Advertisement

ಬಸವ ವಸತಿ ಮನೆ ನಿರ್ಮಾಣಕ್ಕೆಒತ್ತಾಯಿಸಿ ಉಪವಾಸ ಸತ್ಯಾಗ್ರಹ

10:29 AM Aug 03, 2018 | |

ಆಳಂದ: ಪಡಸಾವಳಿ ಗ್ರಾಮದಲ್ಲಿನ ಹೆಚ್ಚುವರಿ ಬಸವ ವಸತಿ ಯೋಜನೆಯ ಮನೆಗಳನ್ನು ನಿರ್ಮಿಸಬೇಕು
ಎಂದು ಆಗ್ರಹಿಸಿ ಗುರುವಾರ ಗ್ರಾಪಂ ಅಧ್ಯಕ್ಷೆ ಭೌರಮ್ಮ ಎಂ. ದುಲಂಗೆ ನೇತೃತ್ವದಲ್ಲಿ ಸದಸ್ಯರು ಮತ್ತು ಫಲಾನುಭವಿಗಳು ಸೇರಿದಂತೆ ಪಟ್ಟಣದ ತಾಪಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಂಡು ಪ್ರತಿಭಟನೆ
ನಡೆಸಿದರು.

Advertisement

ಗ್ರಾಪಂ ಕೇಂದ್ರಸ್ಥಾನ ಪಡಸಾವಳಿ ಗ್ರಾಮದ 2016-17ನೇ ಸಾಲಿನ ಹೆಚ್ಚುವರಿ ಬಸವ ವಸತಿ ಯೋಜನೆ ಮನೆಗಳನ್ನು ಗ್ರಾಮಸಭೆ ಮೂಲಕ ಆಯ್ಕೆ ಮಾಡಿ, ಅದರ ವಿಡಿಯೋವನ್ನು ಸಾಕ್ಷಿಯಾಗಿದ್ದರೂ ಸಹಿತ ಮನೆ ನಿರ್ಮಿಸಿಕೊಡದೆ ಸಂಬಂಧವಿಲ್ಲದವರ ಮಾತಿಗೆ ಉದ್ದೇಶಪೂರ್ವಕ ತಡೆಹಿಡಿಯಲಾಗಿದೆ. ನಕಲಿ ಸಹಿ ಬಳಸಿ ಮನೆಗಳ ಹಂಚಿಕೆ ತಡೆ ಹಿಡಿಯಲು ದೂರು ನೀಡಿದವರ ವಿರುದ್ಧ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಡ ಮತ್ತು ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಕೂಡಲೇ ನಿರ್ಮಿಸಿಕೊಡಬೇಕು. ಈ ಪ್ರಕ್ರಿಯೆ ವಾರದಲ್ಲಿ ಪ್ರಾರಂಭಿಸದೇ ಇದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ ಕುಂದಾಪುರ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿ ಅನಿತಾ, ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ತಾಪಂ ವ್ಯವಸ್ಥಾಪಕ ಬಸವರಾಜ ಪಾಟೀಲ, ಉದ್ಯೋಗ ಖಾತ್ರಿ ಯೋಜನಾಧಿಕಾರಿ ಮೊಹ್ಮದ್‌ ಸಲೀಂ ಇದ್ದರು.
ಗ್ರಾಪಂ ಸದಸ್ಯರಾದ ಶಿವಕಿರಣ ಎಸ್‌. ಪಾಟೀಲ, ಸಂಜುಕುಮಾರ ಶೇರಿಕಾರ, ವಿಶ್ವನಾಥ ಜಮಾದಾರ, ಸುವರ್ಣ ಕಾಸರ, ಸಂಗೀತಾ ಎಸ್‌. ಜಮಾದಾರ, ಮುಖಂಡ ಮಲ್ಲಿನಾಥ ದುಲಂಗೆ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next