Advertisement

ಬಸವಣ್ಣರ ಆದರ್ಶ ಇಂದಿಗೂ ಪ್ರಸ್ತುತ: ಶಾಸಕ

02:07 PM May 04, 2022 | Team Udayavani |

ದೇವನಹಳ್ಳಿ: ಜಾತ್ಯತೀತ ಸಮಾಜ ನಿರ್ಮಾಣದ ಶಿಲ್ಪಿ ಬಸವಣ್ಣನವರ ಆಶಯ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಶಾಸಕ ಎಲ್‌. ಎನ್‌. ನಾರಾಯಣಸ್ವಾಮಿ ತಿಳಿಸಿದರು.

Advertisement

ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಶ್ರೀ ಜಗಜ್ಯೋತಿ ಬಸವಣ್ಣರ ಜಯಂತ್ಯುತ್ಸವದಲ್ಲಿ ಮಾತನಾಡಿ, ಪ್ರಪಂಚದಲ್ಲೇ ಮೊಟ್ಟ ಮೊದಲು ಪ್ರಜಾಸತ್ತಾತ್ಮಕವಾದ ಪಾರ್ಲಿಮೆಂಟ್‌ನ್ನು ಪ್ರತಿಷ್ಠಾಪಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 600 ಕೋಟಿ ರೂ. ವೆಚ್ಚದಲ್ಲಿ ಸರ್ಕಾರ ನಿರ್ಮಾಣ ಮಾಡುತ್ತಿದ್ದು, ವಿಧಾನಮಂಡ ಲದ ಅಧಿವೇಶನದಲ್ಲಿ ಅದಕ್ಕೆ ಬೆಂಬಲ ನೀಡಲಾಯಿತು. ಬಸವಣ್ಣನವರ ಪುತ್ಥಳಿಯನ್ನು ಜಿಲ್ಲಾಡಳಿತದ ಮುಂಭಾಗದಲ್ಲಿ ನಿರ್ಮಾಣವಾಗುತ್ತಿದೆ ಎಂದರು.

ಬಸವಣ್ಣನವರ ವಚನ ಇಂದಿನ ಸಮುದಾಯಕ್ಕೆ ದಾರಿದೀಪವಾಗಿದೆ. ಈಗಿನ ದೆಹಲಿಯಲ್ಲಿರುವ ಸಂಸತ್‌ ಭವನ ಅನುಭವ ಮಂಟಪದ ಮಾದರಿ ಆಗಿದೆ. ಬುದ್ಧ, ಬಸವ, ಅಂಬೇಡ್ಕರ್‌, ಜಾತಿ ವ್ಯವ ಸ್ಥೆಯ ವಿರುದ್ಧವಾಗಿ ಹೋರಾಡಿ ಶ್ರಮಿಸಿದ್ದರು ಎಂದರು.

ಶಿಕ್ಷಕ ರುದ್ರೇಶ್‌ ಮೂರ್ತಿ ಮಾತನಾಡಿ, ಕಾಯಕದ ಮಹತ್ವವನ್ನು ಬಸವಣ್ಣ ತಿಳಿಸಿದ್ದರು. ಭ್ರಷ್ಟಾಚಾರ ಹೋಗಲಾಡಿಸಬೇಕಾದರೆ ಮನೆಯಿಂದಲೇ ತಮ್ಮ ಮಕ್ಕಳಿಗೆ ವಚನದ ಸಾರಾಂಶವನ್ನು ತಿಳಿಸಿ ಕೊಡ ಬೇಕು. ಜಾತಿ ವ್ಯವಸ್ಥೆಯನ್ನು ಬುಡಸಮೇತ ಕಿತ್ತು ಹಾಕಲು ಶ್ರಮಿಸಿದ್ದರು ಎಂದರು.

ಬಸವಣ್ಣ ಮಾನವತಾವಾದಿ: ತಹಶೀಲ್ದಾರ್‌ ಶಿವ ರಾಜ್‌ ಮಾತನಾಡಿ, ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಿದ್ಧಾಂತದ ಅಡಿ ನಂಬಿಕೆಯಿಟ್ಟು ದುಡಿಮೆಯೇ ದೇವರೆಂದು ಜಗತ್ತಿಗೆ ಅಮೂಲ್ಯ ಸಂದೇಶ ನೀಡಿದ್ದರು. ದುಡಿಯುವ ವರ್ಗಕ್ಕೆ ಗೌರವ ತಂದು ಕೊಟ್ಟ ಮಾನವತಾವಾದಿ ಎಂದರು.

Advertisement

ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ವಿರೂ ಪಾಕ್ಷಯ್ಯ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎಂ ಎಸ್‌ ರಮೇಶ್‌, ಉಪಾಧ್ಯಕ್ಷ ನಾಗಭೂಷಣ್‌, ನಗರ್ತ ಸಮಿತಿ ಅಧ್ಯಕ್ಷ ಬಿ.ವಿ.ನಾಗರಾಜ್‌, ಪುರಸಭಾ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾಶ್ರೀಧರ್‌ ಮೂರ್ತಿ, ಪುರಸಭೆ ಸದಸ್ಯ ಎಸ್‌. ನಾಗೇಶ್‌, ವೈ.ಆರ್‌. ರುದ್ರೇಶ್‌, ಲೀಲಾವತಿ, ಮಂಜುಳಾಗುರುಸ್ವಾಮಿ, ನಾಗೇಶ್‌, ಮಾಜಿ ಪುರಸಭಾ ಅಧ್ಯಕ್ಷ ಎಂ.ಮೂರ್ತಿ, ಬಿ. ಕೆ.ಶಿವಪ್ಪ, ಶಿಕ್ಷಕಿ ಗೀತಾಬಸವರಾಜ್‌, ಶಶಿಕಲಾ ಕಾಂತರಾಜ್‌, ಜಿ. ಅನಿಲ್‌, ಮುಖಂಡ ಕೋಡಿಮಂಚೇನ ಹಳ್ಳಿ ವೀರಭದ್ರಪ್ಪ, ವಿಶ್ವನಾಥ, ಬಸವರಾಜು, ವಿಜಯಪುರದ ಬಸವರಾಜು, ವಿಮಲಾ, ಬಸವ ರಾಜು, ಓಬದೇನಹಳ್ಳಿ ಮುನಿಯಪ್ಪ, ಗಿರೀಶ್‌, ಶಿವಪ್ರಸಾದ್‌, ಪ್ರಭಾಕರ್‌, ಟಿ.ರವಿ, ಚಿಕ್ಕ ನಾರಾ ಯಣಸ್ವಾಮಿ, ಶಿರಸ್ತೆದಾರ್‌ ಭರತ್‌, ರಾಜಸ್ವ ನಿರೀಕ್ಷಕ ಮಹೇಶ್‌, ಉಪೇಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next