Advertisement
ದೆಹಲಿ ಭೇಟಿಯ ನಂತರ ಮತ್ತೆ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡು ಪತ್ರ ಚಳವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವು ಸಚಿವರು ದುಡ್ಡು ಕೊಟ್ಟು ಮಠ ಖರೀದಿಗೆ ಹೊರಟಿದ್ದಾರೆ. ಈಗ ಒಂದು ಮಠವನ್ನೇ ಖರೀದಿ ಮಾಡಿದ್ದಾನೆ. ಅದಕ್ಕೆ ಅದು ಅವರ ಗುಣಗಾನ ಮಾಡಿಕೊಂಡು ಹೊರಟಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ಯತ್ನಾಳ್ ಲೇವಡಿ ಮಾಡಿದರು.
Related Articles
ಇದೇ ವೇಳೆ, ಮಂಗಳವಾರ ನೋಡಿ, ಟಿಆರ್‌ಪಿ ಸುದ್ದಿ ಕೊಡುತ್ತೇನೆ. ಮೂರು ದಿನ ಮಾಧ್ಯಮಗಳು ಅದನ್ನೇ ಬೆನ್ನು ಹತ್ತುವಂತಹ ಸುದ್ದಿ ಕೊಡುತ್ತೇನೆ. ನಾನು ಕೇಂದ್ರ ಮಂತ್ರಿ ಆಗಿದ್ದಾಗ ಯಾರ್ಯಾರು ಕಾಲು ಹಿಡಿದಿದ್ದರು. ಏನೇನು ಮಾಡಿದ್ದರು ಎಂದು ಎಲ್ಲವನ್ನೂ ಹೇಳುತ್ತೇನೆ ಎಂದರು. ನನ್ನ ರಾಜಕೀಯ ಜೀವನ ಮುಗಿಸಲು ಯಾರಿಂದಲೂ ಆಗುವುದಿಲ್ಲ. ಈ ಯತ್ನಾಳ್ ಗೌಡ ಹೆದರುವ ಮಗನಲ್ಲ. ಕಡೆಯವರೆಗೂ ನಾನು ಈ ಹೋರಾಟದಲ್ಲಿ ಇರುತ್ತೇನೆ. ಅದು ಹೇಗೆ ನನ್ನ ರಾಜಕೀಯ ಜೀವನ ಮುಗಿಸ್ತೀರಿ ನೋಡುತ್ತೇನೆ. ನಾವು ಮಾರ್ಚ್ 4 ರವರೆಗೆ ನೋಡುತ್ತೇವೆ. ನಾನು ಸದನದಲ್ಲಿ ಮೀಸಲಾತಿ ವಿಷಯ ಪ್ರಸ್ತಾಪ ಮಾಡುತ್ತೇನೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಬೇಕಾದರೆ ಕ್ಷಮೆಯಾಚಿಸಲಿ. ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಬರುವುದಿಲ್ಲ ಎಂದು ಹೇಳಿಬಿಡಲಿ. ನಾವೇನು ನಿಮ್ಮ ವಿರೋಧಿಗಳಲ್ಲ. ಸುಮ್ಮನೆ ಕೊಡುತ್ತೇವೆ ಅಂತ ಯಾಕೆ ಯಾಮಾರಿಸುತ್ತೀರಿ ಎಂದು ಮುಖ್ಯಮಂತ್ರಿಗಳ ವಿರುದ್ಧ ವಾಗ್ಧಾಳಿ ನಡೆಸಿದರು.
