Advertisement

ಕೋವಿಡ್‌ ನಿಯಮಾನುಸಾರ ಬಸವ ಜಯಂತಿ ಆಚರಣೆ

10:29 AM Apr 28, 2022 | Team Udayavani |

ಹುಬ್ಬಳ್ಳಿ: ಕೋವಿಡ್‌ ಮಾರ್ಗಸೂಚಿಗಳ ಜಾರಿ ಕುರಿತು ಪ್ರಧಾನ ‌ಮಂತ್ರಿಗಳೊಂದಿಗೆ ಮುಖ್ಯಮಂತ್ರಿಗಳ ಸಭೆ ನಂತರ ರಾಜ್ಯ ಸರಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಿದ್ದು, ಪರಿಷ್ಕೃತ ಕೋವಿಡ್‌ ನಿಯಮಗಳ ಅನುಸಾರ ಮೇ 3ರಂದು ಬಸವ ಜಯಂತಿ ಆಚರಿಸಲಾಗುವುದು ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರ ಶಶಿಧರ ಮಾಡ್ಯಾಳ ಹೇಳಿದರು.

Advertisement

ಇಲ್ಲಿನ ಮಿನಿ ವಿಧಾನಸೌಧದ ತಹಶೀಲ್ದಾರ್‌ ಸಭಾಭವನದಲ್ಲಿ ಬುಧವಾರ ಬಸವ ಜಯಂತಿ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು ಹಲವು ಬಡಾವಣೆಗಳಲ್ಲಿ ಬಸವ ಜಯಂತಿ ಆಚರಣೆ ಮಾಡಲಿವೆ.

ಮೇ 3ರಂದು ಬೆಳಗ್ಗೆ 10 ಗಂಟೆಗೆ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ, 11 ಗಂಟೆಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ವಿದ್ಯಾರ್ಥಿಗಳಿಂದ ಬಸವಣ್ಣನವರ ವಚನಗಳ ವಾಚನ, ಗಾಯನ ಏರ್ಪಡಿಸಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ನಿಯಮಾನುಸಾರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಲಹೆ-ಸೂಚನೆ ನೀಡಿದರು. ಸಮಾಜದ ಮುಖಂಡರಾದ ಚನ್ನಬಸಪ್ಪ ಧಾರವಾಡಶೆಟ್ಟರ, ನಂದಕುಮಾರ ಪಾಟೀಲ, ನೀಲಕಂಠಯ್ಯ ತಡಸದಮಠ, ಗುರನಗೌಡ ಪಾಟೀಲ, ಬಸವರಾಜ ಜಾಬಿನ, ನಿರ್ಮಲಾ ಹಿರೇಮಠ, ಬಸವರಾಜ ಯಕಲಾಸಪುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next