Advertisement

Vijayapura: ದುಡುಕಿನ ನಿರ್ಧಾರ ಕೈಗೊಂಡು ಆಪರೇಷನ್ ಹಸ್ತಕ್ಕೆ ಬಲಿಯಾಗದಿರಿ: ಯತ್ನಾಳ್

06:07 PM Sep 01, 2023 | Team Udayavani |

ವಿಜಯಪುರ : ರಾಹುಲ್ ಗಾಂಧಿ, ಸಿದ್ಧರಾಮಯ್ಯ, ಶಿವಕುಮಾರ ಕರೆದಿದ್ದಾರೆ ಎಂದು ಬಿಜೆಪಿ ಪಕ್ಷದ ಯಾವುದೇ ಶಾಸಕರು ದುಡುಕಿನ ನಿರ್ಧಾರ ಕೈಗೊಂಡು ಆಪರೇಷನ್ ಹಸ್ತಕ್ಕೆ ಬಲಿಯಾಗಬೇಡಿ. ಕಾಂಗ್ರೆಸ್ ಸೇರಿದರೆ ಭವಿಷ್ಯದಲ್ಲಿ ನೀವೆಂದೂ ಶಾಸಕರಾಗಲು ಸಾಧ್ಯವಿಲ್ಲ. ಅಲ್ಲದೇ ನ ಘರ್ ಕಾ, ನಾ ಘಾಟ್ ಕಾ ಎಂಬಂತೆ ರಾಜಕೀಯ ಭವಿಷ್ಯವೇ ನಾಶವಾಗಲಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಎಚ್ಚರಿಸಿದರು.

Advertisement

ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಹಳಷ್ಟು ಶಾಸಕರು ಅಸಮಾಧಾನಗೊಂಡಿದ್ದಾರೆ. ಸ್ವಪಕ್ಷದ ಶಾಸಕರಗೆ ಸಚಿವರು ಗೌರವ ನೀಡುತ್ತಿಲ್ಲವಂದು, ಮತ್ತೆ ಕೆಲ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನವಿದೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಣ ನೀಡುತ್ತಿಲ್ಲ. ಸರ್ಕಾರದ ಐದು ಗ್ಯಾರೆಂಟಿಗಳಿಗೆ ವಾರ್ಷಿಕವಾಗಿ 52 ಸಾವಿರ ಕೋಟಿ ರೂ. ಅಗತ್ಯವಿದ್ದು, ಈ ಹಣ ಹೊಂದಿಸಲು ಅನಗತ್ಯವಾಗಿ ತೆರೆಇಗೆ ಹಾಕಲಾಗುತ್ತಿದೆ.

ಬಿಜೆಪಿ ನಾಯಕ ಬಿ.ಎಲ್.ಸಂತೋಷ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಶಾಸಕರ ಮಾಜಿ ಶಾಸಕರು, ಮುಖಂಡರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 45 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಅವರಿಗೆ ಎಲ್ಲವೂ ಗಮನಕ್ಕೆ ಬಂದಿರುತ್ತದೆ ಎಂದ ಯತ್ನಾಳ, ಸದರಿ ಸಭೆಗೆ ಏನೋ ಗಡಿಬಿಡಿ ಇದೆ ಎಂದು ನಾನು ಮೊದಲೇ ಹೇಳಿ ಬಂದಿದ್ದೇನೆ. ಆದರೆ ಗಡಿಬಿಡಿ ಏನು ಎಂದು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದರು.

ಕ್ರಿಕೆಟ್ ಪ್ರೇಮಿಯಲ್ಲ, ಪಾಕ್ ಸೋಲಲಿ : ವಯಕ್ತಿಕವಾಗಿ ನಾನು ಕ್ರಿಕೆಟ್ ಕ್ರೀಡಾ ಆಸಕ್ತಿ ಇರುವ ವ್ಯಕ್ತಿಯಲ್ಲ. ಕ್ರಿಕೆಟ್ ನೇರ ಪ್ರಸಾರ ಇದ್ದರೂ ನಾನು ಸುದ್ದಿ ವಾಹಿನಿಗಳನ್ನು ವೀಕ್ಷಿಸುತ್ತೇನೆ. ಆದರೆ ಏಷಿಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಗೆಲ್ಲಲೇ ಬೇಕು. ಭಾರತದ ಚಂದ್ರಯಾನಿ ವಿಕ್ರಂ ಲ್ಯಾಂಡರ್‍ನಂತೆ ಕ್ರಿಕೆಟ್‍ನಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಸದಾ ಗೆಲುವು ಸಾಧಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದರು.

