ಕಲಬುರಗಿ: ಕಲ್ಯಾಣದ ನೆಲದಲ್ಲಿ ಪಂಚಮಸಾಲಿ ದೀಕ್ಷ ಸಮಾಜದಲ್ಲಿ ಹೊಸ ಕ್ರಾಂತಿ ಶುರುವಾಗಿದೆ ಯಾರೂ ಅಂಜಬ್ಯಾಡ್ರಿ. ನಮ್ಮ ಬೇಡಿಕೆ ಇದೆ 2ಡಿ, 2ಎ ಮೀಸಲಾತಿಕೊಡಿ. ಇಲ್ಲದಿದ್ದರೆ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಶಾಸಕ ಹಾಗೂ ಪಂಚಮಸಾಲಿ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಗುಡುಗಿದರು.
ನಗರದ ಶರಣಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ತೇರು ಮೈದಾನದಲ್ಲಿ ಲಿಂಗಾಯತ ಪಂಚಮಸಾಲಿ ದೀಕ್ಷ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಎಲ್ಲ ಸ್ವಾಮಿಗಳಿಗಿಂತ ಭಿನ್ನವಾಗಿದ್ದಾರೆ. ಚೈನಿಬಹೊಡೆಯೋ ಸ್ವಾಮಿ ಅಲ್ಲ. ಕಲೆದ ದಶಕದಿಂದ ಹೋರಾಟ ಮಾಡಿಕೊಂಡು ಪಂಚಮಸಾಲಿ ದೀಕ್ಷ ಸಮಾಜಕ್ಕೆ 2ಎ,2ಡಿ ಓಬಿಸಿ ಮೀಸಲಾತಿ ಕೊಡಬೇಕುಎ ಎಂದು ಹೋರಾಟ ಮಾಡುತ್ತಿದ್ದಾರೆ.
ಲೋಕಸಭೆಯ ಮುನ್ನ ಮೀಸಲಾತಿ ಘೋಷಣೆ ಮಾಡದೇ ಹೋದರೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ. ಅದಕ್ಕೆ ನಾವು ತಯಾರ್ ಇದೀವಿ. ಬೆಳಗಾವಿ ಅಧಿವೇಶನ ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೈಮು ಕೇಳಿದ್ದರು. ಮೂರು ತಿಂಗಳಾದರೂ ಅದರ ಚಕಾರಬೇ ಇಲ್ಲ. ಆದ್ದರಿಂದ ಸರಕಾರ ಮತ್ತುಕಾಂಗ್ರೆಸ್ ಹೈಕಮಾಂಡ್ವಮತ್ತು ಕಲಬುರಗಿಯವರೇ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗಮನ ಸೆಳೆಯಲೂ ಕಲ್ಯಾಣದ ಹೆಬ್ಬಾಗಿಲು ಕಲಬುರ್ಗಿಯಲ್ಲಿ ಸಮಾವೆಡಶ ಮಾಡಲಾಗಿದೆ ಎಂದರು.
2ಎ ವರ್ಗದಲ್ಲಿರುವ 104 ಜಾತಿಗಳಿವೆ. ಅವರ ಹಕ್ಕು ನಾವು ಬೇಡಲ್ಲ. ಆದರೆ, ಹಿಂದೆ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಸ್ಪೆಷಲ್ ಕ್ಲಾಸ್ ಮಾಡಿ 2ಡಿ ಕೊಡಲು ಘೋಷಣೆ ಮಾಡಿದ್ದರೂ ಅದು ಆದೇಶವಾಗಿಲ್ಲ. ಅದನ್ನು ಮಾಡಲುಮನವಿ ಮಾಡುತ್ತೇವೆ. ಇಲ್ಲದೇ ಹೋದರೆ ನಾವು ಲೋಕಸಭೆಯಲ್ಲಿ ಶಕ್ತಿ ತೋರುತ್ತೇವೆ ಎಂದರು.
ಜಯ ಬಸವ ಮೃತ್ಯುಂಜಯ ಸ್ವಾಮಿಜಿ, ಶಾಸಕರಾದ ಅಲ್ಲಂಪ್ರಭು ಪಾಟೀಲ, ಎಂ.ವೈ.ಪಾಟೀಲ, ಚಂದು ಪಾಟೀಲ. ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್, ಶರಣುಬಪಪ್ಪಾ, ಅರುಣಕುಮಾರ ಪಾಟೀಲ ಹಾಗೂ ಕಲ್ಯಾಣದ ಜಿಲ್ಲೆಗಳ ಸಮಾಜದ ಮುಖಂಡರು ಇದ್ದರು.