಯಲ್ಲಿ ಸಾಗಿದ ಮತದಾನ ಮಧ್ಯಾಹ್ನದ ಹೊತ್ತಿನಲ್ಲಿ ನಿಧಾನವಾಗಿ ಚುರುಕುಗತಿಯಲ್ಲಿ ಸಾಗುತ್ತಿದೆ. ಮುಂಜಾನೆ ಶೇ. 7.46 ರಷ್ಟುಮತದಾನ ದಾಖಲಾಗಿತ್ತು. ಸದ್ಯ ಮತದಾರರು ಉತ್ಸಾಹದಿಂದ ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತವನ್ನು ಹಾಕುತ್ತಿದ್ದಾರೆ.

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಚಳಂಬದ ಮತಗಟ್ಟೆಯಲ್ಲಿ ವೀಲ್ ಚೇರ್ ಮೇಲೆ ಬಂದು ಮತದಾನ ಮಾಡಿ ವಯೋವೃದ್ಧೆಯೊಬ್ಬರು ಗಮನ ಸೆಳೆದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next