ಬೆಂಗಳೂರು: ಸಿಡಿ ಮಾಡೋದು, ಇಷ್ಟು ಹಣ ಕೊಡಿ ಎಂದು ಬ್ಲಾಕ್‌ಮೇಲ್ ಮಾಡೋದು ಒಳ್ಳೆಯ ಬೆಳವಣಿಗೆಯಲ್ಲ. ಇನ್ನೂ 23 ಜನರ ಸಿಡಿ ಇದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನನಗೆ ಸಿಡಿ ಮಾಡಿ ಗೊತ್ತಿಲ್ಲ ಸಿಡಿ ನೋಡೂ ಇಲ್ಲ. ಆದರೆ, ಇದೆಲ್ಲಾ ದುರದೃಷ್ಟಕರ ಎಂದು ತಿಳಿಸಿದರು.
ಸಿಡಿ ಯಾರು ಮಾಡಿದ್ದು ಎಂಬುದು ತನಿಖೆ ನಂತರವಷ್ಟೇ ತಿಳಿಯಬೇಕು. ಕಾಂಗ್ರೆಸ್‌ನವರೂ ಇರಬಹುದು, ಬಿಜೆಪಿಯವರೂ ಇರಬಹುದು. ಏಕೆಂದರೆ ಈಗ ರಾಜ್ಯದಲ್ಲಿರುವುದು ಒಂದು ರೀತಿಯಲ್ಲಿ ಬಿಜೆಪಿ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ :ಭೂಗತ ಪಾತಕಿ ರವಿ ಪೂಜಾರಿ ಬೇಡಿಕೆಗೆ ಅಚ್ಚರಿಗೊಂಡ ಕೋರ್ಟ್! ಪೂಜಾರಿ ಕೇಳಿಕೊಂಡಿದ್ದೇನು..?
ಮತ್ತೂಂದಡೆ ಸಚಿವ ಎಂ.ಟಿ.ಬಿ.ನಾಗರಾಜ್ ಮಾತನಾಡಿ, ನನಗೆ ಸಿಡಿ ಬಗ್ಗೆ ಗೊತ್ತಿಲ, ನನಗೆ ಯಾವುದೇ ಆತಂಕವೂ ಇಲ್ಲ. ನಾನು ಕೋರ್ಟ್‌ಗೆ ಮೊರೆ ಹೋಗಲ್ಲ, ಯಾವ ಕೋಡ್ ವರ್ಡ್ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಎಸ್.ಟಿ.ಸೋಮಶೇಖರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಮಾತನಾಡಲ್ಲ.ನನಗೆ ಗೊತ್ತಿರುವಂತೆ ಕಾಂಗ್ರೆಸ್‌ನಲ್ಲಿ ಹಾಗೇನೂ ಇಲ್ಲ. ಸೋಮಶೇಖರ್ ಎಷ್ಟರ ಮಟ್ಟಿಗೆ ಮಾಹಿತಿ ಕಲೆಹಾಕಿದ್ದಾರೋ ಗೊತ್ತಿಲ್ಲ ಎಂದರು.