ಭಾರತ ಇಸ್ರೋ ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಚಂದ್ರನ ದಕ್ಷಿಣ ಭಾಗದಲ್ಲಿ ವಿಕ್ರಂ ಲ್ಯಾಂಡರ್ ಇಳಿಸಿ ವಿಶ್ವದ ಯಾವ ದೇಶವೂ ಮಾಡದ ಸಾಧನೆ ಮಾಡಿರುವುದು, ಹೆಮ್ಮೆಯ ಸಂಗತಿ. ಸೂರ್ಯ-ಚಂದ್ರರು ಇರುವವರೆಗೂ ಭಾರತ ಎಲ್ಲ ರಂಗದಲ್ಲೂ ವಿಜಯ ಸಾಧಿಸಲಿ ಏಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

Advertisement

ಸರ್ಕಾರಕ್ಕಿಂತ ಅಧಿಕಾರಿಗಳೇ ಬಲಿಷ್ಠ : ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕರ ಕಛೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವಲ್ಲಿ ಅಧಿಕಾರಿಗಳ ಹಿತಾಸಕ್ತಿ ಕೆಲಸ ಮಾಡಿದೆ. ಸರ್ಕಾರಕ್ಕಿಂದ ಅಧಿಕಾರಿಗಳೇ ಪ್ರಭಾವಿಗಳು ಎಂಬುದು ಕಾಂಗ್ರೆಸ್ ಸರ್ಕಾರದಲ್ಲಿ ಸಾಬೀತಾಗಿದೆ ಎಂದು ಶಾಸಕ ಯತ್ನಾಳ ಕಿಡಿ ಕಾರಿದರು.

ಈ ಹಿಂದೆ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಕಾರ್ಯನಿವಾರ್ಹಕ ಅಭಿಯಂತರರ ಕಛೇರಿಯನ್ನು ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಹಾಸನ ಜಿಲ್ಲೆಗೆ ಸ್ಥಳಾಂತರಿಸಿಕೊಂಡರು. ನೈರುತ್ಯ ರೇಲ್ವೇ ಕಚೇರಿ ವಿಚಾರದಲ್ಲೂ ಹೀಗೆ ಆಗಿತ್ತು ಎಂದು ಅಸಮಾಧಾನ ಹೊರ ಹಾಕಿದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಳಗಾವಿಯ ಸುವರ್ಣ ಸೌಧಕ್ಕೆ ಹಲವು ಕಛೇರಿಗಳನ್ನು ಸ್ಥಳಾಂತರಿಸಿದ್ದೆವು. ಕೆಬಿಜೆಎನ್‍ಎಲ್ ಕಛೇರಿ ಸ್ಥಳಾಂತರದ ವಿಷಯಲ್ಲಿ ನ್ಯಾಯಾಲಯವೂ ತರಾಟೆಗೆ ತೆಗೆದುಕೊಂಡಿದೆ. ಬೆಂಗಳೂರಿನ ಆಚೆಗೆ ಹೋಗುವುದು ಬಂದರೆ ಅಧಿಕಾರಿಗಳು ಅರಣ್ಯ ವಾಸಕ್ಕೆ ಹೋದವರಂತೆ ವರ್ತಿಸುತ್ತಾರೆ. ಬೆಂಗಳೂರಿನಲ್ಲಿ ಎಲ್ಲ ಕಡತ ಇರಿಸಿಕೊಂಡು, ನಮ್ಮ ಭಾಗದಲ್ಲಿ ತಾತ್ಕಾಲಿಕ ಕಛೇರಿ ಎಂಬಂತೆ ವರ್ತಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದು ಸರ್ಕಾರಕ್ಕಿಂತ ಅಧಿಕಾರಿಗಳೇ ಬಲಿಷ್ಠರು ಎಂಬುದನ್ನು ತೋರಿಸುತ್ತದೆ. ಅಧಿಕಾರಿಗಳಿಗೆ ಸರ್ಕಾರದ ಭಯವೇ ಇಲ್ಲದಂತಾಗಿದೆ. ನಮ್ಮ ಸರ್ಕಾರ ಇದ್ದಾಗ ಆಲಮಟ್ಟಿಗೆ ಕೆಬಿಜೆಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕರ ಕಛೇರಿಯನ್ನು ವರ್ಗಾಯಿಸಿ, ಆದೇಶಿಸಿತ್ತು. ಆದರೂ ಅಧಿಕಾರಿಗಳು ಸರ್ಕಾರದ ಆದೇಶಕ್ಕೆ ಬೆಲೆ ಕೊಡದೇ ಬೆಂಗಳೂರು ಬಿಟ್ಟು ಕದಲುತ್ತಿಲ್ಲ. ಕಾರಣ ಈ ಭಾಗದ ರೈತರು ಬೆಂಗಳೂರಿಗೆ ಅಲೆಯುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ವೈಫಲ್ಯಗಳ ಕುರಿತು ಸದನದಲ್ಲಿ ಚರ್ಚೆ ಮಾಡುವುದಾಗಿ ಎಚ್ಚರಿಸಿದ ಶಾಸಕ ಯತ್ನಾಳ, ಉತ್ತರ ಕರ್ನಾಟಕದ ಸಚಿವರು ನಮ್ಮ ಭಾಗಕ್ಕೆ ಅನ್ಯಾಯವಾದರೂ ಏನು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಉತ್ತರ ಕರ್ನಾಟಕದ ಬಗ್ಗೆ ಮಾತನಾಡುವ ಇಬ್ಬರು ಧೀಮಂತ ಸಚಿವರಿದ್ದು, ಉತ್ತರ ಕೊಡಲಿ ಎಂದು ಪರೋಕ್ಷವಾಗಿ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಅವರನ್ನು ಕೆಣಕಿದರು.