Advertisement
ಯಾರೂ ಬೀಗ ಹಾಕಿಲ್ಲ:ಪಂಚಮಸಾಲಿ ಸಮಾವೇಶದ ನಂತರ ದೆಹಲಿಗೆ ತೆರಳಿದ ನಂತರ ಪಕ್ಷದ ಹೈಕಮಾಂಡ್ ಬಸನಗೌಡ ಪಾಟೀಲ್ ಬಾಯಿಗೆ ಬೀಗ ಹಾಕಿದೆ ಎಂದು ಮಾಧ್ಯಮಗಳಲ್ಲಿ ವರದಿ ಬರುತ್ತಿವೆ. ನಾನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೂ ಭೇಟಿ ಮಾಡಿಲ್ಲ. ಬಿ.ಎಲ್ ಸಂತೋಷ್ ಅವರನ್ನೂ ಭೇಟಿ ಮಾಡಿಲ್ಲ. ಖಾಸಗಿ ಕೆಲಸದ ಮೇಲೆ ದೆಹಲಿಗೆ ತೆರಳಿದ್ದೆ. ನಾನು ಬೇರೆಯವರ ತಲೆ, ಕಾಲು ಹಿಡಿಯುವವನಲ್ಲ. ನನ್ನ ಮೇಲೆ ಮಾಧ್ಯಮಗಳಿಗೆ ಬಹಳ ಪ್ರೀತಿ. ಮುಂಜಾನೆ ನನ್ನನ್ನ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಮಧ್ಯಾಹ್ನ ಅವರ ಮೇಲೆ ಬೇರೆ ಒತ್ತಡ ಬರುತ್ತದೆ. ಆಮೇಲೆ ನನ್ನನ್ನು ಕೆಳಗೆ ಹಾಕುತ್ತಾರೆ. ವಿಜಯೇಂದ್ರನ ಪ್ರಭಾವ ಅವರ ಮೇಲಿದೆ. ಸ್ವಲ್ಪ ಯಾಮಾರಿದ್ರೂ ಯತ್ನಾಳ್‌ಗೆ ಮಣ್ಣು ಹಾಕಿ ಬಿಡುತ್ತಾರೆ. ರಾಜಕಾರಣ ಜೀವನದಲ್ಲಿ ನಾನು ಅನೇಕ ಸ್ಥಾನ ನಿರ್ವಹಿಸಿದ್ದೇನೆ. ಎಲ್ಲೂ ನಾನು ಹಾದಿ ತಪ್ಪಿದವನಲ್ಲ. ಇವತ್ತು ವ್ಯವಸ್ಥೆಯೇ ನಾಚಿಕೆಗೇಡಾಗಿದೆ. ನಾವು 10 ಲಕ್ಷ ಜನ ಸೇರಿದ್ದು, ದೆಹಲಿಯಲ್ಲಿ ಸದ್ದು ಮಾಡಿದೆ. ನಾನು ದೆಹಲಿಗೆ ಹೋಗಿ¨ªಾಗ ಎಲ್ಲರೂ ಅದನ್ನೇ ಕೇಳಿದರು ಎಂದು ಹೇಳಿದರು. ಎರಡು ತಿಂಗಳು ಸಾಕು
ರಾಜ್ಯ ಸರ್ಕಾರದ ಲೂಟಿ ನೋಡಿ ನೋಡಿ ಸಾಕಾಗಿದೆ. ಈ ಸರ್ಕಾರ ಇನ್ನೆಷ್ಟು ದಿನ ಇರಲು ಸಾಧ್ಯ? ಇನ್ನೆರಡುವರೆ ವರ್ಷ ಇರಿ ಆಮೇಲೆ ಗೊತ್ತಾಗುತ್ತದೆ. ಎರಡೂವರೆ ಯಾಕೆ 2 ತಿಂಗಳು ಸಾಕು. ನಿಮ್ಮ ಸರ್ಕಾರ ಇರುತ್ತೋ ಹೋಗುತ್ತೋ ಗೊತ್ತಾಗುತ್ತದೆ ಎಂದು ಭವಿಷ್ಯ ನುಡಿದರು. ಇತ್ತೀಚೆಗೆ ಸಚಿವರಿಬ್ಬರು ಸಮಾವೇಶಕ್ಕೆ ಇಷ್ಟೊಂದು ಜನ ಸೇರಲು ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ. ದುಡ್ಡು ಕೊಟ್ಟವರೇ ಅವರು. ಅಲ್ಲಿ ಕುಳಿತಿದ್ದವರೇ ಬಂದು ದುಡ್ಡು ಕೊಟ್ಟಿದ್ದು ಎಂದು ಹೇಳಿದರು.