ಒನ್ ನೇಶನ್‍ಗೆ ಬೆಂಬಲ : ಲೋಕಸಭೆ ಹಾಗೂ ವಿವಿಧ ರಾಜ್ಯಗಳಿಗೆ ಪದೇ ಪದೇ ಸರಣಿ ಚುನಾವಣೆಗಳು ನಡೆಯುವುದರಿಂದ ದೇಶದ ಅಭಿವೃದ್ದಿಗೆ ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ದೇಶ ಒಂದು ಚುನಾವಣೆ ಕಾಯ್ದೆ ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಸಂಸತ್ ವಿಶೇಷ ಅಧಿವೇಶ ಕರೆದಿರುವುದು ಸ್ವಾಗತಾರ್ಹ. ದೇಶದ ಮಟ್ಟಿಗೆ ಇದು ಐತಿಹಾಸಿಕ ನಿಒರ್ಣಯವಾಗಿದ್ದು, ದೇಶದಲ್ಲಿ ಲೋಕಸಭೆ-ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಯುವುದರಿಂದ ಚುನಾವಣೆಗಾಗಿ ವ್ಯಚ್ಚವಾಗುವ ಸಾವಿರಾರು ಕೋಟಿ ಹಣ ದೇಶದ ಸಂಪತ್ತಾಗಿ ಉಳಿತಾಯವಾಗಲಿದೆ ಎಂದರು.

ಲೋಕಸಭಾ ಚುನಾವಣೆಯಿಂದ ಹಿಡಿದು ಗ್ರಾಮ ಪಂಚಾಯತಿ ಚುನಾವಣೆವರೆಗೂ ಚುನಾವಣೆ ನಡೆಯೋ ಸಮದಯಲ್ಲಿ ನೀತಿ ಸಂಹಿತೆ ಕಾರಣದಿಂದ ಒಂದು ತಿಂಗಳು ಕಾಲ ಕೆಲಸ ಸ್ಥಗಿತವಾಗುತ್ತವೆ. ಕಳೆದ ಲೋಕಸಭಾ ಚುನಾವಣೆಗೆ 10 ಸಾವಿರ ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಇದರಲ್ಲಿ 1200 ಕೋಟಿ ರೂ. ಕರ್ನಾಟಕದ ಹಣವೂ ಸೇರಿದೆ. ಇದರಿಂದ ಅಭಿವೃದ್ದಿ ಕಾರ್ಯ ಕುಂಠಿತವಾಗುತ್ತದೆ. ದೇಶದ ಆರ್ಥಿಕ ಸುಸ್ಥಿತಿಗಾಗಿ ಇಂಥ ಕ್ರಮ ಅಗತ್ಯ ಎಂದರು.

ವಕ್ಪ್ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಲಾಗುತ್ತಿದೆ. ದೇಶದಲ್ಲಿ 15000 ಎಕರೆ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಅಭಿವೃದ್ಧಿ ಇಲ್ಲದೇ ಹಣ ಲೂಡಿ ಮಾಡಲಾಗುತ್ತಿದೆ. ಹೀಗಾಗಿ ದೆಹಲಿಯ ಜಾಮೀಯಾ ಮಸೀದಿ ಸೇರಿದಂತೆ 150 ಮಸೀದಿಗಳ ಆಸ್ತಿಯನ್ನು ಹಿಂಪಡೆಯಬೇಕಿದೆ. ಇದಕ್ಕಾಗಿ ವಕ್ಫ್ ಕಾಯ್ದೆ ರದ್ದು ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯೋದಾಗಿ ಹೇಳಿದ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇದನ್ನೂ ಓದಿ: Chikkamagaluru; ಕಾಫಿನಾಡಿನಲ್ಲಿ ತಂಪೆರೆದ ವರುಣ: ರೈತರ ಮೊಗದಲ್ಲಿ ಮಂದಹಾಸ

Advertisement

Udayavani is now on Telegram. Click here to join our channel and stay updated with the latest news.

Next